Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ರೈಲ್ ಒನ್ ಆಪ್ ಮೂಲಕ ಟಿಕೆಟ್ ಬುಕ್ ಮಾಡಿದರೆ ಎಷ್ಟು ರಿಯಾಯಿತಿ ಸಿಗುತ್ತದೆ?
ಪ್ರಮುಖ

ರೈಲ್ ಒನ್ ಆಪ್ ಮೂಲಕ ಟಿಕೆಟ್ ಬುಕ್ ಮಾಡಿದರೆ ಎಷ್ಟು ರಿಯಾಯಿತಿ ಸಿಗುತ್ತದೆ?

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನವದೆಹಲಿ: ರೈಲು ಪ್ರಯಾಣ ದರ ಹೆಚ್ಚಿಸಿ ಶಾಕ್ ನೀಡಿದ್ದ ಭಾರತೀಯ ರೈಲ್ವೆ ಇಲಾಖೆಯು ಇದೀಗ ಟಿಕೆಟ್ ಬುಕ್ಕಿಂಗ್‌ನಲ್ಲಿ ರಿಯಾಯಿತಿ ಘೋಷಿಸುವ ಮೂಲಕ ಪ್ರಯಾಣಿಕರಿಗೆ ಗುಡ್‌ನ್ಯೂಸ್ ನೀಡಿದೆ. ಜನವರಿ 14ರಿಂದ ಟಿಕೆಟ್ ಬುಕ್ಕಿಂಗ್ ರಿಯಾಯಿತಿ ಜಾರಿ ಮಾಡುವುದಾಗಿ ತಿಳಿಸಿದೆ.

ಯಾರಿಗೆಲ್ಲ ಇದು ಅನ್ವಯಿಸುತ್ತದೆ? ಟಿಕೆಟ್ ಖರೀದಿ ಮೇಲೆ ಎಷ್ಟು ಡಿಸ್ಕೌಂಟ್ ಸಿಗಲಿದೆ ಎಂಬ ವಿವರ ಇಲ್ಲಿದೆ.
ರೈಲಿನ ಸೀಟುಗಳನ್ನು ಮುಂಗಡ ರಿಸರ್ವ್ ಮಾಡದೇ ಇರುವ ಟಿಕೆಟ್ ಬುಕಿಂಗ್‌ಗಳಿಗೆ ರಿಯಾಯಿತಿ ನೀಡುವ ಮೂಲಕ ಡಿಜಿಟಲ್ ವಹಿವಾಟು ಹೆಚ್ಚಿಸಲು ರೈಲ್ವೆ ಸಚಿವಾಲಯವು ಪ್ಲಾನ್ ಮಾಡಿದೆ. ಯಾವುದೇ ಡಿಜಿಟಲ್ ಪಾವತಿ ವಿಧಾನದ ಮೂಲಕ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸುವ ಪ್ರಯಾಣಿಕರಿಗೆ ಶೇಕಡಾ ರಷ್ಟು ರಿಯಾಯಿತಿ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ವಿಶೇಷ ಕೊಡುಗೆಯು ಹೊಸ ವರ್ಷ 2026ರ ಜನವರಿ 14ರಿಂದ ಜಾರಿಗೆ ಬರಲಿದೆ.

ಯಾರೆಲ್ಲ ರೈಲ್‌ಒನ್ ಅಪ್ಲಿಕೇಶನ್ ಬಳಸುತ್ತಿದ್ದೀರಿ, ನಿಮಗೆಲ್ಲ ರೈಲ್ವೆ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ. ರಿಸರ್ವ್ ಮಾಡದ ರೈಲು ಟಿಕೆಟ್‌ಗಳನ್ನು ಈ ರೈಲ್‌ಒನ್ ಆಪ್ ಮೂಲಕ ಖರೀದಿಸುವ ಪ್ರಯಾಣಿಕರಿಗೆ ಜನವರಿ 14 ರಿಂದ ಜುಲೈ 14 ರವರೆಗೆ ಶೇಕಡಾ 3 ರಷ್ಟು ರಿಯಾಯಿತಿ ಸಿಗಲಿದೆ. ಈ ಕೊಡುಗೆಯು ರೈಲ್ ಒನ್ ಆಪ್ ಮೂಲಕ ಮಾಡಿದ ಆರ್ ವ್ಯಾಲೆಟ್ ಪಾವತಿಗಳಿಗೆ ಮಾತ್ರ ಅನ್ವಯಿಸುತ್ತದೆ. ರಿಯಾಯಿತಿ ಶೇ.3 ರಷ್ಟು ಕ್ಯಾಶ್‌ಬ್ಯಾಕ್ ಮೂಲಕ ನಿಮಗೆ ಮರಳಿ ಬರಲಿದೆ ಎಂದು ಸಚಿವಾಲವು ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರಕ್ಕೆ (CRIS) ಪತ್ರದಲ್ಲಿ ವಿವರಿಸಲಾಗಿದೆ.

ಪತ್ರದಲ್ಲಿ ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರವು (CRIS) ರಿಯಾಯಿತಿ ವೈಶಿಷ್ಟ್ಯ ಕೊಡುಗೆ ಜಾರಿಗೆ ಬರಬೇಕಾದರೆ ಅಗತ್ಯ ಸಾಫ್ಟ್‌ವೇರ್ ಅಪ್ಡೇಟ್ ಮಾಡಬೇಕಿದೆ. ಈ ಕೆಲಸ ತ್ವರಿತವಾಗಿ ಮುಗಿಸಬೇಕು. ಈ ಕೊಡುಗೆಯಿಂದ ಡಿಜಿಟಲ್ ಬುಕಿಂಗ್ ಪ್ರಮಾಣ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇದೆ. ರೈಲ್‌ಒನ್ ಅಪ್ಲಿಕೇಶನ್‌ನಲ್ಲಿ ಡಿಜಿಟಲ್ ಪಾವತಿ ವಿಧಾನಗಳಡಿ ಟಿಕೆಟ್ ಬುಕ್ ಮಾಡಿ ಈ ರಿಯಾಯಿತಿಯ ಲಾಭ ಪಡೆದುಕೊಳ್ಳಬಹುದೆಂದು ತಿಳಿಸಲಾಗಿದೆ. ಈ ಕೊಡುಗೆ ಪ್ರಸ್ತಾವನೆ ಬಗ್ಗೆ ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರವು (CRIS) ಮತ್ತಷ್ಟು ಮಾಹಿತಿ ನೀಡಲಿದೆ.

ರೈಲ್ ಒನ್ ಆಪ್‌ ಬಳಕೆ ಸಹ ಹೆಚ್ಚಳ
ಈ ಪ್ರಯೋಜನವು ರೈಲ್‌ಒನ್ ಅಪ್ಲಿಕೇಶನ್‌ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ರೈಲು ಅಧಿಕಾರಿಗಳು ಒತ್ತಿ ಹೇಳಿದ್ದಾರೆ. ಇದರಿಂದ ಡಿಜಿಟಲ್ ಬುಕ್ಕಿಂಗ್ ಹೆಚ್ಚಳ ಜೊತೆಗೆ ಎಲ್ಲ ರೈಲು ಲೈವ್ ಲೋಕೆಷನ್, ರೈಲಿನ ಸ್ಟೇಟಸ್, ಸಮಯ, ಬುಕ್ಕಿಂಗ್, ಟಿಕೆಟ್ ರದ್ದು, ಹಣ ವಾಪಸಾತಿ ಸೇರಿದಂತೆ ಹಲವು ಪ್ರಯೋಜನಗಳನ್ನು ಒಂದೇ ವೇದಿಕೆಯಡಿ ನೀಡುವ ರೈಲ್ ಒನ್ ಆಪ್ ಸಹ ಹೆಚ್ಚು ಬಳಕೆಯಾಗಲಿದೆ. ಈ ಆಪ್ ಬಳಕೆದಾರರನ್ನು ಬಿಟ್ಟರೆ ಇತರ ಆನ್‌ಲೈನ್ ವೇದಿಕೆಗಳ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ಈ ರಿಯಾಯಿತಿ ಕೊಡುಗೆ ಅನ್ವಯ ಆಗದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲು ಉತ್ಪಾದನೆ, ಮೂಲಸೌಕರ್ಯ ಹೆಚ್ಚಳ
ಭಾರತೀಯ ರೈಲ್ವೆ ಇಲಾಖೆಯು ಮುಂಬರುವ ವರ್ಷಗಳಲ್ಲಿ ರೈಲುಗಳ ಮೂಲ ಸಾಮರ್ಥ್ಯ ಹೆಚ್ಚಿಸುವ ಚಿಂತನೆಯಲ್ಲಿದೆ. 2030ರ ವೇಳೆಗೆ ಹೊಸ ರೈಲುಗಳನ್ನು ಉತ್ಪಾದಿಸುವ ಪ್ರಮಾಣ ಹೆಚ್ಚಾಗಲಿದೆ. ಜೊತೆಗೆ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ಪ್ರಸ್ತುತ ಮೂಲ ಸೌಕರ್ಯ ಸೇವೆಯನ್ನು ಬಲಪಡಿಸುವುದಾಗಿ ಸಚಿವಾಲಯ ಇತ್ತೀಚೆಗೆ ಘೋಷಿಸಿತ್ತು. ಇದೆಲ್ಲ ನೋಡಿದರೆ ಮುಂದಿನ ಐದು ವರ್ಷ ದೇಶದ ರೈಲು ಜಾಲದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುವ ಮುನ್ಸೂಚನೆ ಸಿಕ್ಕಿದೆ.

ಕೇಂದ್ರ ಸರ್ಕಾರ ಈಗಾಗಲೇ ಪ್ರಸ್ತುತ ರೈಲ್ವೆ ಟರ್ಮಿನಲ್‌ಗಳನ್ನು ವಿಸ್ತರಿಸುತ್ತಿದೆ. ಪ್ಲಾಟ್‌ಫಾರ್ಮ್‌ಗಳ ಸಂಖ್ಯೆ ಹೆಚ್ಚಿಸುತ್ತಿದೆ. ನಗರ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಹೊಸ ಟರ್ಮಿನಲ್‌ಗಳನ್ನು ನಿರ್ಮಿಸಲು ಮುಂದಾಗಿದೆ. ಅದರ ಭಾಗವಾಗಿ ಬೆಂಗಳೂರಿನ ಯಲಹಂಕ ಬಳಿ ಚೀನಾ ಮಾದರಿಯಲ್ಲಿ ಹೊಸ ರೈಲ್ವೆ ಟರ್ಮಿನಲ್ ಗುರುತಿಸಲಾಗಿದೆ. ಅದೇ ರೀತಿ ದೇಶದ ನಾನಾ ಕಡೆಗಳಲ್ಲಿ ಟರ್ಮಿನಲ್ ಸ್ಥಾಪನೆ, ಮೆಗಾ ಕೋಚಿಂಗ್ ಸಂಕೀರ್ಣಗಳು ಸೇರಿದಂತೆ ನಿರ್ವಹಣಾ ಸೌಲಭ್ಯಗಳನ್ನು ನಿರ್ಮಿಸಲು ಮುಂದಾಗಿದೆ. ಈ ಮೂಲಕ ರೈಲುಗಳ ಮೂಲ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ.

ಏಯ್, ಬೆನ್ನುಮೂಳೆ ಇಲ್ಲದವನೇ ಅಖಾಡಕ್ಕೆ ಬಾರೋ: ಕೆರಳಿ ಕೆಂಡವಾದ ಅಶ್ವಿನಿ ಗೌಡ

TAGGED:How much discount do I get if I book a ticket through the Rail One app?
Share This Article
Facebook Twitter Copy Link Print
Previous Article ನ್ಯೂ ಇಯರ್ ಗೆ ಕರ್ನಾಟಕದಾದ್ಯಂತ ಕಟ್ಟೆಚ್ಚರ; ಯಾವುದೆಲ್ಲ ಓಪನ್?
Next Article ಕ್ರೋಕ್ಸ್ ಚಪ್ಪಲಿಗಳನ್ನು ಧರಿಸುವುದರಿಂದ ಮಕ್ಕಳಿಗೆ ಅಪಾಯಕಾರಿ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಪ್ರಮುಖ

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read
ವಿದೇಶSportsಪ್ರಮುಖ

Fifa World Cup 2026: ಮೂರನೇ ಸ್ಥಾನಕ್ಕಾಗಿ ನಡೆದ ಗೋಲ್‌ಗಳ ಮಳೆಯ ಕಾದಾಟದಲ್ಲಿ ಫ್ರಾನ್ಸ್ ವಿರುದ್ಧ ಇಂಗ್ಲೆಂಡ್‌ಗೆ 6-4 ಭರ್ಜರಿ ಜಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?