Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Yearly Horoscope ವರ್ಷದ ರಾಶಿ ಭವಿಷ್ಯ 2026: ಮೇಷ- ಸಾಲ ಮಾಡುವುದರಲ್ಲೇ ಖುಷಿ
ಜ್ಯೋತಿಷ್ಯಪಂಚಾಂಗಪ್ರಮುಖವಾರ ಭವಿಷ್ಯ

Yearly Horoscope ವರ್ಷದ ರಾಶಿ ಭವಿಷ್ಯ 2026: ಮೇಷ- ಸಾಲ ಮಾಡುವುದರಲ್ಲೇ ಖುಷಿ

Share
4 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada

newsics.com

ವರ್ಷದ ರಾಶಿ ಭವಿಷ್ಯ 2026

Yearly Horoscope for 2026

2026 ಇಡೀ ವರ್ಷ ಶನಿ ಗ್ರಹವು ಮೀನ ರಾಶಿಯಲ್ಲಿಯೇ ಇರಲಿದೆ. ಇನ್ನು 2026ನೇ ಇಸವಿಯ ಜನವರಿ 1ನೇ ತಾರೀಕಿನಿಂದ ಜೂನ್ 1ನೇ ತಾರೀಕಿನವರೆಗೆ ಮಿಥುನ ರಾಶಿಯಲ್ಲಿ ಗುರು ಗ್ರಹ ಸಂಚಾರ ಮಾಡುತ್ತದೆ. ನಂತರದಲ್ಲಿ ಅಕ್ಟೋಬರ್ 31ನೇ ತಾರೀಕಿನಂದು ಸಿಂಹ ರಾಶಿಯನ್ನು ಪ್ರವೇಶಿಸುವ ಬೃಹಸ್ಪತಿಯು ವರ್ಷದ ಕೊನೆಯವರೆಗೆ ಅಂದರೆ ಡಿಸೆಂಬರ್ 31ನೇ ತಾರೀಕಿನವರೆಗೆ ಸಿಂಹದಲ್ಲಿಯೇ ಇರಲಿದೆ. ಇನ್ನು ರಾಹು- ಕೇತು ಗ್ರಹಗಳು ಡಿಸೆಂಬರ್ 5ನೇ ತಾರೀಕಿನವರೆಗೆ ಕ್ರಮವಾಗಿ ಸಿಂಹ ಮತ್ತು ಕುಂಭ ರಾಶಿಯಲ್ಲಿ ಇರಲಿದ್ದು, ನಂತರ ಮಕರಕ್ಕೆ ರಾಹು ಹಾಗೂ ಕರ್ಕಾಟಕ ರಾಶಿಗೆ ಕೇತು ಗ್ರಹದ ಪ್ರವೇಶ ಆಗುತ್ತದೆ.

ಸಾಮಾನ್ಯವಾಗಿ ಶನಿ ಗ್ರಹ ಒಂದು ರಾಶಿಯಲ್ಲಿ ಮೂವತ್ತು ತಿಂಗಳು, ಎರಡೂವರೆ ವರ್ಷ ಇರುತ್ತದೆ. ಗುರು ಗ್ರಹ ಒಂದು ವರ್ಷ ಹಾಗೂ ರಾಹು- ಕೇತುಗಳು ಹದಿನೆಂಟು ತಿಂಗಳು, ಒಂದೂವರೆ ವರ್ಷ ಒಂದು ರಾಶಿಯಲ್ಲಿ ಸಂಚರಿಸಲಿವೆ. ಗುರು ಗ್ರಹವು ಈ ಬಾರಿ ಅತಿಚಾರ ಸಂಚಾರ, ಅಂದರೆ ಅದರ ಸಾಮಾನ್ಯ ಸಂಚಾರ ವೇಗಕ್ಕಿಂತ ಹೆಚ್ಚು ವೇಗವಾಗಿ ಸಿಂಹ ರಾಶಿಯನ್ನು ಪ್ರವೇಶ ಮಾಡಲಿದೆ. ಅಲ್ಲಿಗೆ ಗುರು ಗ್ರಹ ಐದೞ ನಂತರದ ಐದು ತಿಂಗಳು ಉಚ್ಚ ಸ್ಥಿತಿಯ ಕರ್ಕಾಟಕದಲ್ಲಿ, ಎರಡು ತಿಂಗಳು ಸಿಂಹ ರಾಶಿಯಲ್ಲಿ ಸಂಚರಿಸುತ್ತದೆ.

=========

ಮೇಷ

ಶನಿ ಗ್ರಹ ಗೋಚಾರ

ಅಶ್ವಿನಿ ನಕ್ಷತ್ರದ ಒಂದು, ಭವಿಷ್ಯದಲ್ಲಿ, ಮೂರು ಹಾಗೂ ನಾಲ್ಕನೇ ಪಾದ, ಭರಣಿ ನಕ್ಷತ್ರದ ನಾಲ್ಕೂ ಪಾದ ಹಾಗೂ ಕೃತ್ತಿಕಾ ನಕ್ಷತ್ರ ಒಂದನೇ ಪಾದ ಸೇರಿ ಮೇಷ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಕುಜ, ಈ ರಾಶಿಯಲ್ಲಿ ರವಿ ಗ್ರಹ ಉಚ್ಚ ಸ್ಥಿತಿಯಲ್ಲಿ ಮತ್ತು ಶನಿ ಗ್ರಹ ನೀಚ ಸ್ಥಿತಿಯಲ್ಲೂ ಇರುತ್ತದೆ.

ವರ್ಷವಿಡೀ ನಿಮಗೆ ವ್ಯಯ ಸ್ಥಾನದಲ್ಲಿಯೇ ಶನೈಶ್ಚರನ ಸಂಚಾರ ಇರುತ್ತದೆ. ಆದ್ದರಿಂದ ಸಾಲವನ್ನು ಹೆಚ್ಚೆಚ್ಚು ಮಾಡುತ್ತೀರಿ. ಅದರಲ್ಲೂ ವ್ಯಾಪಾರ- ವ್ಯವಹಾರ, ಹೂಡಿಕೆ ಇಂಥವುಗಳಿಗೆ ಸಾಲ ಮಾಡಿ ಹಣ ತಂದು ಹಾಕುತ್ತೀರಿ. ಜನ್ಮ ಜಾತಕದಲ್ಲಿ ಅದ್ಭುತ ಯೋಗಗಳು ಇದ್ದು, ಶನಿ ಗ್ರಹವೂ ಅತ್ಯುತ್ತಮ ಸ್ಥಾನದಲ್ಲಿದ್ದು, ದಶಾ- ಭುಕ್ತಿಯೂ ಅನುಕೂಲಕರವಾಗಿ ಇದ್ದಲ್ಲಿ ಮಾತ್ರ ವ್ಯಾಪಾರ- ವ್ಯವಹಾರಗಳು ಬರಕತ್ತಾಗುತ್ತವೆ. ಆದರೆ ನಷ್ಟದ ಸಾಧ್ಯತೆಯೇ ಹೆಚ್ಚು. ಉದ್ಯೋಗದಲ್ಲಿಯಂತೂ ನೆಮ್ಮದಿ ಕಳೆದುಕೊಳ್ಳುವಂತೆ ಆಗಲಿದೆ. ನಿಮಗೆ ಭಾವನಾತ್ಮಕವಾಗಿ ಬಹಳ ಹತ್ತಿರವಾದಂಥ ವ್ಯಕ್ತಿಗಳು ದೂರವಾಗಬಹುದು. ಹೇಗಾದರೂ ಹಣ ಉಳಿಸುವ- ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವು ಕಾನೂನು ತೊಡಕುಗಳನ್ನು ನೀವಾಗಿಯೇ ಮೈ ಮೇಲೆ ಎಳೆದುಕೊಳ್ಳುವಂತೆ ಆಗಲಿದೆ. ವೈವಾಹಿಕ ಜೀವನದಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಬಹಳ ಮುಖ್ಯ. ವಿವಾಹದ ಆಚೆಗಿನ ಸಂಬಂಧದ ಕಡೆಗೆ ಸೆಳೆತ ಏರ್ಪಡಬಹುದು. ಆದರೆ ಅಂಥವುಗಳಿಂದ ಕಡ್ಡಾಯವಾಗಿ ದೂರ ಇರಿ. ನಿಮ್ಮಲ್ಲಿ ಕೆಲವರು ಸ್ನೇಹ- ಸಲುಗೆಯಿಂದ ಇರುವುದು ಸಹ ನಾನಾ ಬಗೆಯಲ್ಲಿ ಸಮಸ್ಯೆ ತಂದೊಡ್ಡಬಹುದು. ನಿಮಗೆ ಸಂಬಂಧ ಪಡದ ವಿಚಾರದಲ್ಲಿ ತಲೆ ಹಾಕಬೇಡಿ. ಉದ್ಯೋಗ- ವ್ಯವಹಾರ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸುವುದಕ್ಕೆ ಹೋಗಬೇಡಿ. ಬೆನ್ನು ನೋವು, ಕಾಲು ನೋವು, ಹೃದಯಕ್ಕೆ ಸಂಬಂಧಿಸಿದ ಆರೋಗ್ಯದ ಕಡೆಗೆ ಹೆಚ್ಚು ನಿಗಾ ಮಾಡಬೇಕು.

ಗುರು ಗ್ರಹ ಗೋಚಾರ

ಜೂನ್ ತಿಂಗಳ ಶುರುವಿನ ತನಕ ಸಹೋದರ- ಸಹೋದರಿಯರ ಜತೆಗಿನ ಮನಸ್ತಾಪ- ಬೇಸರ, ವಾದ- ವಾಗ್ವಾದಗಳು ಹೆಚ್ಚಾಗುತ್ತವೆ. ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಸಾಧ್ಯವಾದಷ್ಟೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ವರ್ಚಸ್ಸು ಹಾಗೂ ಇತರರಿಗೆ ನಿಮ್ಮ ಬಗ್ಗೆ ಇರುವ ಗೌರವ ಉಳಿಸಿಕೊಳ್ಳಲು ಆದ್ಯತೆ ನೀಡಿ. ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಎಂಬ ಕಾರಣಕ್ಕೆ ವಿವಾದಗಳನ್ನು ನೀವಾಗಿಯೇ ಸೃಷ್ಟಿಸುವುದಕ್ಕೆ ಹೋಗಬೇಡಿ. ಅದೇ ವೇಳೆ ಇತರರನ್ನು ಮೆಚ್ಚಿಸುವುದಕ್ಕೋ ಓಲೈಸುವುದಕ್ಕೋ ಅಥವಾ ಪ್ರತಿಷ್ಠೆ ಕಾರಣಕ್ಕೋ ವಿಪರೀತ ಸಾಲ ಮಾಡಿ, ವಿಲಾಸಿ ವಸ್ತುಗಳ ಖರೀದಿ ಮಾಡುವುದಕ್ಕೆ ಮುಂದಾಗಬೇಡಿ. ಜೂನ್ ನಂತರ ಅಕ್ಟೋಬರ್ ಕೊನೆವರೆಗೆ ಕಾರು, ಬೈಕ್- ಸ್ಕೂಟರ್, ಸೈಟು- ಅಪಾರ್ಟ್ ಮೆಂಟ್, ಮನೆ ಹೀಗೆ ಒಂದಲ್ಲಾ ಒಂದು ಖರೀದಿಗಾಗಿ ಹಣ ಖರ್ಚು ಮಾಡುವ, ಅದರಲ್ಲೂ ಸಾಲಗಾರರಾಗುವ ಯೋಗ ಇದೆ. ಸ್ನೇಹಿತರ ಜತೆ ವ್ಯವಹಾರ ಮಾಡುತ್ತೀರಿ ಎಂದಾದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳಿ. ಇತರರಿಗೆ ಜೋರು ಮಾಡಿ, ಬಾಯಿ ಮುಚ್ಚಿಸಿದರೆ ಆಯಿತು ಎಂಬ ಧೋರಣೆ ಬೇಡ. ನವೆಂಬರ್- ಡಿಸೆಂಬರ್ ಎರಡು ತಿಂಗಳು ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಆದಾಯದಲ್ಲಿ ಹೆಚ್ಚಳ, ಹಣಕಾಸಿನ ಹರಿವು ಸರಾಗವಾಗಿ ಆಗುವುದು ಮೊದಲಾದ ಶುಭ ಫಲಗಳನ್ನು ಕಾಣುತ್ತೀರಿ.

ರಾಹು-ಕೇತು ಗೋಚಾರ

ಬಹುತೇಕ ಇಡೀ ವರ್ಷ ರಾಹು ಗ್ರಹ ನಿಮ್ಮ ರಾಶಿಯ ಹನ್ನೊಂದನೇ ಮನೆಯಲ್ಲಿ, ಕೇತು ಗ್ರಹ ಐದನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಭೂಮಿಗೆ ಸಂಬಂಧಿಸಿದಂತೆ ಪಾರ್ಟನರ್‌ಶಿಪ್ ವ್ಯವಹಾರ ಮಾಡಿದಲ್ಲಿ ಅಥವಾ ಈಗಾಗಲೇ ಮಾಡಿದ್ದಲ್ಲಿ ಲಾಭದಾಯಕ ಆಗಲಿದೆ. ನಿಮ್ಮಲ್ಲಿ ಕೆಲವರು ವಿದೇಶಕ್ಕೆ ತಾತ್ಕಾಲಿಕವಾಗಿ ತೆರಳುವ ಯೋಗ ಇದೆ. ಇದರಿಂದ ಕೆಲವರಿಗೆ ಸ್ವಲ್ಪ ಪ್ರಮಾಣದಲ್ಲಿ ಸಾಲ ತೀರುವಂಥ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿರುವವರು ವಿಪರೀತು ಆಸೆಗೆ ಬೀಳಬಾರದು. ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಳ್ಳಬಹುದೇ ವಿನಾ ಸಾಲ ತಂದು ಹಣ ಹಾಕುವುದಂತೂ ಖಂಡಿತಾ ಮಾಡಬಾರದು. ಮಕ್ಕಳ ಆರೋಗ್ಯ, ಶಿಕ್ಷಣ, ಮದುವೆ ಮೊದಲಾದ ವಿಚಾರದಲ್ಲಿ ಹೆಚ್ಚಿನ ನಿಗಾ ಮಾಡಬೇಕು. ಒಂದು ವೇಳೆ ಮೇಷ ರಾಶಿಯ ಹೆಣ್ಣುಮಕ್ಕಳು ಗರ್ಭ ಧರಿಸಿದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು. ವಿದ್ಯಾರ್ಥಿಗಳಿಗೆ ನಿರಾಸಕ್ತಿ, ಮರೆವಿನ ಸಮಸ್ಯೆ ವಿಪರೀತ ಕಾಡಲಿದೆ. ಮಾನಸಿಕ ಖಿನ್ನತೆಯಿಂದ ಈಗಾಗಲೇ ಬಳಲುತ್ತಾ ಇರುವವರಿಗೆ ಅದು ಇನ್ನೂ ಉಲ್ಬಣ ಆಗಲಿದೆ. ಈ ಹಿಂದೆ ನೀವು ಮಾಡಿದ್ದ ಕೆಲಸವೋ ವ್ಯವಹಾರವೋ ವ್ಯಾಪಾರವೋ ಅಥವಾ ಉದ್ಯೋಗದಲ್ಲಿಯೋ ನಿಮ್ಮಿಂದ ಸಮಸ್ಯೆಯಾಗಿದೆ ಎಂಬ ಆರೋಪ ಬಂದು, ಕಾನೂನು- ಕೋರ್ಟ್- ಕಟಕಟೆ ಎಂದು ಅಲೆದಾಡುವಂತೆ ಆಗಬಹುದು. ಎಚ್ಚರಿಕೆಯಲ್ಲಿರಿ.

ನಿರೀಕ್ಷಿಸಿ:

ವೃಷಭ ರಾಶಿಯ 2026 ಮುನ್ನೋಟ

TAGGED:Horoscope 2026: Aries - Happiness lies in taking loans
Share This Article
Facebook Twitter Copy Link Print
Previous Article ಗುರು ಸುಧೀಂದ್ರ ಕಾಲೇಜು ವಿದ್ಯಾರ್ಥಿನಿ ರಶ್ಮಿಯ ಕನಸೆಲ್ಲ ನುಚ್ಚುನೂರು…
Next Article   ಸ್ವಂತ ಕಾರಿಗೆ ಪೊಲೀಸ್ ಎಂದು ಬೋರ್ಡ್ ಹಾಕಿಕೊಂಡು ಫ್ಯಾಮಿಲಿ ಜತೆ ಪ್ರವಾಸ ಹೊರಟಿದ್ದ ಪೊಲೀಸಪ್ಪನಿಗೆ ದಂಡ ವಿಧಿಸಿದ ಲೇಡಿ ಸಿಂಗಂ!

Popular Posts

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

You Might Also Like

ಕರ್ನಾಟಕಪ್ರಮುಖ

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read
ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read
ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?