Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ಬಾಸ್ ಸೀಸನ್ 12ಕ್ಕೆ ಅತಿಥಿಗಳಾಗಿ ಪ್ರವೇಶಿಸಿದ್ದ ರಜತ್ ಮತ್ತು ಚೈತ್ರಾ ಕುಂದಾಪುರ ಇದೀಗ ಮನೆಯಿಂದ ಹೊರಬಂದಿದ್ದಾರೆ.ಇದೀಗ ಇವರಿಬ್ಬರೂ ಹೊರಕ್ಕೆ ಬಂದಿರುವ ಕಾರಣದಿಂದ ಇವರು ಅತಿಥಿಗಳಾಗಿ ಹೋಗಿದ್ದರು ಎನ್ನುವುದು ಸ್ಪಷ್ಟವಾಗಿದೆ. ಆದರೂ ಇವರಿಬ್ಬರನ್ನೇ ಏಕೆ ಇಷ್ಟು ದಿನ ಇಟ್ಟುಕೊಂಡಿದ್ದರು ಎನ್ನುವುದು ಕೂಡ ಬಹಳ ಚರ್ಚೆಯಾಗುತ್ತಿದೆ.
ಎರಡನೆಯ ಬಾರಿhl ಬಿಗ್ಬಾಸ್ ಮನೆ ಪ್ರವೇಶ ಮಾಡಿರುವ ಕುರಿತಂತೆ ಅವರು ಮಾಧ್ಯಮಗಳ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಬಿಗ್ಬಾಸ್ನಲ್ಲಿ ಆಟವಾಡುವಾಗ ಹೇಗೆ ಯಾವ ರೀತಿ ಸಿಚುಯೇಷನ್ ಬರುತ್ತದೆಯೋ ಗೊತ್ತಾಗಲ್ಲ. ಯಾರು ನಮ್ಮ ಜೊತೆ ಜಗಳಕ್ಕೆ ಬಂದರೆ ಅವರ ಜೊತೆ ಜಗಳ ಆಡಲೇಬೇಕಾಗುತ್ತದೆ. ಆದ್ದರಿಂದ ಅಶ್ವಿನಿ ಗೌಡ ಅವರನ್ನು ಟಾರ್ಗೆಟ್ ಮಾಡಿ ನನ್ನನ್ನು ಕಳುಹಿಸಿದ್ದರು ಎನ್ನುವುದು ತಪ್ಪು ಎಂದಿದ್ದಾರೆ.
ಯಾರನ್ನೂ ಯಾರಿಗೋ ಠಕ್ಕರ್ ಕೊಡುವುದಕ್ಕೆ ಕಳುಹಿಸುವುದಿಲ್ಲ. ಆದರೆ ಮನೆಗೆ ಎನರ್ಜಿ ಕೊಡಬೇಕು, ಯಾರು ಇದನ್ನು ಕೊಡಲು ಶಕ್ಯರು ಎಂದು ನೋಡಿ ಕಳುಹಿಸುತ್ತಾರೆ. ಅದೇ ಕಾರಣಕ್ಕೆ ಬಿಗ್ಬಾಸ್ನ ಮನೆಗೆ ಇನ್ನಷ್ಟು ಎನರ್ಜಿ ತುಂಬಲು ನನ್ನನ್ನು ಕಳುಹಿಸಿದ್ದಿರಬಹುದೇ ವಿನಾ ಯಾರನ್ನೂ ಟಾರ್ಗೆಟ್ ಆಗಿ ಮಾಡಿಕೊಂಡು ಅಲ್ಲ ಎಂದು ಹೇಳಿದ್ದಾರೆ.
https://www.newsics.com/2025/12/23/why-is-there-a-red-line-on-the-pill-packet/