newsics.com
ಬೆಂಗಳೂರು: ಕನ್ನಡ ಭಾಷಾ ಶ್ರೀಮಂತಿಕೆಯ ರಾಯಭಾರಿಯಂತಿದ್ದ ಅಪರ್ಣಾ ಆಪ್ತರೆಲ್ಲ ಅವರನ್ನು ನೆನಪಿಸಿಕೊಳ್ಳಲು ವಿಭಿನ್ನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ.
ಅಗಸ್ಟ್ 4 ರಂದು ಅಪರ್ಣಾ ನಾದಾರ್ಪಣೆ (Aparna Nadarpane) ಮೂಲಕ ಕನ್ನಡದ ಕುವರಿಗೆ ಸಂಗೀತ ನಮನ ಸಲ್ಲಲಿದೆ.
ಬೆಂಗಳೂರಿನ ಬನಶಂಕರಿ 2ನೇ ಹಂತದ BNMIT institute of technology ಆಡಿಟೋರಿಯಂ ನಲ್ಲಿ ಅಪರ್ಣಾ ನಾದಾರ್ಪಣೆ, ನಾದ-ಭಾವ- ನಮನ ಕಾರ್ಯಕ್ರಮ ಅಯೋಜಿಸಲಾಗಿದೆ.
ವೀಣಾ ವಾರುಣಿ ಕಲ್ಚರಲ್ ಫೌಂಡೇಶನ್, ಬಿಎನ್ಎಮ್ಆಯ್ಟಿ ಹಾಗೂ ಸಾರ್ಯ ಕ್ರಿಯೇಷನ್ಸ್ ಸಹಯೋಗದಲ್ಲಿ ನಡೆಯಲಿರೋ ಕಾರ್ಯಕ್ರಮದಲ್ಲಿ ಅಪರ್ಣಾ ವಸ್ತಾರೆಯವರ ಪತಿ ಹಾಗೂ ಸಾಹಿತಿ, ಆರ್ಕಿಟೆಕ್ಟ್ ನಾಗರಾಜ್ ವಸ್ತಾರೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.