Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ತರಕಾರಿ ಖರೀದಿಸಲು ರೈಲು ಎಂಜಿನ್ ಅನ್ನು ಸಿಗ್ನಲ್ನಲ್ಲಿ ನಿಲ್ಲಿಸಿರುವುದನ್ನು ತೋರಿಸುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಖೈರಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಟಪ್ಪಾ ಖಜುರಿಯಾ ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದೆ.
ಅದನ್ನೇನು ಬಸ್, ಕಾರು ಎಂದುಕೊಂಡಿದ್ದಾರಾ? ಅದು ಹೇಗೆ ಸಿಕ್ಕ ಕಡೆಗೆಲ್ಲ ನಿಲ್ಲಿಸಿ ಹೋಗುತ್ತಾರೆ? ಎಂದು ನೆಟ್ಟಿಗರು ಈ ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಪ್ರಯಾಣಿಕರು ಇಡೀ ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.