Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮುಂಬೈ: ಮಹಾರಾಷ್ಟ್ರದ ಚಂದ್ರಾಪುರ- ಮುಲ್ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹುಲಿಯೊಂದು ಮಲಗಿದ್ದು,ಅರ್ಧ ಗಂಟೆ ಚಂದ್ರಾಪುರ ಹೆದ್ದಾರಿ ಬಂದ್ ಆಗಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ-ಮುಲ್ ರಾಷ್ಟ್ರೀಯ ಹೆದ್ದಾರಿ 930ರಲ್ಲಿ ನಡೆದಿದೆ.
ಮಾಮಾ ಮೆಲ್ ಎಂಬ ಈ ಹುಲಿ ತನ್ನ ದಿಟ್ಟ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೂ ಅವುಗಳ ಶಬ್ದ, ಜನರ ಗಲಾಟೆಯ ಬಗ್ಗೆ ತಲೆಕೆಡಿಸಿಕೊಳ್ಳದ ಈ ಹುಲಿ ತನ್ನಷ್ಟಕ್ಕೆ ತಾನು ಆರಾಮಾಗಿ ರಸ್ತೆಯ ಮಧ್ಯೆ ಮಲಗಿತ್ತು. ಈ ಹುಲಿ ಹೆದ್ದಾರಿಯ ಸಮೀಪದಲ್ಲಿ ಎರಡು ಎತ್ತುಗಳನ್ನು ಬೇಟೆಯಾಡಿತ್ತು. ಬೇಟೆಯಾಡಿದ ನಂತರ ಆ ಪ್ರದೇಶದಲ್ಲಿ ಸುತ್ತಾಡುತ್ತಿತ್ತು. ಬಳಿಕ ಹೆದ್ದಾರಿಯ ಮಧ್ಯದಲ್ಲಿ ವಿಶ್ರಾಂತಿ ಪಡೆಯಲು ಕುಳಿತಿತು.
ಹುಲಿ ರಸ್ತೆಯ ಮಧ್ಯದಲ್ಲಿ ಶಾಂತವಾಗಿ ಕುಳಿತಿದ್ದರಿಂದ, ಚಂದ್ರಾಪುರದಿಂದ ಮುಲ್ಗೆ ಮತ್ತು ಮುಲ್ನಿಂದ ಚಂದ್ರಾಪುರಕ್ಕೆ ಹೋಗುವ ವಾಹನಗಳು ಎರಡೂ ಬದಿಗಳಲ್ಲಿ ನಿಂತವು. ಸುಮಾರು ಅರ್ಧ ಗಂಟೆಗಳ ಕಾಲ ಸಂಚಾರವನ್ನು ನಿಲ್ಲಿಸಬೇಕಾಯಿತು.