Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ವಾರ ಭವಿಷ್ಯ > ವಾರ ಭವಿಷ್ಯ 28-07-2024 — 03-08-2024 ಮಿಥುನ- ಅಶುಭ ಫಲ ಅಧಿಕ, ಮಕರ- ಶಿವನಿಗೆ ಬಿಲ್ವಾರ್ಚನೆ ಮಾಡಿ, ಈ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ?
ಪಂಚಾಂಗವಾರ ಭವಿಷ್ಯ

ವಾರ ಭವಿಷ್ಯ 28-07-2024 — 03-08-2024 ಮಿಥುನ- ಅಶುಭ ಫಲ ಅಧಿಕ, ಮಕರ- ಶಿವನಿಗೆ ಬಿಲ್ವಾರ್ಚನೆ ಮಾಡಿ, ಈ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ?

Share
5 Min Read
SHARE

newsics.com
ವಾರ ಭವಿಷ್ಯ
2024 ಜುಲೈ 28 ರಿಂದ ಆಗಸ್ಟ್ 3

ಈ ವಾರ ರಾಶಿಗಳಲ್ಲಿ ಗ್ರಹಗಳ ಪರಿವರ್ತನೆ ಇರಲಿದೆ. ಸಣ್ಣ ಬದಲಾವಣೆಯೂ ದೊಡ್ಡ ಪರಿವರ್ತನೆ ತರುವುದು. ಅದಕ್ಕೆ ತಕ್ಕ ಸೂಚನೆಯೂ ನಿಮ್ಮ ಸುತ್ತ ನಡೆಯಲಿದೆ. ಅದನ್ನು ಗಮನಿಸಿ ಮುಂದುವರಿದರೆ ಪಡೆಯಬೇಕಾದ ಫಲ, ತೊಂದರೆಯಿಂದ ಪರಿಹಾರ ಸಾಧ್ಯ.‌

ಮೇಷ
ಈ ವಾರದಲ್ಲಿ ಶುಭಫಲವಿದೆ. ರಾಶಿ ಅಧಿಪತಿಯೂ, ಅಷ್ಟಮದ ಅಧಿಪನೂ ಆದ ಕುಜನು ದ್ವಿತೀಯದಲ್ಲಿ ಮಿತ್ರರ ಜತೆ ಇದ್ದಾನೆ. ಸಂಪತ್ತು ಹಾಗೂ ದೈಹಿಕವಾದ ಆಪತ್ತು ಇರದು. ಗುರುವು ದ್ವಿತೀಯದಲ್ಲಿ ಇದ್ದಾನೆ. ಸಂಪತ್ತನ್ನು ಕುಟುಂಬದ ಕಡೆಯಿಂದ ಬರುವುದು ಅಥವಾ ಅವಶ್ಯಕತೆ ಇದ್ದರೆ ಪಡೆಯಲೂಬಹುದು. ಶನಿಯು ಉಚ್ಚ ಸ್ಥಾನದಲ್ಲಿ ಏಕಾದಶದಲ್ಲಿ ಇರುವ ಕಾರಣ ಶ್ರಮಕ್ಕೆ ಯೋಗ್ಯ ಸಂಪತ್ತು ಸಿಗಲಿದೆ. ದ್ವಾದಶದಲ್ಲಿ ರಾಹುವು ಕೆಟ್ಟ ಕಾರ್ಯಗಳಿಗೆ ಪ್ರೇರೇಪಿಸುವನು. ಅವಿವಾಹಿತರಿಗೆ ಕುಟುಂಬದ ಕಡೆಯಿಂದ ಸಂಗಾತಿಯ ಹುಡುಕಾಟ ನಡೆಯಲಿದೆ. ಕಾರ್ತಿಕೇಯನ ಸ್ಮರಣೆ ಮಾಡಿ.

ವೃಷಭ
ಈ ವಾರ ಮಿಶ್ರ ಫಲವಿದೆ. ರಾಶಿಯ ಅಧಿಪತಿಯು ಚತುರ್ಥದಲ್ಲಿ ಇರುವುದು ವಿದೇಶ ಪ್ರವಾಸವನ್ನು ಸೂಚಿಸುತ್ತದೆ. ಕುಟುಂಬದ ಜತೆ ಪುಣ್ಯ ಸ್ಥಳಗಳ ದರ್ಶನ ಪಡೆಯುವಿರಿ‌. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುವುದು. ವೃತ್ತಿಯಲ್ಲಿ ಎದುರಾದ ಸಮಸ್ಯೆಯನ್ನು ಸೂಕ್ತ ಮಾರ್ಗದಲ್ಲಿ ಪರಿಹಾರ ಮಾಡಿಕೊಳ್ಳಿ. ಕುಟುಂಬದವರ ಸಹಕಾರ ನಿಮಗೆ ಲಭ್ಯವಾಗಲಿದೆ. ಸಂಗಾತಿಯ ಜತೆ ಮಾತುಕತೆ ಅಷ್ಟಾಗಿ ಇರದು. ಮಕ್ಕಳ ಕಿರಿಕಿರಿಯನ್ನು ನೀವು ಸಹಿಸಲಾರಿರಿ. ಹೆಚ್ಚು ಶ್ರಮ ಹಾಕಿ ಅಲ್ಪ ಆದಾಯ ಪಡೆಯಬೇಕಾಗುವುದು. ನಾಗಾರಾಧನೆಯಿಂದ ದೋಷ ನಿವಾರಣೆಯಾಗಲಿದೆ.

ಮಿಥುನ
ಜುಲೈ ತಿಂಗಳ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಅಶುಭವು ಅಧಿಕವಾಗಿರಲಿದೆ. ರಾಶಿಯ ಅಧಿಪತಿಯೂ ಚತುರ್ಥ ಸ್ಥಾನಾಧಿಪತಿಯೂ ಆದ ಬುಧನು ತೃತೀಯದಲ್ಲಿ ಇರುವುದು ಕುಟುಂಬಕ್ಕೆ ನಿಮ್ಮ ಬಗ್ಗೆ ತಿಳಿಸುವನು. ಸಹೋದರಿಯ ನಡುವೆ ಹೊಂದಾಣಿಕೆ ಇರುವುದು. ಹೆಣ್ಣು ಮಕ್ಕಳ ಕಾರಣದಿಂದ ಖರ್ಚು ಹೆಚ್ಚಾಗುವುದು. ವಾಹನದಿಂದ ತೊಂದರೆ ಎದುರಾಗುವುದು. ವೃತ್ತಿಯಲ್ಲಿ ಆಸಕ್ತಿ ಕಡಿಮೆಯಾಗಿ ಕೆಲಸ ಬಿಡುವ ಆಲೋಚನೆ ಮಾಡುವಿರಿ. ನವಮದಲ್ಲಿ ಶನಿಯು ಉಚ್ಚನಾಗಿ ನಿಮಗೆ ಕೊಡುವ ಗೌರವ, ಸನ್ಮಾನಗಳನ್ನು ಕೊಡಿಸುವನು. ಮಾತು ಹರಿತವಾಗಿರಲಿದೆ‌. ಆದಷ್ಟು ತಾಳ್ಮೆಯಿಂದ ವರ್ತಿಸುವುದು ಸೂಕ್ತ. ಲಕ್ಷ್ಮೀನಾರಾಯಣರ ಸ್ತೋತ್ರವನ್ನು ಪಠಿಸಿ.

ಕರ್ಕಾಟಕ
ಈ ವಾರದಲ್ಲಿ ಶುಭ ಫಲ. ಗುರುವು ಏಕಾದಶದಲ್ಲಿ ಇರುವುದು, ದಶಮಾಧಿಪತಿ ಏಕಾದಶದಲ್ಲಿ ಇರುವುದು ವೃತ್ತಿಯಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯಾಗಲಿದೆ. ಸೂರ್ಯನು ನಿಮ್ಮ ರಾಶಿಯಲ್ಲಿ ಇರುವುದತಿಂದ ಒತ್ತಡದ ವಾತಾವರಣ ಸೃಷ್ಟಿಸುವನು. ಗೌರವ ಕೊಡಬೇಕಾದವರಿಗೆ ಕೊಡದೇ ಯಾರಿಗೋ ಗೌರವ ಕೊಡುವಿರಿ. ವಿದೇಶ ಉತ್ಪನ್ನಗಳಿಂದ ಲಾಭ ಗಳಿಸುವಿರಿ. ವಾತದಿಂದ ಅನಾರೋಗ್ಯವು ಉಂಟಾಗಿದ್ದರೆ ಅದು ಶಮನವಾಗುವುದು. ಸಹೋದರರ‌ ಜತೆ ಸಾಮರಸ್ಯ ಕೊರತೆ ಕಾಣಿಸುವುದು. ಬಂಧುಗಳಿಂದ ನಿಮಗೆ ಬೇಕಾದ ಸಹಕಾರ ಸಿಗಲಿದೆ.

ಸಿಂಹ
ಈ ವಾರದಲ್ಲಿ ಸಿಂಹ ರಾಶಿಯವರಿಗೆ ಸಾಧಾರಣ ಫಲ. ರಾಶಿ ಅಧಿಪತಿ ವ್ಯಯದಲ್ಲಿ ಇದ್ದಾನೆ. ಅಂದುಕೊಂಡ ಕಾರ್ಯವು ಕೂಡಲೇ ಆಗದು. ಹಿರಿಯರ ಒಪ್ಪಿಗೆ ಪಡೆದು ಮುಂದುವರಿಯುವುದು ಕಷ್ಟವಾಗುವುದು. ವಿದೇಶದಲ್ಲಿ ಇರುವವರು ಮರಳಿ‌ಬರುವ ಸಂದರ್ಭವು ಬರುವುದು. ಶುಕ್ರನು ನೀಚಗಾಮಿಯಾದ ಕಾರಣ ಬೇಡ ಕಾರ್ಯಗಳಿಗೆ ಹಣವು ಖರ್ಚಾಗುವುದು. ಸಂಗಾತಿಯಿಂದ‌ ನಿಂದನೆಯೂ ಸಿಗುವುದು. ಯಾವುದಕ್ಕೂ ಉತ್ತರಿಸುವುದು ಕಷ್ಟವಾದೀತು. ಮೌನವೇ ಎಲ್ಲದಕ್ಕೂ ಉತ್ತರ. ಉದ್ಯಮದ ಹಿನ್ನಡೆಯಿಂದ ಆತಂಕ ಕಾಣಿಸುವುದು. ಶಿವನಿಗೆ ಸೋಮವಾರ ರುದ್ರಾಭಿಷೇಕ‌ ಮಾಡಿ.

ಕನ್ಯಾ
ಈ ವಾರವು ಕನ್ಯಾ ರಾಶಿಯವರಿಗೆ ಶುಭಫಲವಿದೆ. ರಾಶಿ ಅಧಿಪತಿ ಹಾಗೂ ದಶಮಾಧಿಪತಿ ಇಬ್ಬರೂ ದ್ವಾದಶದಲ್ಲಿ ಇರುವುದರಿಂದ ವೃತ್ತಿಯಲ್ಲಿ ತೊಂದರೆ. ಖಾಸಗಿ ಉದ್ಯೋಗದಲ್ಲಿ ಅಸ್ಥಿರತೆ ಕಾಡುವುದು. ಆದರೂ ನೀವು ಧೈರ್ಯದಿಂದ ಇರಬೇಕು. ನವಮದಲ್ಲಿ ಇರುವ ಗುರುವು ಒಂದೊಂದಾಗಿ ಎಲ್ಲವನ್ನೂ ನಿವಾರಿಸುವನು. ಶತ್ರುಗಳೂ ನಿಮ್ಮ ಬಗ್ಗೆ ಒಳ್ಳೆಯ ಭಾವನೆಗಳನ್ನು ಇಟ್ಟುಕೊಳ್ಳುವರು. ಸಂಗಾತಿಯ ಮನಃಪರಿವರ್ತನೆ ಕಷ್ಟವಾದೀತು. ತಾಳ್ಮೆಯೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುವುದು. ನೀವು ಮಾತ್ರ ಎಲ್ಲ ತೀರ್ಮಾನ ತೆಗೆದುಕೊಳ್ಳದೆ ಹಿರಿಯರ ಅನುಭವವನ್ನೂ ಕೇಳಿ ಮುಂದುವರಿಯಿರಿ.

ತುಲಾ
ತುಲಾ ರಾಶಿಯವರಿಗೆ ಜುಲೈ ತಿಂಗಳ ಕೊನೆಯ ವಾರ ಶುಭಪ್ರದವಾಗಿಲ್ಲ. ರಾಶಿಯ ಅಧಿಪತಿಯೂ ಷಷ್ಠ ಸ್ಥಾನಾಧಿಪತಿಯೂ ನೀಚ ಸ್ಥಾನದ ಕಡೆಗೆ ಹೋಗಲಿದ್ದಾನೆ. ಅನಾರೋಗ್ಯದ ಕಾರಣಕ್ಕೆ ನೀವು ಖರ್ಚು ಮಾಡುವಿರಿ. ಅಪಮಾನ ಸಹಿಸಿಕೊಳ್ಳಲಾರಿರಿ. ವಿವಾಹದ ವಿಚಾರದಲ್ಲಿ ಪೂರ್ಣವಾದ ಮನಸ್ಸು ಇರದು. ಉದ್ಯೋಗದಲ್ಲಿ ಹೊಂದಾಣಿಕೆ ಇಲ್ಲವಾಗುವುದು. ಸಂಗಾತಿಯನ್ನು ಮನವೊಲಿಸಿ ಮುನ್ನಡೆಯಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸವು ಕಾರಣಾಂತರದಿಂದ ನಿಲ್ಲುವುದು. ಮುಂದುವರಿಸಲು ಪ್ರೇರಣೆ ಅಗತ್ಯ. ಬಂಧುಗಳ ಜತೆ ಮಿತಿಯಲ್ಲಿ ವರ್ತಿಸಿ. ಮಹಾಲಕ್ಷ್ಮಿಯ ಸ್ತೋತ್ರ ಪಠಿಸಿ.

ವೃಶ್ಚಿಕ
ಜುಲೈ ತಿಂಗಳಿನ ಈ ವಾರದಲ್ಲಿ ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಶುಭ ಫಲವಿದೆ. ರಾಶಿಯ ಅಧಿಪತಿಯೂ ಷಷ್ಠದ ಅಧಿಪತಿಯೂ ಆದ ಕುಜನು ಸಪ್ತಮದಲ್ಲಿ ಇರುವನು. ವಿವಾಹಿತರಿಗೆ ದಾಂಪತ್ಯದಲ್ಲಿ ಕಿರಿಕಿರಿ ಅನಿಸಿದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳರು. ಆದರೆ ಸಣ್ಣ ವಿಚಾರಕ್ಕೂ ಮಾತಿಗೆ ಮಾತು ಬೆಳೆಯುವುದು. ಅವಿವಾಹಿತರಿಗೆ ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಲು ಉತ್ತಮ‌ ಸಮಯ. ಅಥವಾ ಪ್ರೀತಿಯ ವಿಚಾರದಲ್ಲೂ ನಿಮಗೆ ಒಳ್ಳೆಯ ಸಂಗಾತಿಯೇ ಸಿಗುವರು. ಸರ್ಕಾರದ ಕೆಲಸವನ್ನು ಬೇಗ ಮಾಡಿ ಮುಗಿಸುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಪ್ರಯತ್ನ ಇರುವುದು.

ಧನುಸ್ಸು
ಜುಲೈ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಅಶುಭ ಫಲ. ಸ್ವರಾಶಿಯ ಅಧಿಪತಿಯೂ ಚತುರ್ಥ ಸ್ಥಾನಾಧಿಪತಿಯೂ ಆದ ಗುರುವು ಷಷ್ಠದಲ್ಲಿ ಇದ್ದಾನೆ. ಕೌಟುಂಬಿಕ ಸಮಸ್ಯೆಯನ್ನು ಎದುರಿಸಬೇಕಾಗುವುದು. ಕ್ಲೇಶಗಳು ಒಂದೊಂದಾಗಿ ನಿಮ್ಮನ್ನು ಕುಗ್ಗಿಸುವುವು. ವಿದೇಶದಲ್ಲಿ ಇರುವವರಿಗೆ ಆದಾಯ ಕಡಿಮೆ ಖರ್ಚು ಹೆಚ್ಚಾಗಲಿದೆ. ಹಿತಶತ್ರುಗಳಿಂದ ನೀವು ತಪ್ಪಿಸಿಕೊಳ್ಳಲು ಕಷ್ಟವಾಗುವುದು. ಸಂಗಾತಿಯಿಂದ ಆರ್ಥಿಕ‌ ಸಹಕಾರ ಸಿಗುವುದು. ವೃತ್ತಿಯಲ್ಲಿ ಕೆಲವು ಕಹಿ‌ಯಾದ ಮಾತುಗಳನ್ನು ಕೇಳಬೇಕಾಗುವುದು. ನಿಮ್ಮ ಬೆಳವಣಿಗೆಯು ಮಂದಗತಿಯಲ್ಲಿ ಸಾಗಲಿದೆ. ರಾಯರ ಸನ್ನಿಧಿಯಲ್ಲಿ ಸ್ವಲ್ಪ ಸಮಯ ಇದ್ದು ಬನ್ನಿ.

ಮಕರ
ಮಕರ ರಾಶಿಯವರಿಗೆ ಶುಭ ಫಲವಿದೆ. ರಾಶಿಯ ಅಧಿಪತಿ ಸ್ವಕ್ಷೇತ್ರದಲ್ಲಿ ಉಚ್ಚ ಸ್ಥಾನದಲ್ಲಿ ಇರುವುದರಿಂದ ಸಾಲ ಕೊಟ್ಟ ಹಣವು ವಿಳಂಬವಾದರೂ ವಾಪಸು ಬರಲಿದೆ. ತಂದೆ ಮಕ್ಕಳ‌ ನಡುವೆ ವೈಮನಸ್ಯ ಕಾಣಿಸಿಕೊಳ್ಳುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿಯು ನಿಮಗೆ ಖುಷಿ ಕೊಡುವುದು. ಯಶಸ್ಸು ಪಡೆಯಲು ನೇರ ದಾರಿಯಲ್ಲಿ ಸಾಗಿ. ಬುದ್ಧಿವಂತಿಕೆ ಪ್ರದರ್ಶಿಸುವಾಗ ಎಡವಬಹುದು. ನರಕ್ಕೆ ಸಬಂಧಿಸಿದ ಕಾಯಿಲೆ ಕಾಣಿಸುವುದು. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ.

ಕುಂಭ
ಕುಂಭ ರಾಶಿಯವರಿಗೆ ಈ ವಾರವು ಮಿಶ್ರ ಫಲ. ರಾಶಿಯ ಅಧಿಪತಿಯ ತನ್ನ ಉತ್ತಮ ಸ್ಥಾನದಲ್ಲಿ ಮಾಡಬೇಕಾದ ಕಾರ್ಯಗಳಿಗೆ ಧೈರ್ಯ ಕೊಡುವನು. ಆದರೆ ಏನು ಮಾಡಬೇಕು, ಹೇಗೆ ಮಾಡಬೇಕು ಎನ್ನುವ ಗೊಂದಲ ಇರುವುದು. ಸಂಪತ್ತಿಗಾಗಿ ಅತಿಯಾಸೆ ಬೇಡ. ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿಯೂ ಬರಬಹುದು. ಭೂಮಿಯ ಖರೀದಿಗೆ ಮನೆಯವರ ಒಪ್ಪಿಗೆ ಪಡೆದು ಮುಂದುವರಿಯಿರಿ. ನಿಮ್ಮ ಮಾತುಗಳು ಅಸಭ್ಯ ಎನಿಸಬಹುದು. ಬಂಧುಗಳ ಕಡೆಯಿಂದ ನಿಮಗೆ ವಿವಾಹ ಸಂಬಂಧ ಕೂಡಿಬರುವುದು. ಆಂಜನೇಯನಿಗೆ ಪ್ರಿಯವಾದ ನೈವೇದ್ಯ ಮಾಡಿ.

ಮೀನ
ಜುಲೈ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಮಿಶ್ರ ಫಲ. ರಾಶಿಯ ಅಧಿಪತಿಯೂ ದಶಮಾಧಿಪತಿಯೂ ಆದ ಗುರುವು ತೃತೀಯದಲ್ಲಿ ಇದ್ದಾನೆ. ಶತ್ರುವಿನ ರಾಶಿಯಾದ ಕಾರಣ ವೃತ್ತಿಯಲ್ಲಿ ತೊಂದರೆ, ಮಾನಸಿಕವಾಗಿ ಭಯ, ಗೊಂದಲ ಕಾಡುವುದು. ಶರೀರ ಪೀಡೆಯಿಂದ ಕಷ್ಟವಾಗುವುದು. ವಿವಾಹಕ್ಕೆ ಶತ್ರುಗಳಿಂದ ತಡೆಯುಂಟಾಗುವುದು. ನಿಶ್ಚಯವಾದ ವಿವಾಹ ಸಂಬಂಧವು ಮುರಿದುಬೀಳುವ ಸಾಧ್ಯತೆ ಹೆಚ್ಚು. ವಿವಾಹಿತರಿಗೆ ಸಂಗಾತಿಯ ಮನೋಭಾವ ಅರ್ಥವಾಗದು. ಸಮಯವನ್ನೂ ಕೊಡಲಾಗದ ಸ್ಥಿತಿ ಬರುವುದು. ನಾಗರ ಉಪಾಸನೆ ಮಾಡಿ.

ದಿನ ಭವಿಷ್ಯ 28-07-2024 ಭಾನುವಾರ- ಕರ್ಕಾಟಕ- ಹಣಕಾಸಿನಲ್ಲಿ ಏರುಪೇರು, ಧನುಸ್ಸು- ಆದಾಯಕ್ಕಿಂತ ಖರ್ಚು ಹೆಚ್ಚು, ‌ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

TAGGED:Weekly Prediction 28-07-2024 03-08-2024 Gemini- Inauspicious fruit is high Makara- Do a Bilvarchana to Shiva what is your prediction this week? newsics website ವಾರ ಭವಿಷ್ಯ
Share This Article
Facebook Twitter Copy Link Print
Previous Article 6 ರಾಜ್ಯಪಾಲರ ನೇಮಕ, ಮೂವರ ವರ್ಗ, ಕರ್ನಾಟಕದ ಸಿ.ಹೆಚ್. ವಿಜಯಶಂಕರ್‌ಗೆ ಮೇಘಾಲಯ ಗವರ್ನರ್ ಹುದ್ದೆ
Next Article ಪ್ರಿಯತಮೆಯನ್ನೇ ಕೊಂದು ಪೊದೆಯಲ್ಲಿ ಬಿಸಾಡಿದ ಯುವಕ; ಕೃತ್ಯಕ್ಕೇನು ಕಾರಣ?

Popular Posts

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

3 Min Read

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

Today’s Horoscope ಇಂದಿನ ರಾಶಿ ಭವಿಷ್ಯ 01-06-2026, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

4 Min Read
ಜ್ಯೋತಿಷ್ಯಪಂಚಾಂಗಪ್ರಮುಖ

VASTU ಈ ಗಿಡಗಳನ್ನು ಯಾವತ್ತೂ ಗಿಫ್ಟ್ ಕೊಡಬೇಡಿ, ಇದರಿಂದ ಅಪಾಯವೇ ಹೆಚ್ಚು!

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ಸಿದ್ಧಿ ಯೋಗ, ಶಿವ ಯೋಗ: ಈ ಏಳು ರಾಶಿಗಳ ಜನರಿಗೆ ಧನಪ್ರಾಪ್ತಿ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 31-05-2026, ಭಾನುವಾರ, ಇಂದು ಹೇಗಿದೆ ನಿಮ್ಮ ಅದೃಷ್ಟ?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?