newsics.com
ಶುಭೋದಯ
28 ಜುಲೈ 2024, ಭಾನುವಾರ
ಈ ದಿನ- ನಿತ್ಯ ಪಂಚಾಂಗ
* ವಿಶ್ವ ಪರಿಸರ ಸಂರಕ್ಷಣಾ ದಿನ
* ವಿಶ್ವ ಹೆಪಟೈಟಿಸ್ ದಿನ
* ರಾಷ್ಟ್ರೀಯ ಪೋಷಕರ ದಿನ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಆಯನ- ದಕ್ಷಿಣಾಯಣ
ದಿನಾಂಕ – 28/07/2024
ತಿಂಗಳು – ಜುಲೈ
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ಅಷ್ಟಮಿ 19:26:58
ಪಕ್ಷ – ಕೃಷ್ಣ
ನಕ್ಷತ್ರ – ಅಶ್ವಿನಿ 11:46:33
ಯೋಗ – ಶೂಲ 20:09:54
ಕರಣ – ಬಾಳವ 08:20:28
ಕರಣ – ಕೌಳವ 19:26:58
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಮೇಷ
ಸೂರ್ಯ ರಾಶಿ ಕರ್ಕಾಟಕ
ಋತು- ಗ್ರೀಷ್ಮ
ಸೂರ್ಯೋದಯ 06:05:34
ಸೂರ್ಯಾಸ್ತ 18:46:34
ಹಗಲಿನ ಅವಧಿ 12:40:59
ರಾತ್ರಿಯ ಅವಧಿ 11:19:13
ಚಂದ್ರಾಸ್ತ 12:28:27
ಚಂದ್ರೋದಯ 24:19:09*
ರಾಹು ಕಾಲ 17:11 – 18:47 ಅಶುಭ
ಯಮಗಂಡ ಕಾಲ 12:26 – 14:01 ಅಶುಭ
ಗುಳಿಕ ಕಾಲ 15:36 – 17:11
ಅಭಿಜಿತ್ 12:01 – 12:51 ಶುಭ
ದುರ್ಮುಹೂರ್ತ 17:05 – 17:56 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ನಾವು ಒಂದೇ ತಪ್ಪನ್ನು ಎರಡನೆ ಬಾರಿ ಮಾಡಲಾಗದು. ಏಕೆಂದರೆ, ಮತ್ತೊಮ್ಮೆ ಮಾಡಿದಾಗ ಅದನ್ನು ತಪ್ಪು ಎನ್ನುವುದಿಲ್ಲ. ಅದು ನಮ್ಮ ಆಯ್ಕೆ ಆಗಿರುತ್ತದೆ. ನೆನಪಿರಲಿ.
***
ಈ ದಿನ
ಜುಲೈ 28
ವಿಶ್ವ ಪರಿಸರ ಸಂರಕ್ಷಣಾ ದಿನ
🌱 ಪ್ರತಿವರ್ಷ ಜುಲೈ 28 ರಂದು ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಜಗತ್ತಿನಲ್ಲಿ ಉದ್ಭವಿಸಿರುವ ಪರಿಸರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಿ ಮತ್ತು ಅದರಿಂದ ಉಂಟಾಗುವ ಸವಾಲುಗಳನ್ನು ಜಗತ್ತು ಎದುರಿಸಬೇಕಾಗುತ್ತದೆ. ಆದ್ದರಿಂದ ನಾವು ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ ಎಂಬ ಗುರಿಯೊಂದಿಗೆ ಇದನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಪೋಷಕರ ದಿನ
ಕಣ್ಣಿಗೆ ಕಾಣುವ ದೇವರುಗಳಿಗೆ ಗೌರವ ಸಲ್ಲಿಸುವ ದಿನ ಇಂದು. ಈ ವರ್ಷ ರಾಷ್ಟ್ರೀಯ ಪೋಷಕರ ದಿನವನ್ನು ಜುಲೈ 28 ರಂದು ಆಚರಿಸಲಾಗುತ್ತಿದೆ. ನಮ್ಮನ್ನು ಹೆತ್ತು, ಹೊತ್ತು, ಸಾಕಿ, ಸಲುಹಿ, ನಮ್ಮ ಮೊದಲ ಮಾರ್ಗದರ್ಶಕರಾಗಿ, ಶಿಕ್ಷಕರಾಗಿ, ತಮಗೆಷ್ಟೆ ಕಷ್ಟಗಳು ಬಂದರು, ನಮ್ಮ ಹತ್ತಿರ ಆ ಕಷ್ಟಗಳು ಸುಳಿಯದಂತೆ ನೋಡಿಕೊಂಡ ಜೀವಂತ ದೇವರುಗಳು ಆ ನಮ್ಮ ತಂದೆ ತಾಯಂದಿರರು. ಇಂದು ಎಲ್ಲಾ ತಂದೆ – ತಾಯಂದಿರರಿಗೆ ಪೋಷಕರ ದಿನಾಚರಣೆಯ ಶುಭಾಶಯಗಳು.
* 1994ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಕ್ಕಳ ಪಾಲನೆ ಪೋಷಣೆಯಲ್ಲಿ ತಂದೆ- ತಾಯಿಯ ಪಾತ್ರದ ಕುರಿತು ಚರ್ಚಿಸಿದರು. ಇದನ್ನು ಒಂದು ಮಸೂದೆಯನ್ನಾಗಿ ಜಾರಿಮಾಡಲು ತೀರ್ಮಾನಿಸಲಾಯಿತು. ಈ ಮಸೂದೆಯನ್ನು ರಿಪಬ್ಲಿಕನ್ ಸೆನೆಟರ್‌ನ ಟ್ರೆಂಟ್ ಲೋಟ್ ಪರಿಚ಼ಪೋಷಕರ ದಿನವನ್ನು ಪ್ರತಿ ವರ್ಷ ಜುಲೈ ತಿಂಗಳ ನಾಲ್ಕನೇ ಭಾನುವಾರ ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಢಿಕ್ಕಿ ಹೊಡೆದ ಮಾರ್ಗದರ್ಶನ ಮತ್ತು ಸಾಕಷ್ಟು ಮುಂಜಾಗಾರುಕತೆಗಳಿಂದ ಖಂಡಿತವಾಗಿಯೂ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.
* ಜುಲೈ 28, 1821 ರಂದು ಪೆರು ಸ್ಪೇನ್‌ನಿಂದ ಸ್ವಾತಂತ್ರ್ಯ ಗಳಿಸಿತು.
* ಜುಲೈ 28, 1909 ರಂದು ರಾಜಕಾರಣಿ ಬ್ರಹ್ಮಾನಂದ ರೆಡ್ಡಿ ಮದರಾಸಿನಲ್ಲಿ ಜನಿಸಿದರು. ಫೆಬ್ರವರಿ 29, 1964 ರಿಂದ 30 ಸೆಪ್ಟೆಂಬರ್ 1971 ರವರೆಗೆ ಭಾರತದ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
* ಮೊದಲನೆಯ ಮಹಾಯುದ್ಧವು ಜುಲೈ 28, 1914 ರಂದು ಪ್ರಾರಂಭವಾಗುತ್ತದೆ.
* ಜುಲೈ 28, 1933 ರಂದು ಮೊದಲ ಹಾಡುವ ಟೆಲಿಗ್ರಾಮ್ ಅನ್ನು ರವಾನಿಸಲಾಯಿತು.
* ಜುಲೈ 28, 1997 ರಂದು ನವದೆಹಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹಿಮಸಾಗರ್ ಎಕ್ಸ್ ಪ್ರೆಸ್ ರೈಲಿಗೆ ಗುದ್ದಿದ ಕಾರಣ 12 ಮಂದಿ ಮೃತರಾಗಿ 69 ಮಂದಿ ಗಾಯಗೊಂಡರು.