Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ದೀಪಾವಳಿ ಹಬ್ಬ ಹೀಗೆ ಆಚರಿಸಿ, ಖುಷಿಯಾಗಿರಿ
ಕರ್ನಾಟಕದೇಶಪ್ರಮುಖ

ದೀಪಾವಳಿ ಹಬ್ಬ ಹೀಗೆ ಆಚರಿಸಿ, ಖುಷಿಯಾಗಿರಿ

Share
3 Min Read
SHARE

ಕಷ್ಟದ ಕತ್ತಲೆ ಸರಿಯಲಿ. ಎಲ್ಲೆಡೆ ದೀಪಾವಳಿ ಬೆಳಕು ಸುರಿಯಲಿ.

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಐದು ದಿನಗಳ ಕಾಲ ಆಚರಿಸಲಾಗುವ ದೀಪಾವಳಿ ಹಬ್ಬದಲ್ಲಿ ಗೋಪೂಜೆ ಪ್ರಮುಖವಾಗಿದೆ. ಈ ಗೋ ಪೂಜೆಯ ಮೂಲಕ ದೀಪಾವಳಿ ಹಬ್ಬ ಸಂಪನ್ನಗೊಳ್ಳುತ್ತದೆ.

ಗೋಪೂಜೆಯನ್ನು ಕೆಲವು ಸ್ಥಳಗಳಲ್ಲಿ ಗೋವರ್ಧನ ಪೂಜೆಯೆಂದೂ ಕರೆಯಲಾಗುತ್ತದೆ. ಈ ದಿನದಂದು ಗೋಮಾತೆಯನ್ನು ಹಾಗೂ ಶ್ರೀಕೃಷ್ಣನನ್ನು ಪೂಜಿಸುವ ಪದ್ಧತಿಯಿದೆ. ಈ ದಿನಕ್ಕೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಸ್ಥಾನವನ್ನು ನೀಡಲಾಗಿದೆ.

ಜನರು ಮುಖ್ಯವಾಗಿ ತಮ್ಮ ಮಕ್ಕಳು ಮತ್ತು ಕುಟುಂಬದ ದೀರ್ಘಾಯುಷ್ಯ, ಸಂತೋಷ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಈ ದಿನದಂದು ಗೋವೂಗಳನ್ನು ಆರಾಧಿಸುತ್ತಾರೆ. ಈ ದಿನ ಗೋವುಗಳಿಗೆ ಗೌರವವನ್ನು ಸಲ್ಲಿಸುವ ದಿನವಾದ್ದರಿಂದ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸುವುದು ನಿಷಿದ್ಧವಾಗಿರುತ್ತದೆ.

ಈ ದಿನದಂದು ಶ್ರೀಕೃಷ್ಣ ಪರಮಾತ್ಮನು ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಿನಲ್ಲಿ ಎತ್ತುವ ಮೂಲಕ ಅಲ್ಲಿನ ಜನರನ್ನು ಹಾಗೂ ಗೋವುಗಳನ್ನು ರಕ್ಷಿಸಿದನು ಎಂದು ಹೇಳಲಾಗುತ್ತದೆ.

2025ರ ಗೋಪೂಜೆ ಅಥವಾ ಗೋವರ್ಧನ ಪೂಜೆಯು ಅಕ್ಟೋಬರ್‌ 22ರಂದು ಬುಧವಾರ ನಡೆಯುತ್ತಿದೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ವರುಣ ದೇವನಾದ ಇಂದ್ರನು ಕಳುಹಿಸಿದ ಧಾರಾಕಾರ ಮಳೆಯಿಂದ ಗೋಕುಲದ ಜನರನ್ನು ರಕ್ಷಿಸಲು ಶ್ರೀಕೃಷ್ಣನು ತನ್ನ ಕಿರುಬೆರಳಿನಲ್ಲಿ ಗೋವರ್ಧನ ಬೆಟ್ಟವನ್ನು ಎತ್ತಿದ ದಿನ ಇದು ಎಂದು ಹೇಳಲಾಗುತ್ತದೆ. ದೈವಿಕತೆಯ ಮೇಲೆ ನಂಬಿಕೆ ಇಡುವುದರ ಸಂಕೇತವಾಗಿರುವ ಈ ಕಥೆಯು, ಪ್ರಕೃತಿಯಲ್ಲಿ ನಾವು ಹೇಗೆ ನಂಬಿಕೆ ಇಡಬೇಕು ಮತ್ತು ಅದರ ಔದಾರ್ಯಕ್ಕಾಗಿ ಅದಕ್ಕೆ ಹೇಗೆ ಧನ್ಯವಾದ ಹೇಳಬೇಕು ಎಂಬುದನ್ನು ನೆನಪಿಸುತ್ತದೆ. ಈ ದಿನದಂದು ಗೋವುಗಳನ್ನು ಗೌರವಿಸುವುದಕ್ಕಾಗಿಯೂ ಗೋವುಗಳನ್ನು ಪೂಜಿಸುವ ಸಂಪ್ರದಾಯ ಬೆಳೆಯಿತು.

ಗೋಪೂಜೆ ಮಾಡುವ ವಿಧಾನ
– ಸ್ನಾನ ಮತ್ತು ಸಂಕಲ್ಪ:
ಗೋಪೂಜೆಯ ದಿನದಂದು, ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುದ್ಧವಾದ ಬಟ್ಟೆ ಧರಿಸಿ. ನಿಮ್ಮ ಮನೆಯ ದೇವಸ್ಥಾನ ಅಥವಾ ಪೂಜಾ ಸ್ಥಳದಲ್ಲಿ ಹಸು ಮತ್ತು ಕರುವನ್ನು ಪೂಜಿಸಲು ಸಂಕಲ್ಪ ತೆಗೆದುಕೊಳ್ಳಿ.
– ಗೋಮಾತೆಯ ಪೂಜೆ:
ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯ ಸುತ್ತ ಮುತ್ತ ಹಸು ಅಥವಾ ಕರು ಇದ್ದರೆ, ಅವುಗಳನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿಸಿ. ಇದು ಸಾಧ್ಯವಾಗದಿದ್ದರೆ, ಮಣ್ಣಿನ ವಿಗ್ರಹ ಅಥವಾ ಹಸು ಮತ್ತು ಕರುವಿನ ಚಿತ್ರವನ್ನು ಪೂಜಿಸಿ.
– ಹಸುಗಳ ಅಲಂಕಾರ:
ಹಸು ಮತ್ತು ಕರುವಿಗೆ ಕುಂಕುಮ ಮತ್ತು ಅರಿಶಿನದ ತಿಲಕವನ್ನು ಹಚ್ಚಿ. ಹೂವಿನ ಹಾರಗಳನ್ನು ಹಾಕಿ, ಹೊಸ ಬಟ್ಟೆ/ಶಾಲುಗಳನ್ನು ಅರ್ಪಿಸಿ. ಹಸುಗಳಿಗೆ ಅರಿಶಿನ, ಕುಂಕುಮವನ್ನು ಹಚ್ಚಿ, ಅವುಗಳ ಪಾದ ಪೂಜೆಯನ್ನು ಮಾಡಿ.
– ಇವುಗಳನ್ನು ಅರ್ಪಿಸಿ:
ಹಸುವಿಗೆ ಹಸಿರು ಹುಲ್ಲು, ಕಡಲೆ ಬೇಳೆ ಅಥವಾ ಮೊಳಕೆಯೊಡೆದ ಹೆಸರುಕಾಳು, ನೀರು ಮತ್ತು ಹಣ್ಣುಗಳನ್ನು ತಿನ್ನಲು ನೀಡಿ.
– ಹಸುವಿಗೆ ಆರತಿಯನ್ನು ತಪ್ಪದೇ ಮಾಡಬೇಕು.
– ದಕ್ಷಿಣ ಕರ್ನಾಟಕದ ಕೆಲವೊಂದು ಕಡೆಗಳಲ್ಲಿ ಗೋವುಗಳಿಗೆ ಅಲಂಕಾರ ಮಾಡಿ, ಪೂಜಿಸಿ ಅವುಗಳಿಗೆ ತಿನ್ನಲು ಸಿಹಿಯನ್ನು ಹಾಗೂ ಅಕ್ಕಿಯ ರೊಟ್ಟಿಯನ್ನು ನೀಡುತ್ತಾರೆ. ನಂತರ ಒಂದೆರೆಡೆ ಅಕ್ಕಿಯ ರೊಟ್ಟಿಗಳನ್ನು ಅವುಗಳ ಕುತ್ತಿಗೆಗೆ ಕಟ್ಟಿ ಕೂಡ ಬಿಡಲಾಗುತ್ತದೆ. ಈ ರೀತಿಯಾಗಿ ಗೋಪೂಜೆಯನ್ನು ಮಾಡುವ ಸಂಪ್ರದಾಯವೂ ಇದೆ.
ಗೋಪೂಜೆಯಲ್ಲಿ ಪಾಲಿಸಬೇಕಾದ ನಿಯಮಗಳು:
– ಗೋವುಗಳನ್ನು ಪೂಜಿಸುವುದರಿಂದ ಸಂತೋಷ, ಸಮೃದ್ಧಿ, ದೀರ್ಘಾಯುಷ್ಯದೊಂದಿಗೆ ಸಂತಾನ ಭಾಗ್ಯವೂ ದೊರೆಯುವುದು.
– ಈ ದಿನ ಕೇವಲ ಹಸುಗಳನ್ನು ಮಾತ್ರವಲ್ಲ, ಅವುಗಳ ಕರುವನ್ನು ಪೂಜಿಸುವುದೂ ಹೆಚ್ಚು ಮಹತ್ವದ್ದಾಗಿದೆ.
– ಈ ದಿನದಂದು ಹಾಲು ಅಥವಾ ಹಸುಗಳಿಂದ ಪಡೆದ ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ ಇತ್ಯಾದಿಗಳನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ.
– ಈ ದಿನ ಚಾಕುಗಳು ಅಥವಾ ಯಾವುದೇ ಚೂಪಾದ ವಸ್ತುಗಳನ್ನು ಕೂಡ ಬಳಸಬಾರದು ಎನ್ನುವ ನಿಯಮವಿದೆ.

ಗೋವರ್ಧನ ಪೂಜೆಯೆಂದೇ ಕರೆಯಲಾಗುವ ಗೋಪೂಜೆಯ ದಿನದಂದು ನಾವು ತಾಯಿಯೆಂದು ಪೂಜಿಸುವ ಗೋವುಗಳನ್ನು ಮತ್ತು ಅದರ ಕರುಗಳನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ನಾವು ಗೋವುಗಳನ್ನು ಪೂಜಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ, ಸಂತೋಷ ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದಿನದಂದು ಹಲವೆಡೆ ಶ್ರೀಕೃಷ್ಣನನ್ನು ಕೂಡ ಪೂಜಿಸಲಾಗುತ್ತದೆ.

TAGGED:Celebrate Diwali like this and be happy.
Share This Article
Facebook Twitter Copy Link Print
Previous Article ದೈಹಿಕ ಸಂಬಂಧವಿದ್ದ ಮಾತ್ರಕ್ಕೆ ಅತ್ಯಾಚಾರ ಆಗಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು
Next Article ತಂದೆ ಮೇಲಿನ ಸೇಡಿಗೆ 5 ವರ್ಷದ ಮಗನನ್ನು ಬರ್ಬರವಾಗಿ ಹತ್ಯೆಗೈದ ಚಾಲಕ.

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read
ಕರ್ನಾಟಕ

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?