newsics.com
ಶ್ರೀರಂಗಪಟ್ಟಣ(ಮಂಡ್ಯ): ತಾಲೂಕಿನ ದರಸಗುಪ್ಪೆ ಗ್ರಾಮದ ಬಳಿ ಹರಿಯುವ ಚಿಕ್ಕದೇವರಾಜ ಒಡೆಯರ್ (ಸಿಡಿಎಸ್)ಕಾಲುವೆ ಏರಿ ಹೊಡೆದ ಪರಿಣಾಮ ನೂರಾರು ಎಕರೆ ಜಮೀನು ಮುಳುಗಡೆಯಾಗಿದೆ.
ಈ ನಾಲೆ ವ್ಯಾಪ್ತಿಯಲ್ಲಿ ಬರುವ ಕೂಡಲಕುಪ್ಪೆ, ದರಸಗುಪ್ಪೆ, ಕೆನ್ನಾಳು, ಬಾಬುರಾಯನಕೊಪ್ಪಲು, ಕಿರಂಗೂರಿನ ಗ್ರಾಮದ ಕೃಷಿಕರ ಜಮೀನುಗಳಿಗೆ ನೀರು ನುಗ್ಗಿದ್ದು, ಕಬ್ಬು ಬೆಳೆ, ಭತ್ತ, ತೆಂಗು, ಅಡಕೆ, ಬಾಳೆ ತೋಟಕ್ಕೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.
ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾತ್ಕಾಲಿಕವಾಗಿ ಸಿಡಿಎಸ್ ನಾಲೆಯಲ್ಲಿ ಹರಿಯುತ್ತಿದ್ದ ನೀರನ್ನು ನಿಲ್ಲಿಸಿದ್ದಾರೆ. ಆದರೂ ಆತಂಕ ದೂರವಾಗಿಲ್ಲ.