newsics.com
ವಾಷಿಂಗ್ಟನ್: ಮಧ್ಯ ಅಮೆರಿಕದಲ್ಲಿ ಹೊಸ ವೀಸಾ ನೀತಿ ಘೋಷಣೆ ಮಾಡಲಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಮಾಹಿತಿ ನೀಡಿದ್ದಾರೆ.
ಮಧ್ಯ ಅಮೆರಿಕದಲ್ಲಿ ಚೀನಾದ ಭ್ರಷ್ಟ ಪ್ರಭಾವ ಎದುರಿಸಲು ಕ್ರಮ ಕೈಗೊಳ್ಳಲಾಗಿದೆ. ಕಮ್ಯೂನಿಸ್ಟ್ ಪಕ್ಷದ ಪರ ಕಾರ್ಯ ನಿರ್ವಹಿಸುತ್ತಿರುವ ಹಾಗೂ ನಮ್ಮ ಪ್ರದೇಶದ ಸ್ಥಿರತೆಗೆ ಬೆದರಿಕೆ ಹಾಕುವವರಿಗೆ ನಿರ್ಬಂಧಿಸಲಾಗುವುದು. ಚೀನಾ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಮಧ್ಯ ಅಮೆರಿಕನ್ನರ ವೀಸಾಗಳನ್ನು ಅಮೆರಿಕ ನಿರ್ಬಂಧಿಸುತ್ತದೆ ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ.
ಮಧ್ಯ ಅಮೆರಿಕದಲ್ಲಿ ಚೀನಾದ ಭ್ರಷ್ಟ ಪ್ರಭಾವವನ್ನು ತಡೆಯಲು ಮತ್ತು ಕಾನೂನನ್ನು ದುರ್ಬಲಗೊಳಿಸುವ ಅದರ ಪ್ರಯತ್ನಗಳನ್ನು ತಡೆಯಲು ಅಮೆರಿಕ ಬದ್ಧವಾಗಿದೆ. ಅದಕ್ಕಾಗಿಯೇ ಅಂತಹ ವ್ಯಕ್ತಿಗಳು ಮತ್ತು ಅವರ ಕುಟುಂಬಗಳಿಗೆ ಈಗ ಅಮೆರಿಕಕ್ಕೆ ಪ್ರವೇಶ ನಿರಾಕರಿಸಲಾಗುವುದು” ಎಂದು ರುಬಿಯೊ ಹೇಳಿದರು. ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಸೆಕ್ಷನ್ 212 (ಎ) (3) (ಸಿ) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಅಡಿಯಲ್ಲಿ, ಈ ಪ್ರದೇಶದಲ್ಲಿನ ಪ್ರಜಾಪ್ರಭುತ್ವ ರಚನೆಯನ್ನು ದುರ್ಬಲಗೊಳಿಸುವ ಇಂತಹ ಚಟುವಟಿಕೆಗಳನ್ನು ಉದ್ದೇಶಪೂರ್ವಕವಾಗಿ ನಡೆಸುವವರ ಮೇಲೆ ನಿಷೇಧ ಹೇರಲಾಗುವುದು