newsics.com
ಇಲ್ಲೊಬ್ಬ ವ್ಯಕ್ತಿ ಯುವತಿಯೊಬ್ಬಳನ್ನು ಮದ್ವೆಯಾಗಿದ್ದ. ಮದುವೆಯ ನಂತರ ದಂಪತಿಗೆ ಮಗುವೂ ಆಗಿದೆ. ಇದಾದ ಒಂದು ವರ್ಷದ ನಂತರ ಮನೆಯಿಂದಲೇ ನಾಪತ್ತೆಯಾಗಿದ್ದ ಈಗ ಮತ್ತೊಬ್ಬ ಮಹಿಳೆ ಜೊತೆ ಇನ್ಸ್ಟಾಗ್ರಾಮ್ ರೀಲ್ಸ್‌ವೊಂದರಲ್ಲಿ ಮತ್ತೊಬ್ಬ ಯುವತಿ ಜೊತೆ ಪತ್ತೆಯಾಗಿದ್ದು, ಇದನ್ನು ನೋಡಿ ಪತ್ನಿಗೆ ಆಘಾತವಾಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
2017ರಲ್ಲಿ ಉತ್ತರ ಪ್ರದೇಶ ಮುರ್ರಾನಗರದ ನಿವಾಸಿ ಶೀಲು ಎಂಬ ಮಹಿಳೆಯ ಜೊತೆ ಹರ್ದೋಯಿ ಜಿಲ್ಲೆಯ ಅತಮೌ ಗ್ರಾಮದ ಜೀತೇಂದ್ರ ಕುಮಾರ್ ಎಂಬಾತನ ಮದ್ವೆ ನಡೆದಿತ್ತು. ಮದ್ವೆಯಾದ ನಂತರ ದಂಪತಿಗೆ ಮಗೂವೂ ಆಗಿತ್ತು. ಇದಾದ ನಂತರ 2018ರಲ್ಲಿ ಅಂದರೆ ಕೇವಲ ಒಂದು ವರ್ಷದಲ್ಲೇ ಆತ ಪತ್ನಿ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದ. ಆದರೆ ಈಗ ಆತ ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಮತ್ತೊಬ್ಬ ಮಹಿಳೆಯ ಜೊತೆ ಕಾಣಿಸಿಕೊಂಡಿದ್ದಾನೆ.
ಗಂಡ ನಾಪತ್ತೆಯಾದ ನಂತರ ಶೀಲು ಪೊಲೀಸರಿಗೂ ದೂರು ನೀಡಿದ್ದು, ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾಳೆ. ಆದರೆ ಆತ ಸಿಕ್ಕಿರಲಿಲ್ಲ, ಇತ್ತ ಜೀತೇಂದ್ರ ಕುಮಾರ್‌ನ ಕುಟುಂಬದವರು ಆತನ್ನು ಶೀಲುವಿನ ಕುಟುಂಬದವರೇ ಆತನ ನಾಪತ್ತೆಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದರು. ಗಂಡನ ನಾಪತ್ತೆಯ ನಂತರ ಶೀಲು ತನ್ನ ಪುಟ್ಟ ಮಗುವನ್ನು ಕರೆದುಕೊಂಡು ತನ್ನ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಈ ಮಧ್ಯೆ ಆಕೆಯ ಗಂಡ ಲೂಧಿಯಾನದಲ್ಲಿ ಬೇರೊಬ್ಬ ಮಹಿಳೆಯ ಜೊತೆ ರೀಲ್ಸ್‌ನಲ್ಲಿ ಇರುವುದನ್ನು ಪತ್ನಿ ಗುರುತಿಸಿದ್ದು, ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.