Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Free Hospital ಚಿಕ್ಕಬಳ್ಳಾಪುರ: ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ ಶೀಘ್ರ ಲೋಕಾರ್ಪಣೆ, ಇಲ್ಲಿರಲ್ವಂತೆ ಬಿಲ್ಲಿಂಗ್ ಕೌಂಟರ್!
ಆರೋಗ್ಯಕರ್ನಾಟಕದೇಶಪ್ರಮುಖ

Free Hospital ಚಿಕ್ಕಬಳ್ಳಾಪುರ: ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ ಶೀಘ್ರ ಲೋಕಾರ್ಪಣೆ, ಇಲ್ಲಿರಲ್ವಂತೆ ಬಿಲ್ಲಿಂಗ್ ಕೌಂಟರ್!

Share
1 Min Read
SHARE

newsics.com

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಉಚಿತ ಆಸ್ಪತ್ರೆಯ‌ ಬೃಹತ್ ಕಟ್ಟಡ ಶೀಘ್ರ ನಿರ್ಮಾಣಗೊಳ್ಳಲಿದೆ.

ಇದೇ ಮೊದಲ ಬಾರಿಗೆ ಜಗತ್ತಿನ ಎಲ್ಲ ಭಾಗದ ಎಲ್ಲ ಜನರಿಗೂ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸುವ ಬೃಹತ್‌ ಆಸ್ಪತ್ರೆ ಇದಾಗಲಿದೆ.

ಸುಮಾರು 6,50,000 ಚದರಡಿ ವಿಸ್ತೀರ್ಣದಲ್ಲಿ ತಲೆಯೆತ್ತುತ್ತಿರುವ ಈ ಭವ್ಯ ಆಸ್ಪತ್ರೆಯಲ್ಲಿ 28 ವೈದ್ಯಕೀಯ ವಿಭಾಗಗಳು ಕಾರ್ಯನಿರ್ವಹಿಸಲಿವೆ.

ಭಾರತದ ಮೊದಲ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜಾಗಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 2023ರಲ್ಲಿ ಉದ್ಘಾಟನೆಗೊಂಡಿದ್ದು ಇದೊಂದು ಪ್ರಮುಖ ಮೈಲುಗಲ್ಲು. ಈ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಇದರ ಬೋಧನಾ ಆಸ್ಪತ್ರೆಯು ಇದೇ ವರ್ಷದ ನವೆಂಬರ್‌ನಲ್ಲಿ 600 ಹಾಸಿಗೆಗಳ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಘಟಕವಾಗಿ ವಿಸ್ತರಣೆಯಾಗುತ್ತಿದೆ. ಇದು ವಿಶ್ವದ ಅತಿ ದೊಡ್ಡ ಸಂಪೂರ್ಣ ಉಚಿತ ಆಸ್ಪತ್ರೆ ಎನಿಸಲಿದೆ.

ಏನೇನಿರಲಿದೆ?:
ಸುಮಾರು 5 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಈ ಆಸ್ಪತ್ರೆ ನೆಲಮಹಡಿ, ತಳಮಹಡಿ ಹಾಗೂ 5 ಮಹಡಿಗಳನ್ನು ಒಳಗೊಂಡಿದೆ. 600 ಹಾಸಿಗೆ ಸಾಮರ್ಥ್ಯದಲ್ಲಿ 100 ಐಸಿಯು ಬೆಡ್‌ಗಳು ಇರಲಿವೆ. 11 ಆಪರೇಷನ್‌ ಥಿಯೇಟರ್‌ಗಳನ್ನು ಈ ಆಸ್ಪತ್ರೆ ಸಮುಚ್ಚಯ ಒಳಗೊಂಡಿದೆ. ವಿಶೇಷ ಎಂದರೆ ಇಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. ಈ ಆಸ್ಪತ್ರೆಯಲ್ಲಿ ಬಿಲ್ಲಿಂಗ್‌ ಕೌಂಟರ್‌ ಇರುವುದೇ ಇಲ್ಲ.

ಧನ್ವಂತರಿ ಪ್ರತಿಮೆ:
ಈ ಆಸ್ಪತ್ರೆಯ ದೊಡ್ಡ ಗೋಪುರದ ಮೇಲೆ ಆರೋಗ್ಯ ದೇವತೆ ಎಂದೇ ಹೆಸರಾಗಿರುವ ಶ್ರೀ ಧನ್ವಂತರಿ ಪ್ರತಿಮೆ ಪ್ರತಿಷ್ಠಾಪನೆಯಾಗಲಿದೆ. ಸುಮಾರು 20 ಅಡಿ ಎತ್ತರದ ಧನ್ವಂತರಿ ಮೂರ್ತಿಯನ್ನು ಗೋಪುರದ ಮೇಲೆ ಪ್ರತಿಷ್ಠಾಪಿಸಲಾಗುತ್ತಿದೆ.
ಬಿಲ್ಲಿಂಗ್‌ ಕೌಂಟರ್‌ ಇಲ್ಲದ, ಆರೈಕೆ, ಕರುಣೆ ಮತ್ತು ಬದ್ಧತೆಯಿಂದ ರೋಗಿಗಳ ಆರೈಕೆ ಮಾಡಿ ಗುಣಪಡಿಸುವ ದೇವಾಲಯ ಇದು. ಇದು ಕೇವಲ ಆಸ್ಪತ್ರೆಯಲ್ಲ, ಮಾನವೀಯತೆಗೆ ನೀಡಿದ ಭರವಸೆ. ಇಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ಸಿಗಲಿದೆ ಎಂದು ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಸದ್ಗುರು ಶ್ರೀ ಮಧುಸೂದನ್‌ ಸಾಯಿ ಹೇಳಿದ್ದಾರೆ.

Tech info ಸಿಗ್ನಲ್ ಇಲ್ಲದಿದ್ದರೇನಂತೆ… ಈ‌ ಫೋನ್‌ನಲ್ಲಿ ಕರೆ‌ ಮಾಡಬಹುದಂತೆ… ಗೂಗಲ್ ಹೇಳ್ತಿರೋದೇನು?

TAGGED:Chikkaballapur: The world's largest free hospital will be inaugurated soon
Share This Article
Facebook Twitter Copy Link Print
Previous Article Court news ಗಂಡ ನಪುಂಸಕ ಎಂದು ವಿಚ್ಛೇದನ, 90 ಲಕ್ಷ ಜೀವನಾಂಶ ಕೋರಿದ್ದ ಪತ್ನಿಗೆ ಹೈಕೋರ್ಟ್ ಶಾಕ್
Next Article High-level meeting today ನಾಳೆಯಿಂದ ಅಮೆರಿಕದ ಅಧಿಕ ಸುಂಕಾಸ್ತ್ರ ಜಾರಿ, ಇಂದು ಉನ್ನತಮಟ್ಟದ ಸಭೆ, ಮೋದಿ ಹೇಳಿದ್ದೇನು?

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?