newsics.com
ನಿವೇದಿತಾ ಗೌಡ ಅವರ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಳಿಸಿದ ಬಳಿಕ ಗಾಯಕ ಚಂದನ್ ಶೆಟ್ಟಿ ಬಣ್ಣದ ಲೋಕದಲ್ಲಿ ಬಿಜಿಯಾಗಿದ್ದಾರೆ. ಕನ್ನಡದ ರ್‍ಯಾಪ್ ಸಾಂಗ್ಸ್‌ಗಳ ಹೊಸ ಹೊಸ ಪ್ರಯೋಗ ಮಾಡುವಲ್ಲಿ ಫೇಮಸ್ ಆಗಿರೋ ಚಂದನ್ ಅವರು ಇದಾಗಲೇ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ. ‘3 ಪೆಗ್’, ‘ಟಕಿಲಾ’, ‘ಪಕ್ಕಾ ಚಾಕೋಲೆಟ್ ಗರ್ಲ್’ ಹೀಗೆ ಹಲವು ಹಾಡುಗಳು ಇಂದಿಗೂ ಹಲವರ ಬಾಯಲ್ಲಿ ನಲಿದಾಡುತ್ತಿರುತ್ತವೆ. ಅದರಲ್ಲಿಯೂ ಪಬ್, ರೆಸಾರ್ಟ್ ಪಾರ್ಟಿಗಳಲ್ಲಿ ಕನ್ನಡದ ಹಾಡು ಎಂದರೆ ಇವರ ಹಾಡೇ ಕೇಳಿಬರುವಷ್ಟರ ಮಟ್ಟಿಗೆ ಇವರ ಹಾಡು ಫೇಮಸ್ ಆಗಿವೆ.
ಇದೀಗ ಕನ್ನಡದ ಸ್ಟಾರ್ ಸಿಂಗರ್ ಚಂದನ್ ಶೆಟ್ಟಿ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ಯುನಿವರ್ಸಲ್ ಬಾಸ್ ಹಾಗೂ ಱಪರ್ ಚಂದನ್ ಶೆಟ್ಟಿ ಕೊಲ್ಯಾಬೋರೇಷನ್ನಲ್ಲಿ ಸಾಂಗ್ ಮೂಡಿ ಬರುತ್ತಿದೆ.
ಱಪರ್ ಚಂದನ್ ಶೆಟ್ಟಿ ಅವರು ಕ್ರಿಸ್ ಗೇಲ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ʻಯೂನಿವರ್ಸಲ್ ಬಾಸ್ʼ ಕ್ರಿಸ್ ಗೇಲ್ ಹಾಗೂ ಚಂದನ್ ಶೆಟ್ಟಿ ಕೊಲ್ಯಾಬೋರೇಷನ್ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಚಂದನ್ ಶೆಟ್ಟಿ ಅವರನ್ನು ಕ್ರಿಸ್ ಗೇಲ್ ʻರಾಕ್ ಸ್ಟಾರ್ʼ ಎಂದು ಪರಿಚಯಿಸಿದ್ದಾರೆ.
ಇದೀಗ ಸಖತ್ ಬೀಟ್‌ಗಳ ಮೂಲಕ ಗಮನ ಸೆಳೆಯುವ ಚಂದನ್ ಶೆಟ್ಟಿ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಜೊತೆಗೆ ಸಾಂಗ್ ಶೂಟ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಹಾಡಿನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
https://www.instagram.com/reel/DNNYF1RSvVV/?igsh=MTk4cDNzNHB0cWdhbA==