ಸೃಷ್ಟಿಯಲ್ಲಿ ಪ್ರೀತಿಯೇ ಅದ್ಭುತ. ಪ್ರೀತಿಗೆ ವಯಸ್ಸು, ಜಾತಿ, ಧರ್ಮ, ವಯಸ್ಸು, ಬಡವ ಶ್ರೀಮಂತ ಎಂಬ ಯಾವುದೇ ಭೇದವಿಲ್ಲ.ಯಾರ ಮೇಲೆ ಯಾವಾಗ ಪ್ರೀತಿ ಆಗುತ್ತದೆ ಎಂದು ಯಾರೂ ಹೇಳಲಾರರು. ಈಗಾಗಲೇ ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರನ್ನು ಪ್ರೀತಿಸಿ ಮದುವೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಅದೇ ರೀತಿ ತಮಗಿಂತ 30, 40 ವರ್ಷ ದೊಡ್ಡವರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೂ ಇದ್ದಾರೆ. ಇದೀಗಾ ಅಂತದ್ದೇ ವಿಚಿತ್ರ ಪ್ರೇಮ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
50 ವರ್ಷದ ಮಹಿಳೆಯೊಬ್ಬರು, ತಮ್ಮ ಮಗನ ವಯಸ್ಸಿನ 22ರ ಯುವಕನ ಕೊರಳಿಗೆ ಹಾರ ಹಾಕಿ, ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, 50 ವರ್ಷದ ಮಹಿಳೆ ಮತ್ತು 22 ವರ್ಷದ ಯುವಕ ಹಾರಗಳನ್ನು ಬದಲಾಯಿಸಿಕೊಂಡು ದೇವಸ್ಥಾನದಲ್ಲಿ ನಿಂತಿರುವುದನ್ನು ಕಾಣಬಹುದು. ಮಹಿಳೆಯ ತಲೆಯಲ್ಲಿ ಕುಂಕುಮ, ಮುಖದಲ್ಲಿ ಮದುವೆಯಾದ ಸಂಭ್ರಮ. ಸಂದರ್ಶಕನೊಬ್ಬ, ನಿಮ್ಮಿಬ್ಬರ ವಯಸ್ಸೆಷ್ಟು ಎಂದು ಕೇಳಿದಾಗ, ಆ ಮಹಿಳೆ ಯಾವುದೇ ಅಂಜಿಕೆ ಇಲ್ಲದೆ, ನನಗೆ 50, ಇವನಿಗೆ 22 ಎಂದು ಉತ್ತರಿಸುತ್ತಾರೆ.
ಇಷ್ಟು ಚಿಕ್ಕ ವಯಸ್ಸಿನ ಹುಡುಗನನ್ನು ಯಾಕೆ ಮದುವೆಯಾದಿರಿ? ಎಂಬ ಪ್ರಶ್ನೆಗೆ, ಆಕೆ ಕೊಟ್ಟ ಉತ್ತರ ಕೇಳಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಅದಕ್ಕೆ ಯಾವುದೇ ಗಡಿಗಳಿಲ್ಲ. ಹಾಗಾಗಿ ಮದುವೆಯಾದೆವು ಎಂದು ಅವರು ಧೈರ್ಯವಾಗಿ ಹೇಳಿದ್ದಾರೆ.
https://www.instagram.com/reel/DInlUMjTgAN/?igsh=MTUzZjVxMmh2dDIydg==