newsics.com
ರಾಂಪುರ:ತಂದೆಯೊಬ್ಬ ತನ್ನ ಮಗ ಮದುವೆಯಾಗಬೇಕಾದ ಹುಡುಗಿಯನ್ನು ತಂದೆಯ ಮದುವೆಯಾದ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.
ಶಕೀಲ್ ಎಂಬಾತನೇ ಹೀಗೆ ತನ್ನ ಮಗನ ಭಾವಿ ಪತ್ನಿಯನ್ನು ಮದುವೆಯಾದ ವ್ಯಕ್ತಿ.
ಈತ ಪ್ರಾರಂಭದಲ್ಲಿ ತನ್ನ ಅಪ್ರಾಪ್ತ ಮಗನೊಂದಿಗೆ ಮಹಿಳೆಯೊಬ್ಬಳ ಮದುವೆ ಮಾಡಲು ಮುಂದಾಗಿದ್ದಾನೆ. ಆದರೆ ಕುಟುಂಬ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಈತ ಕುಟುಂಬ ಸದಸ್ಯರ ಮೇಲೆಯೇ ಹಲ್ಲೆ ಮಾಡಿದ್ದಾರೆ. ನಂತರ ಆ ಮಹಿಳೆಯ ಜೊತೆ ದಿನವೂ ಈತ ಫೋನ್‌ನಲ್ಲಿ ಮಾತನಾಡಲು ಶುರು ಮಾಡಿದ್ದಾನೆ ಎಂದು ಶಕೀಲ್‌ನ ಪತ್ನಿ ಶಬಾನ ಎಂಬುವವರು ಆರೋಪ ಮಾಡಿದ್ದಾರೆ. ಶಬಾನ ಜೊತೆ ಈಗಾಗಲೇ ಮದುವೆಯಾಗಿರುವ ಶಕೀಲ್‌ಗೆ ಆರು ಜನ ಮಕ್ಕಳು ಇದ್ದಾರೆ.
ಆತನಿಗೆ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಇರುವ ಬಗ್ಗೆ ಮೊದಲೇ ಸಂಶಯ ಬಂದಿತ್ತು. ಇದಲ್ಲದೇ ಮಹಿಳೆಯೊಬ್ಬಳ ಜೊತೆ ಎರಡು ಬಾರಿ ಆತ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಎಂದು ಶಬಾನಾ ಹೇಳಿದ್ದಾರೆ.