newsics.com
ಒಳ್ಳೆಯ ಸಂಭೋಗ ದೇಹಕ್ಕೆ ಅತ್ಯದ್ಭುತ ರಿಲೀಫ್ ನೀಡುತ್ತದೆ. ದೇಹವನ್ನು ಸದಾ ಚುರುಕಾಗಿ ಇಡುವುದಕ್ಕೂ ಇದು ಸಹಾಯಕ. ಬಲು ದೀರ್ಘ ಕಾಲ ನೀವು ಸೆಕ್ಸ್ ಸುಖ ಅನುಭವಿಸದೇ ಹೋದರೆ, ಅದರ ಪರಿಣಾಮ ದೇಹದ ಮೇಲಾಗುತ್ತದೆ. ಅದು ದೇಹದಲ್ಲಿ ನಾನಾ ರೀತಿ ಕಾಣಿಸಿಕೊಳ್ಳುತ್ತದೆ.
ಹೆಚ್ಚು ಆತಂಕ ಅನುಭವಿಸಬಹುದು: ನೀವು ಒತ್ತಡದಲ್ಲಿರುವಾಗ, ಲೈಂಗಿಕ ಸಕ್ರಿಯತೆಯು ನಿಮ್ಮ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೆಕ್ಸ್ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ನಿಮ್ಮ ದೇಹವು ಬಿಡುಗಡೆ ಮಾಡುವ ಹಾರ್ಮೋನುಗಳು ಒತ್ತಡದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಹೃದ್ರೋಗದ ಅಪಾಯ: ತಿಂಗಳಿಗೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಸಲ ಲೈಂಗಿಕ ಕ್ರಿಯೆ ನಡೆಸುವವರು, ವಾರಕ್ಕೆ ಎರಡು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ನಡೆಸುವವರಿಗಿಂತ ಹೆಚ್ಚು ಹೃದ್ರೋಗವನ್ನು ಹೊಂದುವ ಸಾಧ್ಯತೆ ಇದೆ ಎಂದು ಸಂಶೋಧನೆ ಹೇಳುತ್ತದೆ. ಸ್ವಲ್ಪ ಹೆಚ್ಚು ವ್ಯಾಯಾಮ ಅಥವಾ ವ್ಯಾಯಾಮಕ್ಕೆ ಸಮಾನವಾದ ಸೆಕ್ಸ್ ಮಾಡುವುದರ ಮೂಲಕ ಆತಂಕ ಅಥವಾ ಖಿನ್ನತೆಯಿಂದ ಪಾರಾಗಬಹುದು. ಇದೂ ಅದರ ಒಂದು ಭಾಗ. ನೀವು ಹೆಚ್ಚು ಸೆಕ್ಸ್ ಮಾಡಿದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತೀರಿ.
ಕೊಲೆಸ್ಟ್ರಾಲ್ ಹೆಚ್ಚುತ್ತದೆ: ಮೈತೂಕ ಹೆಚ್ಚಾಗಬಹುದು. ಸೆಕ್ಸ್ ಸಾಮಾನ್ಯವಾಗಿ ನಿಮಿಷಕ್ಕೆ 5 ಕ್ಯಾಲೊರಿಗಳನ್ನು ಸುಡುತ್ತದೆ. ಅದು ವೇಗದ ನಡಿಗೆಗೆ ಸಮಾನ. ಮತ್ತು ನೀವು ಸ್ವಲ್ಪ ಹೆಚ್ಚು ಆಮ್ಲಜನಕ ಸಹ ಬಳಸುತ್ತೀರಿ. ಇದೆಲ್ಲದರ ಕೊರತೆಯಾದಾಗ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ.
ಮನಸ್ಸಿನಲ್ಲಿ ಕಿರಿಕಿರಿ: ದೀರ್ಘಾವಧಿಯಲ್ಲಿ ಇದು ಡಿಪ್ರೆಶನ್‌ಗೆ ಸೇರಬಹುದು. ಲೈಂಗಿಕತೆಯು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಮರೆವಿನ ಕಾಟ: ನಿಯಮಿತ ಲೈಂಗಿಕತೆಗೂ ಒಲ್ಳೆಯ ನೆನಪಿಗೂ ಸಂಬಂಧವಿದೆ. ವಿಶೇಷವಾಗಿ ನೀವು 50ರಿಂದ 89 ವರ್ಷ ವಯಸ್ಸಿನವರಾಗಿದ್ದರೆ ಇದು ಮುಖ್ಯ. ಸೆಕ್ಸ್ ವೇಳೆ ಸೃಷ್ಟಿಯಾಗುವ ಆನಂದದ ಹಾರ್ಮೋನ್‌ಗಳು ಮೆದುಳನ್ನು ಚುರುಕಾಗಿಡುತ್ತವೆ. ಇಲ್ಲದಿದ್ದರೆ ಮೆದುಳು ಮಂಕಾಗುತ್ತದೆ.
ರೋಗನಿರೋಧಕತೆ ಕಡಿಮೆ: ವಾರಕ್ಕೊಮ್ಮೆಯಾದರೂ ಸೆಕ್ಸ್ ಮಾಡುವವರು, ಅದಕ್ಕಿಂತ ಕಡಿಮೆ ಬಾರಿ ಹೊಂದಿರುವವರಿಗೆ ಹೋಲಿಸಿದರೆ ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ.
ದಾಂಪತ್ಯದಲ್ಲಿ ಬಿರುಕು: ಲೈಂಗಿಕತೆಯು ನಿಮ್ಮ ಮೆದುಳನ್ನು “ಆಫ್ಟರ್‌ಗ್ಲೋ” ಎಂಬ ರಾಸಾಯನಿಕದಲ್ಲಿ ಮುಳುಗೇಳಿಸುತ್ತದೆ. ಇದು ಸುಮಾರು 2 ದಿನಗಳವರೆಗೆ ಇರುತ್ತದೆ, ದೀರ್ಘಾವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ನಿಮ್ಮನ್ನು ಬಂಧಿಸಲು ಸಹಾಯ ಮಾಡುತ್ತದೆ. ಇದು ಇಲ್ಲದೆ ಹೋದರೆ ನಿಮ್ಮ ಸಂಬಂಧದ ಪ್ರಮುಖ ಭಾಗವೇ ಕಳಚಬಹುದು.
Air India flight ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ; ತುರ್ತು ಭೂಸ್ಪರ್ಶ