newsics.com
ಯುವತಿ ವಿಚಾರಕ್ಕೆ ಸ್ನೇಹಿತರ ಮಧ್ಯೆ ಗಲಾಟೆ ನಡೆದು ಆ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಬಳಿ ನಡೆದಿದೆ.
24 ವರ್ಷದ ದರ್ಶನ್ನನ್ನು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಆರೋಪಿ ವೇಣುಗೋಪಾಲ್ ನಾಪತ್ತೆಯಾಗಿದ್ದಾನೆ.
ಪಾರ್ಟಿ ಮಾಡಲು ಕರೆದವರು ಕೊನೆಗೆ ಪಾರ್ಟಿ ಮುಗಿಸಿ ಸ್ನೇಹಿತನಿಗೆ ಚಟ್ಟ ಕಟ್ಟಿದ್ದಾರೆ. ಒಟ್ಟಿಗೆ ಸೇರಿ ಕುಡಿದು ಕುಣಿದು ಕುಪ್ಪಳಿಸಿ ಕೊನೆಗೆ ಯುವತಿ ವಿಚಾರಕ್ಕೆ ಜಗಳ ತೆಗೆದಿದ್ದಾರೆ. ಕೊನೆಗೆ ಆ ಜಗಳ ವಿಕೋಪಕ್ಕೆ ತಿರುಗಿ ಕೊಲೆ ಮಾಡುವ ಹಂತಕ್ಕೆ ಹೋಗಿದೆ. ಚಾಕುವಿನಿಂದ ಮನಸೋಯಿಚ್ಛೆ ಭೀಕರವಾಗಿ ಇರಿದು ಸ್ನೇಹಿತನನ್ನೇ ಕೊಲೆ ಮಾಡಿದ್ದಾರೆ.
ಮೇಲ್ನೋಟಕ್ಕೆ ಇಬ್ಬರು ಒಂದೆ ಹುಡುಗಿಯನ್ನ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
.