newsics.com
ಮೊರದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್ನ ಕೊತ್ವಾಲಿ ಮೈನಾಥರ್ನಲ್ಲಿ ಪ್ರೀತಿಸುತ್ತಿದ್ದ ಹುಡುಗಿ ತನ್ನ ಪ್ರೀತಿ ಒಪ್ಪಿಕೊಂಡಿಲ್ಲ ಎಂದು ಹದಿನೆಂಟು ಬಾರಿ ಸ್ಕ್ರೂ ಡ್ರೈವರ್ನಿಂದ ಇರಿದು ಆಕೆಯ ಕೊಲೆ ಮಾಡಿದ ಘಟನೆ ನಡೆದಿದೆ.
ಸೈರಾ ಎಂಬ ಯುವತಿ ಜಾನುವಾರುಗಳಿಗೆ ಮೇವು ತರಲು ಶನಿವಾರ(ಮೇ.31)ರಂದು ಮನೆಯಿಂದ ಹೋದಾಕೆ ವಾಪಸ್ ಬರದಿದ್ದನ್ನು ಕಂಡ ಪೋಷಕರು, ಆಕೆಗಾಗಿ ಎಲ್ಲ ಕಡೆಯೂ ಹುಡುಕಾಡಿದರು. ಮಾರನೆ ದಿನ ಆಕೆಯ ರಕ್ತಸಿಕ್ತ ದೇಹವು ಒಂದು ಹೊಲದಲ್ಲಿ ಸಿಕ್ಕಿತು. ಆಕೆಯ ದೇಹದ ಮೇಲೆ ಹಲವು ಬಾರಿ ಚಾಕುವಿನಿಂದ ಇರಿದ ಗಾಯಗಳಿದ್ದವು. ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದರು
ಸೈರಾ ಕೊಲೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಫೋನ್, ಆಕೆಯ ಮೊಬೈಲ್ನಲ್ಲಿ ಐದು ಮಿಸ್ಡ್ ಕಾಲ್ಗಳು ಇರುವುದು ಪೊಲೀಸರಿಗೆ ತಿಳಿಯಿತು. ಆ ಕರೆಗಳು ಬಂದ ನಂಬರ್ ಅನ್ನು ಪತ್ತೆ ಮಾಡಿದಾಗ, ಅದು ಸೈರಾಳ ಗ್ರಾಮದಲ್ಲಿಯೇ ವಾಸಿಸುವ ರಫಿ ಎಂಬಾತನದು ಎಂದು ತಿಳಿದುಬಂದಿದೆ. ಪೊಲೀಸರು ರಫಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.
ವಿಚಾರಣೆಯ ಸಮಯದಲ್ಲಿ, ರಫಿ ಸೈರಾನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ನಾನು ಸೈರಾನನ್ನು ಪ್ರೀತಿಸುತ್ತಿದ್ದೆ, ಆದರೆ ಅವಳು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ. ಕೆಲವು ದಿನಗಳ ಹಿಂದೆ, ಅವಳು ಗ್ರಾಮದ ವ್ಯಕ್ತಿಯಿಂದ ನನಗೆ ಹೊಡೆಸಿದ್ದಳು. ಸೈರಾಳಿಗೆ ಆ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ನಾನು ಅನುಮಾನಿಸಿದೆ.
ಸೈರಾ ನೋವಿನಿಂದ ನರಳಾಡುತ್ತಿದ್ದಾಗ ಮತ್ತು ತನ್ನ ಪ್ರಾಣಕ್ಕಾಗಿ ಬೇಡಿಕೊಂಡಾಗ, ರಫಿ ಸ್ಕ್ರೂಡ್ರೈವರ್ನಿಂದ ಆಕೆಯ ಖಾಸಗಿ ಭಾಗಗಳಿಗೆ ಚುಚ್ಚಿದನು. ಸ್ವಲ್ಪ ಸಮಯದ ನಂತರ ಅವಳು ಸತ್ತಳು. ನಂತರ ಆಕೆಯನ್ನು ಅಲ್ಲಾಡಿಸಿದನು. ಆಕೆ ಸತ್ತಿದ್ದಾಳೆ ಎಂದು ಖಚಿತಪಡಿಸಿಕೊಂಡ ನಂತರ, ಅವನು ಮನೆಗೆ ಹೋಗಿ ಸ್ನಾನ ಮಾಡಿ, ಬಟ್ಟೆ ಬದಲಾಯಿಸಿ ಮಲಗಿದ್ದಾನೆ.