newsics.com
ಶಿವಮೊಗ್ಗ : ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹಾಸ್ಟೆಲ್ನಲ್ಲಿ ಬೆಂಗಳೂರು ಮೂಲದ ವಿಷ್ಣುಪ್ರಿಯ(22) ನೇಣಿಗೆ ಶರಣಾಗಿದ್ದಾಳೆ.
ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿಷ್ಣುಪ್ರಿಯ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಳು.
ಹಾಸ್ಟೆಲ್ನಲ್ಲಿ ಬೆಂಗಳೂರು ಮೂಲದ ವಿಷ್ಣುಪ್ರಿಯ ಇದೀಗ ನೇಣಿಗೆ ಶರಣಾಗಿದ್ದಾಳೆ.ವಿದ್ಯಾರ್ಥಿನಿ ವಿಷ್ಣುಪ್ರಿಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಆದರೆ ಇಂಟರ್ನಶಿಪ್ ಮುಗಿಯಲು 10 ದಿನಗಳು ಮಾತ್ರ ಬಾಕಿ ಉಳಿದಿತ್ತು. ಮೃತ ವಿದ್ಯಾರ್ಥಿನಿಯ ಪೋಷಕರು ಬರ್ಲಿನ್ ನಲ್ಲಿ ಇದ್ದಾರೆ. ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.