newsics.com
ಶುಭೋದಯ
ಈ ದಿನದ ಪಂಚಾಂಗ
6 ಜುಲೈ 2024, ಶನಿವಾರ
***
ಇಂದಿನ ವಿಶೇಷ
* ಆಷಾಢ ಮಾಸ ಆರಂಭ
* ಪುರಿ ಜಗನ್ನಾಥ ರಥಯಾತ್ರೆ
* ಶ್ರೀ ವಲ್ಲಭಾಚಾರ್ಯ ವೈಕುಂಠ ಗಮನ
***
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 06/07/2024
ತಿಂಗಳು – ಜುಲೈ
ಬಣ್ಣ – ನೀಲಿ
ವಾರ – ಶನಿವಾರ
ತಿಥಿ – ಪಾಡ್ಯ 28:25:29*
ಪಕ್ಷ – ಶುಕ್ಲ
ನಕ್ಷತ್ರ – ಪುನರ್ವಸು 28:46:47*
ಯೋಗ – ವ್ಯಾಘಾತ 26:45:49
ಕರಣ – ಕಿಂಸ್ತುಘ್ನ 16:21:50
ಕರಣ – ಭವ 28:25:29
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ- ಮಿಥುನ till 22:33:24
ಚಂದ್ರ ರಾಶಿ- ಕರ್ಕಾಟಕ from 22:33:24
ಸೂರ್ಯ ರಾಶಿ- ಮಿಥುನ
ಋತು- ಗ್ರೀಷ್ಮ
ಅಯನ- ಉತ್ತರಾಯಣ
ಸೂರ್ಯೋದಯ- 05:59:51
ಸೂರ್ಯಾಸ್ತ- 18:49:05
ಹಗಲಿನ ಅವಧಿ- 12:49:13
ರಾತ್ರಿಯ ಅವಧಿ- 11:11:03
ಚಂದ್ರೋದಯ- 06:19:29
ಚಂದ್ರಾಸ್ತ- 19:26:34
ರಾಹು ಕಾಲ- 09:12 – 10:48 ಅಶುಭ
ಯಮಘಂಡ ಕಾಲ- 14:01 – 15:37 ಅಶುಭ
ಗುಳಿಕ ಕಾಲ- 05:59 – 07:36
ಅಭಿಜಿತ್- 11:59 – 12:50 ಶುಭ
ದುರ್ಮುಹೂರ್ತ- 07:42 – 08:34 ಅಶುಭ
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

ಈ ದಿನದ ಮಾತು
ಪ್ರೀತಿ ಎಂದರೆ ಯಾರನ್ನಾದರೂ ನಿಮ್ಮ ಭಾಗವಾಗಿ ಸೇರಿಸಿಕೊಳ್ಳುವ ಹಂಬಲ. ಈ ಸೇರ್ಪಡೆಯಿಂದ ನೀವು ಏನಾಗಿದ್ದೀರೋ ಅದಕ್ಕಿಂತ ಉತ್ಕೃಷ್ಟವಾಗುವ ಅವಕಾಶ ಸದಾ ಇದೆ.
– ಸದ್ಗುರು ಜಗ್ಗಿ ವಾಸುದೇವ್
—
ಇಂದಿನ ಇತಿಹಾಸ
ಜುಲೈ 6
ಪ್ರಮುಖ ಘಟನೆಗಳು
* ಆರ್. ಜಿ. ಭಂಡಾರ್ಕರ್ – ರಾಮಕೃಷ್ಣ ಗೋಪಾಲರಾವ್ ಭಂಡಾರ್‍ಕರ್ ಭಾರತದ ಒಬ್ಬ ಬಹು ದೊಡ್ಡ ವಿದ್ವಾಂಸರು ಹಾಗೂ ಸಂಶೋಧಕರು. ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಾಲವಣ್ ಎಂಬಲ್ಲಿ 1837 ವರ್ಷದ ಜುಲೈ 06 ರಂದು ಜನಿಸಿದರು.
ಭಾರತೀಯ ಜನಸಂಘ ರಾಜಕೀಯ ಪಕ್ಷದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ – 06 ಜುಲೈ 1901 ರಂದು ಜನಿಸಿದರು. ಒಬ್ಬ ಭಾರತೀಯ ರಾಜಕಾರಣಿ, ನ್ಯಾಯವಾದಿ ಮತ್ತು ಶಿಕ್ಷಣ ತಜ್ಞರಾಗಿದ್ದರು. ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಸಚಿವ ಸಂಪುಟದಲ್ಲಿ “ಕೈಗಾರಿಕೋದ್ಯಮ ಮತ್ತು ಸರಬರಾಜು (ವಾಣಿಜ್ಯೋದ್ಯಮ) ಸಚಿವರಾಗಿ ಕಾರ್ಯನಿರ್ವಹಿಸಿದರು. ಮುಖರ್ಜಿ ಅವರು 1951 ರಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಅದು ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂಚೂಣಿಯ ಬಲಪಂಥೀಯ ರಾಷ್ಟ್ರೀಯ ರಾಜಕೀಯ ಪಕ್ಷವಾಯಿತು.
* ಭಾರತದ ನಾಲ್ಕನೇ ಉಪ ಪ್ರಧಾನಿಯಾಗಿದ್ದ ಬಾಬು ಜಗಜೀವನ ರಾಮ್ – ಜುಲೈ 06, 1986 ರಂದು ನಿಧನರಾದರು. “ಬಾಬೂಜಿ” ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು.
* ಭಾರತೀಯ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆ ಕಾರರಾದ ಚೇತನ್ ಆನಂದ್ ಜುಲೈ 06, 1997 ರಂದು ನಿಧನರಾದರು.