Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > SUPREME COURT ವಿದೇಶಿ ವಲಸಿಗರೆಲ್ಲರಿಗೂ ಆತಿಥ್ಯ ನೀಡಲು ಭಾರತ ಏನು ಧರ್ಮಶಾಲೆಯೇ – ಸುಪ್ರೀಂ ಕೋರ್ಟ್
ದೇಶ

SUPREME COURT ವಿದೇಶಿ ವಲಸಿಗರೆಲ್ಲರಿಗೂ ಆತಿಥ್ಯ ನೀಡಲು ಭಾರತ ಏನು ಧರ್ಮಶಾಲೆಯೇ – ಸುಪ್ರೀಂ ಕೋರ್ಟ್

Share
1 Min Read
SHARE

newsics.com

ಹೊಸದಿಲ್ಲಿ: ವಿದೇಶಿ ವಲಸಿಗರೆಲ್ಲರಿಗೂ ಆತಿಥ್ಯ ನೀಡಲು ಭಾರತ ಏನು ಧರ್ಮಶಾಲೆಯೇ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ಸೋಮವಾರ ಶ್ರೀಲಂಕಾ ತಮಿಳು ವಲಸಿಗನ ಅರ್ಜಿ ತಿರಸ್ಕರಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯಡಿ ದಾಖಲಾದ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ಮುಗಿಸಿದ ನಂತರ ಶ್ರೀಲಂಕಾ ಪ್ರಜೆಯಾದ ಅರ್ಜಿದಾರನನ್ನು ದೇಶ ತೊರೆಯುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿತು.

“ಭಾರತ ಜಗತ್ತಿನೆಲ್ಲೆಡೆಯ ನಿರಾಶ್ರಿತರಿಗೆ ಆಶ್ರಯ ನೀಡಬೇಕೇ? ನಾವು 140 ಕೋಟಿ ಜನರೊಂದಿಗೆ ಕಷ್ಟಪಡುತ್ತಿದ್ದೇವೆ. ಇದು ಪ್ರಪಂಚದ ವಿದೇಶಿ ಪ್ರಜೆಗಳಿಗೆ ಮನರಂಜನೆ ನೀಡುವ ಧರ್ಮಶಾಲೆಯಲ್ಲ” ಎಂದು ನ್ಯಾಯಪೀಠ ಹೇಳಿತು.
ಶ್ರೀಲಂಕಾ ತಮಿಳು ‘ಭಯೋತ್ಪಾದಕ ಸಂಘಟನೆ ಎಲ್‌ಟಿಟಿಇ ಸಂಪರ್ಕ ಹೊಂದಿದ್ದ ಆರೋಪದಲ್ಲಿ ೨೦೧೫ರಲ್ಲಿ ಬಂಧಿಸಲ್ಪಟ್ಟಿದ್ದ ಶ್ರೀಲಂಕಾ ತಮಿಳಿಗನ ವಲಸೆ ಅರ್ಜಿ ಸಲ್ಲಿಸಿದ್ದ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಕೆ. ವಿನೋದ್ ಚಂದ್ರನ್ ಅವರ ದ್ವಿಸದಸ್ಯ ಪೀಠ ತಿರಸ್ಕರಿಸಿದೆ.

ಅರ್ಜಿದಾರ ಶ್ರೀಲಂಕಾ ಪ್ರಜೆಯ ಪರ ವಕೀಲರು ವಿಚಾರಣೆಯ ವೇಳೆ ವಾದಿಸಿ, ನಮ್ಮ ಕಕ್ಷಿದಾರರು ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ)ನ ಮಾಜಿ ಸದಸ್ಯರು. ಹಾಗಾಗಿ ಅವರ ದೇಶದಲ್ಲಿ ಬಂಧನ ಮತ್ತು ಚಿತ್ರಹಿಂಸೆ ಭೀತಿ ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಅವರ ಪತ್ನಿ ಮತ್ತು ಮಕ್ಕಳು ಭಾರತದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು

ವಲಸಿಗನ ಅರ್ಜಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ದತ್ತ, ವಿಶ್ವದ ವಲಸಿಗರೆಲ್ಲರಿಗೂ ಭಾರತ ಆತಿಥ್ಯ ನೀಡಬೇಕೆ? ನಾವು ಈಗಾಗಲೇ ೧೪೦ ಕೋಟಿ ಜನಸಂಖ್ಯೆಯೊಂದಿಗೆ ಪರದಾಡುತ್ತಿದ್ದೇವೆ. ವಿದೇಶಿ ವಲಸಿಗರೆಲ್ಲರಿಗೂ ಆತಿಥ್ಯ ನೀಡಿ ಸತ್ಕರಿಸಲು ಭಾರತ ಏನು ಧರ್ಮಛತ್ರವೇ ಎಂದಿದ್ದಾರೆ. ವಿಧಿ ೨೧ ಮತ್ತು ವಿಧಿ ೧೯ರ ಅಡಿ ಭಾರತದಲ್ಲಿ ನೆಲೆಸಲು ಅವಕಾಶ ಕಲ್ಪಿಸಬೇಕು ಎಂಬ ಅರ್ಜಿದಾರನ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಭಾರತದಲ್ಲಿ ನೆಲೆಸಲು ನಿಮಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದೆ. ಬೇರೆ ದೇಶಕ್ಕೆ ವಲಸೆ ಹೋಗಿ ಎಂದು ಖಡಕ್ ಸೂಚನೆ ನೀಡಿದೆ.

TAGGED:#suprmecourt #rejected #SriLankan #Tamil #immigrant
Share This Article
Facebook Twitter Copy Link Print
Previous Article Operation Sindoora ಬಿಜೆಪಿಯಿಂದ ಆಪರೇಷನ್ ಸಿಂಧೂರ ಬಗ್ಗೆ ಹೊಸ ಹಾಡು ಬಿಡುಗಡೆ
Next Article Viral ಯಾವುದೇ ರಕ್ಷಣೆ ಇಲ್ಲದೆ ಜೇನುಗೂಡಿನಿಂದ ಜೇನು ತೆಗೆದ ವ್ಯಕ್ತಿ – ವೈರಲ್ ವಿಡಿಯೋ ನೋಡಿ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?