newsics.com
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಪಾಕಿಸ್ತಾನ-ಕೃಪಾಪೋಷಿತ ಉಗ್ರರು ಎಸಗಿದ ಪೈಶಾಚಿಕ ಕೃತ್ಯಕ್ಕೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ.ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಜೆಎಫ್ -17 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದೆ. ಪಾಕಿಸ್ತಾನಕ್ಕೆ ಜೆಎಫ್ -17 ಯುದ್ಧ ವಿಮಾನವನ್ನು ಚೀನಾ ನೀಡಿತ್ತು. ಇದೀಗ ಚೀನಾ ನೀಡಿದ್ದ ಯುದ್ಧ ವಿಮಾನ ಉಡೀಸ್ ಆಗಿದೆ.
ಭಾರತೀಯ ಸೇನೆ ಮತ್ತು ವಾಯುಪಡೆ ಒಟ್ಟಾಗಿ ಪಾಕ್ನಲ್ಲಿರೋ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿವೆ. ಭಾರತವು ಡ್ರೋನ್ ಗಳು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಸತತ 24 ದಾಳಿಗಳನ್ನು ನಡೆಸುವ ಮೂಲಕ ಪಾಕಿಸ್ತಾನದ ವನ್ನೇ ನಡುಗಿಸಿದೆ.
ಜೆಎಫ್ -17 ಯುದ್ಧ ವಿಮಾನ ಹೊಡೆದುರುಳಿಸಲು ಭಾರತ ರಫೇಲ್ ಯುದ್ಧ ವಿಮಾನ ಬಳಸಿದೆ ಎಂದು ಹೇಳಲಾಗಿದೆ. ಭಾರತೀಯ ವಾಯುಪಡೆಯ ದಾಳಿಗೆ ನೆಲಕ್ಕಪ್ಪಳಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಆಪರೇಷನ್ ಸಿಂಧೂರ್ ಅನ್ನು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ ಜಂಟಿಯಾಗಿ ನಡೆಸಿವೆ. ಐಎಎಫ್ ಫೈಟರ್ ಜೆಟ್ಗಳು ವೈಮಾನಿಕ ದಾಳಿ ನಡೆಸಿದರೆ, ಸೇನೆಯು ಕ್ಷಿಪಣಿಗಳನ್ನು ಉಡಾಯಿಸಿದೆ.