newsics.com
ಪ್ರಾಣಿಗಳ ಪ್ರೀತಿಯೆ ಹಾಗೆ ನಿಷ್ಕಲ್ಮಷವಾದದ್ದು. ಸಾಸುವೆಕಾಳಷ್ಟು ಪ್ರೀತಿ ತೋರಿಸಿದ್ರು, ಬೆಟ್ಟದಷ್ಟು ಪ್ರೀತಿ ಕೊಡುತ್ತವೆ ಮೂಕ ಪ್ರಾಣಿಗಳು. ಬೆಟ್ಟದಷ್ಟು ಪ್ರೀತಿ ತೋರಿಸಿದರು ಸಮುದ್ರದಷ್ಟು ನೋವು ಕೊಡುವರು ಮನುಷ್ಯರು. ಪ್ರಾಣಿಗಳು ತಮ್ಮನ್ನು ಸಾಕಿದ ಮಾಲೀಕರಿಗೆ ಪ್ರೀತಿಯನ್ನು ತೋರಿಸುತ್ತ ಜೀವನಪರ್ಯಂತ ಜೊತೆಗೆ ಇರುತ್ತವೆ. ಈ ಮೂಕ ಪ್ರಾಣಿಗಳ ಜೊತೆಗೆ ಒಡನಾಟ ಇಟ್ಟುಕೊಂಡಿರುತ್ತಾರೆ. ನೀವೇನು ಮಾಡಿದರು ಈ ಮುಗ್ಧ ಜೀವಿಗಳು ಮಾತ್ರ ಮನೆಯವರನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ.
ಕೆಲವರು ತಮ್ಮ ಹೆಸರು ಅಥವಾ ಪ್ರೀತಿ ಪಾತ್ರರರ ಟ್ಯಾಟೂ ಹಾಕಿಸಿಕೊಂಡರೇ ಯುವತಿಯೊಬ್ಬಳು ತನ್ನ ಪ್ರೀತಿಯ ಹೋರಿಯ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುವತಿಯೂ ತನ್ನ ಕೈಯ ಮೇಲೆ ಹಾಕಿಸಿಕೊಂಡಿರುವ ಹೋರಿಯ ಟ್ಯಾಟೂವನ್ನು ರಿವೀಲ್ ಮಾಡಿದ್ದಾಳೆ. ಈ ವಿಡಿಯೋ rashmeeta7372 ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಯುವತಿಯೂ ತನ್ನ ಪ್ರೀತಿಯ ಹೋರಿಯ ಟ್ಯಾಟೂ ಹಾಕಿಸಿಕೊಂಡಿರುವುದನ್ನು ನೋಡಬಹುದು. ಹೋರಿಯ ಫೋಟೋದೊಂದಿಗೆ ನನ್ನ ಸೋನ್ಯಾ ಎಂದು ಟ್ಯಾಟೂ ಹಾಕಿಸಿಕೊಂಡಿದ್ದು, ಈ ಟ್ಯಾಟೂವನ್ನು ಹೋರಿಗೆ ತೋರಿಸಿ ಇದು ಯಾರು ಎಂದು ಕೇಳಿದ್ದಾಳೆ. ಈ ವೇಳೆ ಯಲ್ಲಿ ತಕ್ಷಣವೇ ಹೋರಿಯೂ ಎದ್ದು ನಿಲ್ಲುವುದನ್ನು ನೋಡಬಹುದು. ಸದ್ಯ ಈ ವಿಡಿಯೋ ನೋಡಿದ ಬಳಕೆದಾರರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.
https://www.instagram.com/reel/DJK2JqWIrue/?igsh=MWxidDZwMHhibnM4ZQ==