newsics.com
ಕಾಶ್ಮೀರದಲ್ಲಿ ನಡೆದ ನರಮೇಧಕ್ಕೆ ದೇಶದಾದ್ಯಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಮಾಯಕ ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕನ್ನು ಬಲಿ ತೆಗೆದುಕೊಳ್ಳಬೇಕು ಎಂದು ಜನ ಕಿಡಿ ಕಾರಿದ್ದಾರೆ. , ಕೇಂದ್ರ ಸರ್ಕಾರ ಉಗ್ರರ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ಎನ್‌ಐಎ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನೇತೃತ್ವ ವಹಿಸಿದ್ದ ಉಗ್ರಗಾಮಿ ಹಾಶಿಮ್ ಮೂಸಾ ಎಂದು ಬಹಿರಂಗಪಡಿಸಿದೆ.
ಭಯೋತ್ಪಾದಕ ಪಾಕಿಸ್ತಾನದ ವಿಶೇಷ ಪಡೆಗಳ ಪ್ಯಾರಾ-ಕಮಾಂಡೋ ಆಗಿದ್ದ ಎನ್ನಲಾಗಿದ್ದು, ಮೂಲಗಳ ಪ್ರಕಾರ, ಆರೋಪಿ ಮೂಸಾ ಪ್ರಸ್ತುತ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ (LeT) ಸದಸ್ಯನಾಗಿದ್ದಾನೆ.
ಈ ಸಂಬಂಧ 15 ಕಾಶ್ಮೀರಿ ಓವರ್‌ಗ್ರೌಂಡ್ ವರ್ಕರ್ಸ್ ಗಳನ್ನು ವಿಚಾರಣೆ ನಡೆಸಲಾಗಿದೆ. ಈ ವಿಚಾರಣೆಯ ಸಮಯದಲ್ಲಿ ಉಗ್ರ ಹಶೀಮ್ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ ಎಂದು ತಿಳಿದುಬಂದಿದೆ. , ಈ ಹಿಂದೆ ಕಾಶ್ಮೀರದಲ್ಲಿ ನಡೆದ ಗಗಂಗೀರ್ ಮತ್ತು ಬುಟಾ ಪಥ್ರಿಯ ದಾಳಿಯಲ್ಲೂ ISI ಕೈವಾಡವಿತ್ತು ಎಂದು ಶಂಕಿಸಲಾಗಿದೆ.
ಹಾಶಿಮ್ ಮೂಸಾ ಪಾಕಿಸ್ತಾನ ಸೇನೆಯ ವಿಶೇಷ ಪಡೆಗಳಾದ ಸ್ಪೆಷಲ್ ಸರ್ವಿಸ್ ಗ್ರೂಪ್‌ನ (SSG) ತರಬೇತಿ ಪಡೆದ ಮಾಜಿ ಕಮಾಂಡೋ. ತನ್ನ ಸೇನಾ ಕೌಶಲ್ಯ ಮತ್ತು ಯುದ್ಧ ತಂತ್ರಗಳ ಜ್ಞಾನವನ್ನು ಬಳಸಿಕೊಂಡು ಆತ ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕ ಸಂಘಟನೆಗೆ ಸೇರಿದ್ದನು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಿಳಿಸಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ನೇರ ಬೆಂಬಲದೊಂದಿಗೆ ಈ ದಾಳಿಯನ್ನು ಯೋಜಿಸಿದ್ದಾನೆ ಎಂದು ಆರೋಪಿಸಲಾಗಿದೆ.