newsics.com
ಬೆಂಗಳೂರು: ಕ್ಯಾಡಬಾಂಬ್ ಒಕಾಮಿ ಎಂಬ ಅಪರೂಪದ “ವೂಲ್ಫ್‌ಡಾಗ್” ಗೆ 50 ಕೋಟಿ ರೂ. ನಾಯಿ ಖರೀದಿಸಿದ್ದೇನೆ ಎಂದು ಹೇಳಿಕೆ ನೀಡಿದ್ದ ಬೆಂಗಳೂರು ಮೂಲದ ಶ್ವಾನ ಪ್ರೇಮಿಯೊಬ್ಬರು ಎಂಬವರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ, ಮನೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಹಲವು ಸತ್ಯಗಳು ಬಹಿರಂಗವಾಗಿದೆ.
ಜೆಪಿ ನಗರದಲ್ಲಿರುವ ಸತೀಶ್‌ನ ನಿವಾಸದ ಮೇಲೆ ಇಡಿ ಅಧಿಕಾರಿಗಳ ತಂಡವು ಬುಧವಾರ ಬೆಳಗ್ಗೆ ದಾಳಿ ನಡೆಸಿತು. ಈ ವೇಳೆ ಮನೆಯಲ್ಲಿ ವಿವಿಧ ದಾಖಲೆಗಳು ಮತ್ತು ಆಸ್ತಿಗಳನ್ನು ಪರಿಶೀಲನೆ ನಡೆಸಲಾಯಿತು. ಸತೀಶ್‌ನ ಹೇಳಿಕೆಯಂತೆ ಕಾಕೇಸಿಯನ್ ಶೆಫರ್ಡ್ ತಳಿಯ ನಾಯಿಯ ಬೆಲೆ 50 ಕೋಟಿ ಸುಳ್ಳು ಎಂದು ತಿಳಿದು ಬಂದಿದೆ.
ಬೇರೆಯವರಿಂದ ನಾಯಿಗಳನ್ನ ಬಾಡಿಗೆ ಪಡೆದು ಸತೀಶ್ ವಿಡಿಯೋ ಮಾಡಿಕೊಳ್ಳುತ್ತಿದ್ದ. ಕೋಟ್ಯಾಂತರ ರೂಪಾಯಿ ಗೆ ವಿದೇಶಿ ನಾಯಿ ಖರೀದಿ ಎಂದು ಹೇಳಿಕೊಳ್ಳುತ್ತಿದ್ದ. ಆತನ ವ್ಯವಹಾರ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಬಗ್ಗೆ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾಗ ಇಡೀ ವ್ಯವಹಾರ ಬಯಲಾಗಿದೆ.
https://www.newsics.com/2025/04/17/rape-of-11-year-old-deaf-mute-minor-girl/