newsics.com
ತರಕಾರಿ ಕದ್ದರೆಂಬ ಕ್ಷುಲ್ಲಕ ಕಾರಣಕ್ಕೆ ತಾಯಿ ಮತ್ತು ಮಗಳ ಮೇಲೆ ಭದ್ರತಾ ಸಿಬ್ಬಂದಿಯಿಬ್ಬರು ಹಲ್ಲೆ ನಡೆಸಿದ್ದಾರೆಂ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,
ಮಹಿಳೆ ತನ್ನ ಪತಿ ಮತ್ತು ಮಗಳೊಂದಿಗೆ ವಿಲೇವಾರಿ ಮಾಡಬೇಕಿದ್ದ ತರಕಾರಿಗಳನ್ನು ತೆಗೆದುಕೊಳ್ಳಲು ಮಾರುಕಟ್ಟೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ಭದ್ರತಾ ಸಿಬ್ಬಂದಿ ಅವರನ್ನು ತಡೆದು ಕಳ್ಳತನದ ಆರೋಪ ಹೊರಿಸಿ ಹಲ್ಲೆ ನಡೆಸಿದ್ದಾರೆ. ವಿಡಿಯೋದಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಬಾಲಕಿಯನ್ನು ಕೂದಲು ಹಿಡಿದು ಎಳೆಯುತ್ತಿರುವುದು ಮತ್ತು ಆಕೆ ಸಹಾಯಕ್ಕಾಗಿ ಕೂಗುತ್ತಿದ್ದರೂ ಆಕೆಯ ಹೊಟ್ಟೆಗೆ ಒದೆಯುತ್ತಿರುವುದು ಕಾಣಿಸುತ್ತದೆ. ಮತ್ತೊಬ್ಬ ಸಿಬ್ಬಂದಿ ಮಹಿಳೆಯನ್ನು ಕೂದಲು ಹಿಡಿದು ಎಳೆದು ದಪ್ಪ ಕೋಲಿನಿಂದ ಥಳಿಸುತ್ತಿದ್ದಾನೆ.
ಸಾರ್ವಜನಿಕರ ತೀವ್ರ ವಿರೋಧದ ನಂತರ ಅನಿಲ್ ತಿವಾರಿ ಮತ್ತು ಆದಿತ್ಯಸಿಂಗ್ ರಾಜೇಶ್ಸಿಂಗ್ ಎಂಬ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.
https://www.newsics.com/2025/04/12/young-man-hides-girlfriend-in-suitcase-to-bring-her-into-hostel/