newsics.com
ಪಾಟ್ನ: ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿಯವರ ಮೊಮ್ಮಗಳನ್ನು ಅವರ ಪತಿಯೇ ಗುಂಡಿಕ್ಕಿ ಕೊಲೆಗೈದ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.
ಹತ್ಯೆಗೀಡಾದ ಮಹಿಳೆಯನ್ನು ಸುಷ್ಮಾ ದೇವಿ ಎಂದು ತಿಳಿದು ಬಂದಿದೆ. ಹತ್ಯೆಗೀಡಾದ ಮಹಿಳೆಯ ಪತಿ ರಮೇಶ್ ಇಂದು (ಏ.9) ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಲಸದಿಂದ ಮನೆಗೆ ಹಿಂದಿರುಗಿದ್ದರು. ಈ ವೇಳೆ ಅವರ ನಡುವೆ ಜಗಳ ಪ್ರಾರಂಭವಾಗಿದೆ. ಜಗಳದ ಸಮಯದಲ್ಲಿ ರಮೇಶ್ ಕಂಟ್ರಿ ಪಿಸ್ತೂಲ್ ತೆಗೆದುಕೊಂಡು ಪೂನಂ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಆಕೆ ಸ್ಥಳದ್ಲಲೇ ಸಾವಿಗೀಡಾಗಿದ್ದು, ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
https://www.newsics.com/2025/04/09/andhra-boy-marries-miss-america/