newsics.com
ದಾವಣಗೆರೆ: ಬೈಕ್ ಸವಾರನೊಬ್ಬ ಸಿಗ್ನಲ್ ಜಂಪ್ ಮಾಡಲು ಹೋಗಿ ಎದುರಿಗೆ ಬಂದ ಟಾಟಾ ಏಸ್‍ಗೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ದಾವಣಗೆರೆಯ ಡಿಸಿ ಆಫೀಸ್ ಸರ್ಕಲ್‍ನಲ್ಲಿ ನಡೆದಿದೆ.
ಮೈಕಲ್ ಕುಮಾರ್ (24) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಸಿಗ್ನಲ್ ಬಿಟ್ಟ ಬಳಿಕ ಡಿಸಿ ಕಚೇರಿ ಕಡೆಯಿಂದ ಟಾಟಾ ಏಸ್ ವಾಹನ ಹೊರಟಿದೆ. ಈ ವೇಳೆ ರೆಡ್ ಸಿಗ್ನಲ್ ಇದ್ದರೂ ಬೈಕ್ ಸವಾರ ಅಜಾಗರೂಕತೆಯಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದಿದ್ದಾನೆ. ಪರಿಣಾಮ ಬೈಕ್ ಟಾಟಾ ಏಸ್‍ನ ಮಧ್ಯ ಭಾಗಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
https://www.newsics.com/2025/04/07/new-government-rules-for-goa-tourists/