newsics.com
ರಾಜಮನೆತನದ ವಂಶಾವಳಿಯಿಂದಾಗಿ ಸೈಫ್ ಅಲಿ ಖಾನ್ ಹಿಂದಿ ಚಲನಚಿತ್ರೋದ್ಯಮದ ನವಾಬ ಎಂದು ಪ್ರಸಿದ್ಧರಾಗಿದ್ದಾರೆ. ಇದೀಗ ಸೈಫ್ ಅಲಿ ಖಾನ್ ತಮ್ಮ ನೆಚ್ಚಿನ ಸುಗಂಧ ದ್ರವ್ಯದ ಬಗ್ಗೆ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೈಫ್ ಅಲಿ ಖಾನ್, ತಮ್ಮ ನೆಚ್ಚಿನ ಸುಗಂಧ ದ್ರವ್ಯದ ಬಾಟಲಿಯನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ. ಅವರು ಬ್ರಾಂಡ್ನ ಹೆಸರನ್ನು ಹೇಳಲಲ್ಲಿ. ಅಭಿಮಾನಿಗಳು ಮತ್ತು ಸುಗಂಧ ದ್ರವ್ಯ ಪ್ರಿಯರು ಕಾಮೆಂಟ್ ವಿಭಾಗದಲ್ಲಿ ಬ್ರಾಂಡ್ ಮತ್ತು ಹೆಸರನ್ನು ಊಹಿಸಿದ್ದಾರೆ. ಸೈಫ್ ಅಲಿ ಖಾನ್ ಅವರು ಮಾತನಾಡುತ್ತಿರುವ ಸುಗಂಧ ದ್ರವ್ಯವು “ಅಜ್ಮಲ್ ದಹಾಬ್ ವಿಸಾಲ್” ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಬ್ರಾಂಡ್ನ ಅಧಿಕೃತ ವೆಬ್ಸೈಟ್ನಲ್ಲಿ 50 ಮಿಲಿ ಬಾಟಲಿಯ ಬೆಲೆ ₹3,200 ಇದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಸುಗಂಧ ದ್ರವ್ಯದ ಬೆಲೆಯನ್ನು ಕಂಡು ದಂಗಾಗಿದ್ದಾರೆ. ಮತ್ತು ಉತ್ತಮ ರೆಸ್ಟೋರೆಂಟ್ನಲ್ಲಿ ಇಬ್ಬರಿಗೆ ಊಟ ಮಾಡಿದರೆ ಇದಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ. ತನ್ನ ನೆಚ್ಚಿನ ಸುಗಂಧ ದ್ರವ್ಯದ ಬಗ್ಗೆ ಮಾತನಾಡುತ್ತಿದ್ದಾರೋ ಅಥವಾ ಇದು ಜಾಹೀರಾತು ವೀಡಿಯೊವೇ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ.
https://www.instagram.com/reel/DCZGr3tyeD6/?igsh=MTIyemN4d3phdjJkNA==
https://www.newsics.com/2025/03/30/earthquake-shocks-couple-romancing-in-swimming-pool/