Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > actor Darshan ಬೇಕಿದ್ರೆ ಹಸು ಸಾಕ್ಕೊಂಡಿರ್ತೀನಿ ಎಂದಿದ್ದೇಕೆ ನಟ ದರ್ಶನ್?
ಕರ್ನಾಟಕಪ್ರಮುಖಮನರಂಜನೆ

actor Darshan ಬೇಕಿದ್ರೆ ಹಸು ಸಾಕ್ಕೊಂಡಿರ್ತೀನಿ ಎಂದಿದ್ದೇಕೆ ನಟ ದರ್ಶನ್?

Share
1 Min Read
SHARE

newsics.com

ಬೆಂಗಳೂರು: ಇಂಡಸ್ಟ್ರಿಯಲ್ಲಿರುವ ಬಹಳಷ್ಟು ಜನ ಬೇರೆ ಬೇರೆ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ನಾವು ಕೆಲವರು ಮಾತ್ರ ಇಲ್ಲಿಗೆ ಸೀಮಿತವಾಗಿ ಕನ್ನಡ ಚಿತ್ರಗಳನ್ನಷ್ಟೇ ಮಾಡುತ್ತಿದ್ದೇವೆ. ನೀವು ಕನ್ನಡ ಸಿನಿಮಾಗಳನ್ನು ನೋಡದಿದ್ದರೆ ನಾವು ಇಲ್ಲಿಂದ ಬೇರೆಲ್ಲೋ ಹೋಗೋದಿಲ್ಲ. ತೋಟ, ಹಸು ಸಾಕಿಕೊಂಡು ಬದುಕ್ತೀವಿ ಎಂದು ನಟ ದರ್ಶನ್ ಹೇಳಿದ್ದಾರೆ.

ಧನ್ವೀರ್‌ ನಟನೆಯ ‘ವಾಮನ’ ಸಿನಿಮಾದ ಟ್ರೇಲರನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ದರ್ಶನ್‌, ‘ಈ ಸಿನಿಮಾದ ಮುದ್ದು ರಾಕ್ಷಸಿ ಹಾಡು ನನಗಿಷ್ಟ. ನನ್ನ ಹೆಂಡತಿ ಸಿಟ್ಟಲ್ಲಿ ಕಯ್ಯ ಕಯ್ಯ ಅಂದರೆ ಆಕೆಯನ್ನು ಮುದ್ದು ರಾಕ್ಷಸಿ ಅಂತ ಕರೀತೀನಿ’ ಎಂದೂ ಹೇಳಿದ್ದಾರೆ.

‘ಕನ್ನಡ ಚಿತ್ರರಂಗವನ್ನು ಮತ್ತು ಕನ್ನಡ ಪ್ರೇಕ್ಷಕರನ್ನೇ ನಾವು ನಂಬಿಕೊಂಡಿದ್ದೇವೆ. ಇದೊಂದು ಬಗೆಯಲ್ಲಿ ಜೀವ ವಿಜ್ಞಾನದ ಸರಪಳಿಯ ಹಾಗೆ. ಅದರಲ್ಲಿ ಹುಳವನ್ನು ಕಪ್ಪೆ ತಿನ್ನುತ್ತದೆ. ಕಪ್ಪೆಯನ್ನು ಹಾವು, ಹಾವನ್ನು ಹದ್ದು, ಹದ್ದು ಸತ್ತರೆ ಅದನ್ನು ಹುಳವೇ ತಿನ್ನೋದು. ಹೀಗೆ ಚಿತ್ರರಂಗವೂ ಪರಸ್ಪರ ಅವಲಂಬನೆ ಮೇಲೇ ನಿಂತಿದೆ. ಧನ್ವೀರ್‌ ಮೊದಲಿನಿಂದಲೂ ಭಿನ್ನ ಪಾತ್ರಗಳನ್ನು ಮಾಡುತ್ತ ಬಂದಿದ್ದಾರೆ. ವಾಮನ ತಾಯಿ ಸೆಂಟಿಮೆಂಟಿನ ಸಿನಿಮಾ. ತಾಯಿಗಾಗಿ, ಪ್ರೀತಿಗಾಗಿ ವ್ಯಕ್ತಿ ಹೇಗೆ ಬದಲಾಗುತ್ತಾನೆ ಎನ್ನುವುದು ಚಿತ್ರದ ಕಥೆ’ ಎಂದೂ ದರ್ಶನ್‌ ಹೇಳಿದ್ದಾರೆ.

ನಾಯಕ ಧನ್ವೀರ್‌, ‘ದರ್ಶನ್‌ ದೂರದ ಊರಿನಲ್ಲಿ ಶೂಟಿಂಗ್‌ನಲ್ಲಿದ್ದಾರೆ. ಚಿತ್ರೀಕರಣಕ್ಕೆ ತೊಂದರೆಯಾಗಬಾರದು ಎಂದು ತಾನಿರುವ ಕಡೆಗೆ ನನ್ನನ್ನು ಕರೆಸಿಕೊಂಡು ಅಲ್ಲೇ ಟ್ರೇಲರ್‌ ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಚಿತ್ರಮಂದಿರದಲ್ಲೇ ವಾಮನ ಸಿನಿಮಾ ನೋಡೋದಾಗಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಅನೇಕ ವಿಶೇಷತೆಗಳಿವೆ’ ಎಂದರು.

ನಿರ್ದೇಶಕ ಶಂಕರ್‌ ರಾಮನ್‌, ‘ಇದು ತಾಯಿ ಮಗನ ಬಾಂಧವ್ಯದ ಕಥೆ. ಮನರಂಜನಾತ್ಮಕ ಅಂಶಗಳೂ ಸಾಕಷ್ಟಿವೆ’ ಎಂದರು. ನಾಯಕಿ ರೀಷ್ಮಾ ನಾಣಯ್ಯ, ನಿರ್ಮಾಪಕ ಚೇತನ್‌ ಗೌಡ, ಸಹ ನಿರ್ಮಾಪಕಿ ರೂಪಾ ಚೇತನ್‌, ಕಲಾವಿದರಾದ ತಾರಾ ಅನೂರಾಧ, ಸಂಪತ್‌ ರಾಜ್‌, ಚಿತ್ಕಲಾ ಬಿರಾದಾರ್‌ ಇದ್ದರು.

Earthquake: ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌; ಸಾವಿನ ಸಂಖ್ಯೆ 700 ಕ್ಕೆ ಏರಿಕೆ, ನೂರಾರು ಮಂದಿ ನಾಪತ್ತೆ!

TAGGED:Why did actor Darshan say he would raise a cow if needed?
Share This Article
Facebook Twitter Copy Link Print
Previous Article Earthquake: ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌; ಸಾವಿನ ಸಂಖ್ಯೆ 700 ಕ್ಕೆ ಏರಿಕೆ, ನೂರಾರು ಮಂದಿ ನಾಪತ್ತೆ!
Next Article GOLD SMUGGLING : ಗೋಲ್ಡ್ ಸ್ಮಗ್ಲಿಂಗ್ ಕೇಸ್ :ಇಂದು ನಟ ತರುಣ್ ರಾಜ್ ಜಾಮೀನು ಅರ್ಜಿ ವಿಚಾರಣೆ

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕ

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?