newsics.com
ಲಾಂಗ್ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿದ ರಜತ್ ಹಾಗೂ ವಿನಯ್ ಗೌಡ ಮೂರು ದಿನ ಪೊಲೀಸ್ ಕಸ್ಟಡಿಗೆ ಎಂದು ಕೋರ್ಟ್ ಆದೇಶ ಹೊರಡಿಸಿದೆ.
ಬಂಧಿತರಾಗಿದ್ದ ವಿನಯ್ ಮತ್ತು ರಜತ್ ಅವರನ್ನು 24ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಧೀಶರು ಮಾರ್ಚ್ 28 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಮಾ.24ರಂದು ವಿಚಾರಣೆಗೆ ಹಾಜರಾದಾಗ ರಾತ್ರಿ ತಡ ಆಯ್ತು ಅಂತ ವಾಪಸ್ ಕಳಿಸಿದ್ದಾಗಿ ಅವರೇ ಹೇಳಿದ್ದಾರೆ. ಅವರಿಗೆ ನೋಟಿಸ್ ಕೊಟ್ಟು ಕಳುಹಿಸಿದ್ದಾಗಿ ಹೇಳುತ್ತಾರೆ. ಆದರೆ, ನೋಟಿಸ್ ಕಾಪಿ ಇಲ್ಲ. ರೀಲ್ಸ್ ಗೆ ಬಳಿಸಿದ್ದ ಮಚ್ಚು ಫೈಬರ್ ಎಂದು ಕಂಡು ಬಂದಿದ್ದು, ಅದರಿಂದ ಅವರನ್ನು ವಾಪಾಸ್ ಕಳಿಸಿದ್ದಾಗಿ ಹೇಳಿದ್ದಾರೆ. ಆದರೆ, 25ರ ಹೇಳಿಕೆಯಲ್ಲಿ ಫೈಬರ್ ಲಾಂಗ್ ಎಂದು ಸುಳ್ಳು ಹೇಳಿದ್ದಾಗಿ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ರೀಲ್ಸ್ ಮಾಡಿದ ಜಾಗಕ್ಕೆ ತೆರಳಿ ಮಹಜರ್ ಕೂಡ ಮಾಡಿದ್ದಾರೆ. ಪೊಲೀಸ್ ಕಸ್ಟಡಿಗೆ ಕೇಳಲು ಅಸ್ತ್ರವನ್ನ ಬಳಕೆ ಮಾಡಿದ್ದಾರೆ ಅದನ್ನ ವಶಕ್ಕೆ ಪಡೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇವರೇನೂ ಕೊಲೆ ಮಾಡಿದ್ದಾರೆಯೇ? ಎಂದು ರಜತ್, ವಿನಯ್ ವಕೀಲ ಪ್ರಶ್ನಿಸಿದ್ದಾರೆ.