newsics.com
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭೂಮಿ ಕಬಳಿಕೆಗೆ ಪ್ರಯತ್ನಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ನಿತ್ಯಾನಂದ ಒಂದು ದೇಶದಷ್ಟು ವಿಸ್ತೀರ್ಣದ ಭೂಮಿ ಕಬಳಿಕೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಹೌದು, ಅಮೆಜಾನ್ ರೈನ್ ಫಾರೆಸ್ಟ್ ನ 3,900 ಚದರ ಕಿ.ಮೀ ಜಾಗ ಖರೀದಿಸಲು ಮುಂದಾಗಿರೋ ಸ್ಫೋಟಕ ಸುದ್ದಿ ಬಯಲಾಗಿದೆ. ನಿತ್ಯಾನಂದ ಬೊಲಿವಿಯಾದ ಬುಡಕಟ್ಟು ಜನರ ಜೊತೆ ಭೂಮಿ ಲೀಸ್ ಒಪ್ಪಂದಕ್ಕೆ ರೆಡಿಯಾಗಿದ್ದರು. ಆದರೆ ಈ ವಿಷಯ ತಿಳಿಯುತ್ತಿದ್ದಂತೆ ಬೊಲಿವಿಯಾ ಸರ್ಕಾರ ಮಧ್ಯಪ್ರವೇಶ ಮಾಡಿದೆ. ನಿತ್ಯಾನಂದ ಭೂಮಿ ಲೀಸ್‌ಗೆ ಪಡೆಯುವ ಪ್ರಯತ್ನಕ್ಕೆ ಬ್ರೇಕ್ ಹಾಕಲಾಗಿದೆ.
ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅಸ್ತಿತ್ವದಲ್ಲಿ ಇಲ್ಲದಿರೋ ಕೈಲಾಸ ದೇಶಕ್ಕೆ ಭೂಮಿ ಲೀಸ್‌ಗೆ ಪಡೆಯಲು ಯತ್ನಿಸಿದ್ದಾರೆ. ಬೊಲಿವಿಯಾದ ಬುಡಕಟ್ಟು ಸಮುದಾಯದ ಜೊತೆಗೆ ಬರೋಬ್ಬರಿ 3,900 ಚದರ ಕಿ.ಮೀ ಭೂಮಿಯನ್ನು ಭೋಗ್ಯಕ್ಕೆಗೆ ಪಡೆಯಲು ನಿತ್ಯಾನಂದ ಒಪ್ಪಂದ ಮಾಡಿಕೊಂಡಿದ್ದಾರೆ. 3,900 ಚದರ ಕಿ.ಮೀ ಭೂಮಿಗೆ ದಿನಕ್ಕೆ 2,455 ರೂಪಾಯಿ ಲೀಸ್ ಹಣ ನೀಡೋ ಒಪ್ಪಂದ ಇದಾಗಿತ್ತು. 3,900 ಚದರ ಕಿ.ಮೀ ಭೂಮಿಗೆ ತಿಂಗಳಿಗೆ 74,667 ರೂಪಾಯಿ, ವರ್ಷಕ್ಕೆ 8.96 ಲಕ್ಷ ರೂಪಾಯಿ ಹಣ ಪಾವತಿಸಿ ದೊಡ್ಡ ಭೂಮಿ ಲೀಸ್‌ಗೆ ಪಡೆಯೋ ಪ್ಲಾನ್ ಮಾಡಲಾಗಿತ್ತು.
ಇನ್ನು ನಿತ್ಯಾನಂದನ ಲೀಸ್ ಯತ್ನ ಗಮನಕ್ಕೆ ಬರುತ್ತಿದ್ದಂತೆ, ಬೊಲಿವಿಯಾ ಸರ್ಕಾರ ಮಧ್ಯಪ್ರವೇಶ ಮಾಡಿದ್ದು, ಭೂಮಿ ಲೀಸ್‌ಗೆ ಪಡೆಯುವ ಯತ್ನಕ್ಕೆ ಸಂಪೂರ್ಣ ಬ್ರೇಕ್ ಹಾಕಿದೆ. ಈ ಮೂಲಕ ಒಪ್ಪಂದ ಮಾಡಿಕೊಂಡಿದ್ದರೂ, ಮಾನ್ಯತೆ ಇಲ್ಲ ಎಂದು ಬೊಲಿವಿಯಾ ಸರ್ಕಾರ ಸ್ಪಷ್ಪಪಡಿಸಿದೆ. ಅಲ್ಲದೇ ಈ ಲ್ಯಾಂಡ್ ಡೀಲ್ ನಲ್ಲಿ ಭಾಗಿಯಾದವರನ್ನೆಲ್ಲಾ ಬೊಲಿವಿಯಾದಿಂದ ಗಡಿಪಾರು ಮಾಡುವ ಕಠಿಣ ಕ್ರಮಕ್ಕೆ ಮುಂದಾಗಿದೆ.
Honey trap Case: ಇಂದು ಸುಪ್ರೀಂನಲ್ಲಿ ಹನಿಟ್ರ್ಯಾಪ್ ಕೇಸ್ ವಿಚಾರಣೆ