newsics.com
ನವದೆಹಲಿ: ಇನ್ಮುಂದೆ ಹೊಸ ಟೋಲ್ ಪಾಲಿಸಿಯಲ್ಲಿ ವಾಹನ ಮಾಲೀಕರಿಗೆ ರಿಯಾಯಿತಿ ಸಿಗಲಿದೆ ಎಂದು ಎಂದು ಗಡ್ಕರಿ ಹೇಳಿದ್ದಾರೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಮುಂಬೈ ಬಿಕೆಸಿ) ನಲ್ಲಿ ಆಯೋಜಿಸಲಾದ ಬಿಸಿನೆಸ್ ಟುಡೇ ಬಿಟಿ ಮೈಂಡ್ ರಶ್ 2025 ಕಾರ್ಯಕ್ರಮದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಹೊಸ ಟೋಲ್ ನೀತಿಯ ಬಗ್ಗೆ ತಿಳಿಸಿದ್ದಾರೆ.
ಏಪ್ರಿಲ್ ಒಂದರ ಮೊದಲು ಟೋಲ್ ಬಗ್ಗೆ ಹೊಸ ನೀತಿಯನ್ನು ನಾವು ಪ್ರಕಟಿಸುತ್ತೇವೆ. ಇದು ಪ್ರಯಾಣಿಕರಿಗೆ ಸೂಕ್ತ ರಿಯಾಯಿತಿಗಳನ್ನು ನೀಡಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಟೋಲ್ ದರಗಳ ಬಗ್ಗೆ ಇರುವ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ರಸ್ತೆ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸುವುದು ಈ ಕ್ರಮದ ಉದ್ದೇಶವಾಗಿದೆ. ಈಗ ಸಂಸತ್ ಅಧಿವೇಶನ ನಡೆಯುತ್ತಿದೆ, ಹೀಗಾಗಿ ಇದರ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ. ಆದರೆ 2025 ಏಪ್ರಿಲ್ ಒಂದರಿಂದ ಇಂತಹ ನೀತಿಯನ್ನು ತರಲಾಗುತ್ತದೆ. ಇದು ಟೋಲ್ ಪಾವತಿಸುವರಿಗೆ ರಿಲೀಫ್ ನೀಡಲಿದೆ ಎಂದಿದ್ದಾರೆ.