newsics.com
ಕಲಬುರಗಿ: ಮಂಗಳಮುಖಿಯೊಬ್ಬರನ್ನು ಆಕೆಯ ಸಹವರ್ತಿಗಳೇ ಬೆತ್ತಲೆಗೊಳಿಸಿ ಹಲ್ಲೆ ಮಾಡಿ ಕ್ರೌರ್ಯ ಮೆರೆದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಶಿವಾನಿ, ಭವಾನಿ, ಮಾಲಾ, ಶಿಲಾ ಎಂಬ ಮಂಗಳಮುಖಿಯರು ಸೇರಿಕೊಂಡು ಅಂಕಿತಾ ಚವ್ಹಾಣ ಎಂಬ ಮತ್ತೊಬ್ಬ ಮಂಗಳಮುಖಿಯ ಮೇಲೆ ಕ್ರೌರ್ಯ ಮೆರೆದಿದ್ದಾರೆ.
ತಮ್ಮ ಜತೆಯಲ್ಲೇ ನಿತ್ಯವೂ ಭಿಕ್ಷಾಟನೆ ಮಾಡುತ್ತಿದ್ದ ಅಂಕಿತಾ ಎಂಬುವರ ಮೇಲೆ ಹಾಡಹಗಲೇ ಏಕಾಏಕಿ ಹಲ್ಲೆ ಮಾಡಿದ್ದಾರೆ. ಮನಸೋಇಚ್ಛೆ ಥಳಿಸಿರುವ ಆರು ಮಂಗಳ ಮುಖಿಯರು, ನಂತರ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ರೀತಿ ಅಂಕಿತಾಳನ್ನು ಬೆತ್ತಲೆ ಮಾಡಿ, ತಲೆಗೂದಲು ಕತ್ತರಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ರೀತಿಯ ಅಮಾನವೀಯ ಘಟನೆಗೆ ಅಂಕಿತಾ ತನ್ನ ಹಣ ವಾಪಸ್ ಕೇಳಿದ್ದೇ ಕಾರಣವಂತೆ.
ಕಳೆದ ಹಲವು ದಿನಗಳಿಂದ ಮಾಲಾ ಎಂಬುವರ ಜತೆಯಲ್ಲಿರುತ್ತಿದ್ದ ಅಂಕಿತಾ, ತಾನು ಭಿಕ್ಷಾಟನೆ ಮಾಡಿದ ಹಣವನ್ನೆಲ್ಲಾ ಮಾಲಾಳಿಗೆ ನೀಡುತ್ತಿದ್ದಳಂತೆ. ಪ್ರತಿ ದಿನ 2-3 ಸಾವಿರ ರೂ. ಹಣ ನೀಡುತ್ತಾ ಬಂದಿದ್ದಾಳೆ. ಸದ್ಯ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾಳೆಂದು ಅಂಕಿತಾ ದೂರಿದ್ದಾಳೆ. ತನ್ನ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.
ಇತ್ತೀಚೆಗೆ ಅಂಕಿತಾ, ಮಾಲಾ ಜತೆ ಇರುವುದನ್ನು ಬಿಟ್ಟಿದ್ದಳಂತೆ. ಅಲ್ಲದೇ ನಿತ್ಯ ಹಣ ಕೋಡುವುದನ್ನು ಕೂಡ ನಿಲ್ಲಿಸಿದ್ದಳಂತೆ. ಈ ಕಾರಣಕ್ಕಾಗಿ ಹಲವು ಬಾರಿ ಅಂಕಿತಾ ಮೇಲೆ ಹಲ್ಲೆ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ.
ಗಾಣಗಾಪುರದಲ್ಲೂ ಹೊಡೆದಾಟ:
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಮಂಗಳಮುಖಿಯ ಮತ್ತೊಂದು ತಂಡ ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿದೆ.
ಬೇರೆ ಕಡೆಯಿಂದ ಬಂದು ದೇವಸ್ಥಾನದಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆಂದು ಮಂಗಳಮುಖಿಯರು ಥಳಿಸಿದ್ದಾರೆ.
ಒಂದೇ ದಿನ ನಡೆದ ಎರಡೂ ಘಟನೆಗಳಿಂದ ಉಳಿದ ಮಂಗಳ ಮುಖಿಯರು ಆತಂಕಗೊಂಡಿದ್ದು, ನಾವು ಒಬ್ಬೊಬ್ಬರೇ ಭಿಕ್ಷಾಟನೆ ಮಾಡುತ್ತೇವೆ. ನಮ್ಮ ಮೇಲೆ ಈ ರೀತಿ ಹಲ್ಲೆಯಾಗುತ್ತಿದೆ. ನಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಔರಂಗಜೇಬನ ಸಮಾಧಿ ವಿವಾದ: ನಾಗ್ಪುರ ಉದ್ವಿಗ್ನ, ಹಲವೆಡೆ ಬೆಂಕಿ, ಕಲ್ಲು ತೂರಾಟ
ಚಿನ್ನ ಅಕ್ರಮ ಸಾಗಣೆ: ಗೌರವ್ ಗುಪ್ತಾ ತನಿಖಾ ಸಮಿತಿಯಿಂದ ರನ್ಯಾ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ವಿಚಾರಣೆ