newsics.com
ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ರಿಂದ ಅರಣ್ಯ ಭೂಮಿ ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಶಿವಾರೆಡ್ಡಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥ ಪಡಿಸಿದೆ. ಈಗಾಗಲೇ ಸರ್ವೆ ವರದಿ ಸಲ್ಲಿಕೆಯಾಗಿರುವ ಹಿನ್ನೆಲೆ ರಿಟ್ ಅರ್ಜಿರನ್ನು ವಜಾ ಮಾಡಲಾಗಿದೆ.
ಸರ್ವೆ ನಡೆಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅರಣ್ಯ ಸಂರಕ್ಷಣಾಧಿಕಾರಿಗೆ ಈಗಾಗಲೇ ಜಂಟಿ ಸರ್ವೆ ವರದಿ ಸಲ್ಲಿಕೆಯಾಗಿದೆ. ಕಾನೂನಿನಂತೆ ಅರಣ್ಯ ಸಂರಕ್ಷಣಾಧಿಕಾರಿ ಸೆ.64ರಡಿ ಕ್ರಮ ಕೈಗೊಳ್ಳಬೇಕಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಸದಾಶಿವರೆಡ್ಡಿ ವಾದ ಮಂಡಿಸಿದ್ದಾರೆ. ಅರ್ಜಿದಾರರ ರಿಟ್ ಊರ್ಜಿತವಲ್ಲವೆಂದು ರಮೇಶ್ ಕುಮಾರ್ ಪರ ವಕೀಲರ ವಾದ ಮಂಡಿಸಿದ್ದಾರೆ.
ಸೋಮವಾರದಿಂದ ಸಿನಿಮಾ ಶುರುವಾಗುತ್ತೆ ಎಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಇನ್ನು ಈ ವಿಚಾರವಾಗಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಇಷ್ಟು ದಿವಸ ಬಂದಿದ್ದು ರೀಲ್ ಹಾಗೂ ಟ್ರಯಲ್ ಅಷ್ಟೇ. ಸೋಮವಾರದಿಂದ ಸಿನಿಮಾ ಶುರುವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದ್ದಾರೆ.