newsics.com
ಬೆಂಗಳೂರು: ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ‘ಬಾಡಿಗೆಗೆ ಬಾಯ್‌ಫ್ರೆಂಡ್’ ಎಂಬ ಪೋಸ್ಟರ್‌ಗಳು ಬೆಂಗಳೂರಿನಲ್ಲಿ ಕಾಣಿಸಿಕೊಂಡಿವೆ. ಕೇವಲ 389ರೂಪಾಯಿಗೆ ಒಂದು ದಿನದ ಬಾಯ್‌ಫ್ರೆಂಡ್ ಸಿಗುತ್ತಾನೆ ಎಂದು ನಗರದ ಬೀದಿಗಳಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿವೆ.
ಇಂದು ವ್ಯಾಲೆಂಟೇನ್ ಡೇ ಹಿನ್ನೆಲೆ ಕಿಡಿಗೇಡಿಗಳು ಇಂಥದ್ದೊಂದು ಪೋಸ್ಟರ್‌ಗಳನ್ನ ಎಲ್ಲೆಂದರಲ್ಲಿ ಅಂಟಿಸಿದ್ದಾರೆ.’ವ್ಯಾಲೆಂಟೈನ್ ಡೇಗೆ ಬಾಯ್‌ಫ್ರೆಂಡ್ ಇಲ್ವಾ? ಹಾಗಾದ್ರೆ ಒಂದು ದಿನದ ಬಾಡಿಗೆ ಬಾಯ್‌ಫ್ರೆಂಡ್‌ಗಾಗಿ ಪೇ ಮಾಡಿ ಎಂದು ಬರೆದಿರುವ ಪೋಸ್ಟರ್ ಗಳನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ.
ಬೆಂಗಳೂರಿನ ಜಯನಗರ, ಬನಶಂಕರಿ ಭಾಗದಲ್ಲಿ ಎಲ್ಲೆಂದರಲ್ಲೇ ಗೋಡೆಗಳಿಗೆ ಹಚ್ಚಿರುವ ಕಿಡಿಗೇಡಿಗಳು, ವ್ಯಾಲೆಂಟೆನ್ಸ್ ಡೇಗೆ ಹುಡುಗ ಬೇಕಾದ್ರೆ ಕೇವಲ ರೂ 389/- ಕೊಟ್ರೆ ಸಾಕು ಒಂದು ದಿನದ ಬಾಯ್ ಫ್ರೆಂಡ್ ಸಿಗಲಿದ್ದಾನೆ ಎಂಬ ಅರ್ಥದಲ್ಲಿ ‘RENT A BOY FRIEND ONLY Rs. 389 SCAN ME’ ಬರೆದಿರುವ ಪೋಸ್ಟರ್‌ಗಳು ಜಯನಗರದ 8th ಬ್ಲಾಕ್, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಕಂಡು ಬಂದಿವೆ.
ಇಂಥ ವಿಚಿತ್ರ ಪೋಸ್ಟರ್ ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಆಗ್ರಹಿಸಿದ್ದಾರೆ.