newsics.com
ಬೆಂಗಳೂರು: ಆನ್ಲೈನ್ ದಿನಸಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ ಬ್ಲಿಂಕಿಟ್ ಕಂಪನಿ ಶಿವರಾತ್ರಿ ಹಬ್ಬದ ಹಿನ್ನೆಲೆ ಇದೀಗ ಹೊಸ ಕೊಡುಗೆ ನೀಡಿದೆ. ಗ್ರಾಹಕರಿಗೆ ಇಎಮ್ಐ ಸೌಲಭ್ಯ ನೀಡಿದ್ದು, ಅದರ ಮೂಲಕ ದಿನಸಿಗಳನ್ನು ಖರೀದಿಸಬಹುದಾಗಿದೆ.
ಬ್ಲಿಂಕಿಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲ್ಬಿಂದರ್ ದಿಂಡ್ಸಾ ಈ ಕುರಿತು ಮಾಹಿತಿ ನೀಡಿದ್ದಾರೆ. ಬ್ಲಿಂಕಿಟ್ ಗ್ರಾಹಕರಿಗೆ ಉತ್ತಮ ಯೋಜನೆಯನ್ನು ತಂದಿದೆ. ದಿನಸಿಗಳ ಖರೀದಿಯನ್ನು ಇದು ಸುಧಾರಿಸುತ್ತದೆ. ಅದಕ್ಕಾಗಿ ಮಾಸಿಕ ಕಂತು ರೂಪದಲ್ಲಿ ಸೌಲಭ್ಯ ನೀಡುತ್ತಿದೆ. 2,999ಕ್ಕಿಂತ ಹೆಚ್ಚಿನ ಎಲ್ಲಾ ಆರ್ಡರ್ಗಳಿಗೆ ಇದು ಅನ್ವಯಿಸುತ್ತದೆ. ಆದರೆ ಈ ವೈಶಿಷ್ಟ್ಯದ ಮೂಲಕ ಚಿನ್ನ ಮತ್ತು ಬೆಳ್ಳಿ ನಾಣ್ಯವನ್ನು ಖರೀದಿಸಲು ಅನ್ವಯಿಸುದಿಲ್ಲ. ವಾರ್ಷಿಕವಾಗಿ 15 ಪ್ರತಿಶತ ಬಡ್ಡಿಯೊಂದಿಗೆ ನೋ-ಕಾಸ್ಟ್ ಇಎಂಐ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಎಂದಿದ್ದಾರೆ.
ನೋ-ಕಾಸ್ಟ್ ಇಎಂಐ ಹೇಗೆ?
ಬಳಕೆದಾರರು ಆನ್ಲೈನ್ನಲ್ಲಿ ದಿನಸಿಯನ್ನು ಖರೀದಿಸಿ ಪಾವತಿ ಆಯ್ಕೆಯ ಮಾಡುವ ಮುನ್ನ ಇಎಮ್ಐ ಆಯ್ಕೆ ಮಾಡಬಹುದಾಗಿದೆ. ಇದನ್ನು ಸುಲಭ ಕಂತುಗಳಾಗಿ ಪಾವತಿ ಮಾಡಬಹುದಾಗಿದೆ. ಮಧ್ಯವರ್ತಿಗಳ ಅಗತ್ಯವಿಲ್ಲದೆ ಬ್ಲಿಂಕಿಟ್ ತನ್ನ ಗ್ರಾಹಕರಿಗೆ ಈ ವೈಶಿಷ್ಟ್ಯವನ್ನು ಪರಿಚಯಿಸಿದೆ.
2013ರಲ್ಲಿ ಬ್ಲಿಂಕಿಟ್ ಕಂಪನಿ ಸ್ಥಾಪನೆಯಾಯಿತು. ಸದ್ಯ ಗ್ರಾಹಕರ ಮನಗೆದ್ದಿರುವ ಈ ಕಂಪನಿ 10 ನಿಮಿಷದಲ್ಲಿ ಐಫೋನ್ 16 ಸರಣಿಯನ್ನು ಮನೆ ಬಾಗಿಲಿಗೆ ತಂದು ಕೊಡುವ ಕೆಲಸ ಮಾಡುತ್ತಿದೆ.