Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > CM’s assets ಸಿದ್ದು ಸೇರಿ ಹಲವು ಮುಖ್ಯಮಂತ್ರಿಗಳ ಬಳಿ ಕೋಟಿ ಕೋಟಿ ಆಸ್ತಿ, ಬಂಗಾಳದ ದೀದಿಗೆ ಬಡ ಸಿಎಂ ಪಟ್ಟ!
ದೇಶಪ್ರಮುಖ

CM’s assets ಸಿದ್ದು ಸೇರಿ ಹಲವು ಮುಖ್ಯಮಂತ್ರಿಗಳ ಬಳಿ ಕೋಟಿ ಕೋಟಿ ಆಸ್ತಿ, ಬಂಗಾಳದ ದೀದಿಗೆ ಬಡ ಸಿಎಂ ಪಟ್ಟ!

Share
2 Min Read
SHARE

newsics.com

ನವದೆಹಲಿ: ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಸ್ವಯಂಸೇವಾ ಸಂಸ್ಥೆ ದೇಶದ ಮುಖ್ಯಮಂತ್ರಿಗಳ ಆಸ್ತಿ ವಿವರ ಬಿಡುಗಡೆ ಮಾಡಿದ್ದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 51 ಕೋಟಿ ರೂ. ಮೌಲ್ಯದ ಆಸ್ತಿಯೊಂದಿಗೆ ಶ್ರೀಮಂತ ಸಿಎಂಗಳ ಪೈಕಿ 3ನೇ ಸ್ಥಾನ ಪಡೆದಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು 931 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಭಾರತದ ನಂ.1 ಧನಿಕ ಸಿಎಂ ಎನ್ನಿಸಿಕೊಂಡಿದ್ದಾರೆ. ಅರುಣಾಚಲ ಪ್ರದೇಶದ ಪೆಮಾ ಖಂಡು 332 ಕೋಟಿ ರು. ಆಸ್ತಿಯೊಂದಿಗೆ 2ನೇ ಹಾಗೂ 51 ಕೋಟಿ ರು. ಆಸ್ತಿಯೊಂದಿಗೆ ಸಿದ್ದರಾಮಯ್ಯ 3ನೇ ಸ್ಥಾನ ಪಡೆದಿದ್ದಾರೆ.

ಆದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ರೂ. ಆಸ್ತಿಯೊಂದಿಗೆ ‘ಅತ್ಯಂತ ಬಡವ ಸಿಎಂ’ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ (ಎನ್‌ಎನ್‌ಐ) 2023-2024ರಲ್ಲಿ ಸರಿಸುಮಾರು 1,85,854 ರೂ. ಆಗಿದ್ದರೆ, ಮುಖ್ಯ ಮಂತ್ರಿಗಳ ಸರಾಸರಿ ಸ್ವ-ಆದಾಯವು 13,64, 310 ರೂ. ಆಗಿದೆ. ಇದು ಭಾರತದ ಸರಾಸರಿ ತಲಾ ಆದಾಯಕ್ಕಿಂತ 7.3 ಪಟ್ಟು ಹೆಚ್ಚಿದೆ.

ಪ.ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ರೂ. ಆಸ್ತಿಯೊಂದಿಗೆ ‘ಅತ್ಯಂತ ಬಡವ ಸಿಎಂ’ ಆಗಿದ್ದರೆ, 55 ಲಕ್ಷ ರೂ. ಆಸ್ತಿ ಹೊಂದಿರುವ ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಒಮರ್‌ಅಬ್ದುಲ್ಲಾ ಅವರು ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 1 ಕೋಟಿ ರು. ಆಸ್ತಿಯೊಂದಿಗೆ ಕೇರಳದ ಪಿಣರಾಯಿ ವಿಜಯನ್ 3ನೇ ಸ್ಥಾನದಲ್ಲಿದ್ದಾರೆ.

13 (ಶೇ. 42ರಷ್ಟು) ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದರೆ, ಅವರಲ್ಲಿ 10 (ಶೇ.32) ಮಂದಿ ಕೊಲೆ ಯತ್ನ, ಅಪಹರಣ, ಲಂಚ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 18 ಸಿಎಂಗಳ ಮೇಲೆ ಯಾವುದೇ ಕ್ರಿಮಿನಲ್ ಕೇಸಿಲ್ಲ. ದೇಶದ 31 ಮುಖ್ಯಮಂತ್ರಿಗಳ ಪೈಕಿ ಇಬ್ಬರು (ಪ.ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ದೆಹಲಿಯ ಅತಿಶಿ) ಮಾತ್ರ ಇಬ್ಬರು ಮಹಿಳೆಯರಾಗಿದ್ದಾರೆ.

ಸಾಲ ಎಷ್ಟು?

ಪೆಮಾ ಖಂಡು ಅವರು 180 ಕೋಟಿ ರೂ. ಸಾಲ ಹೊಂದಿದ್ದಾರೆ. ಸಿದ್ದರಾಮಯ್ಯ 23 ಕೋಟಿ ರೂ. ಹಾಗೂ ನಾಯ್ಡು 10 ಕೋಟಿ ರೂ. ಸಾಲ ಹೊಂದಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.

ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ 52.59 ಕೋಟಿ ರೂ. ಎಂದು ವರದಿ ಹೇಳಿದೆ. ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ 1,630 ಕೋಟಿ ರೂ. ಆಗಿದೆ ಎಂದು ವರದಿ ವಿವರಿಸಿದೆ.

ಬಿಜೆಪಿ ನಾಯಕರ ಹತ್ಯೆ ಸಂಚು ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪಟ್ಟು, ಸಿಬಿಐ ತನಿಖೆಗೆ ಒತ್ತಾಯ

HIV/AIDS: ಏಡ್ಸ್ ರೋಗಿಗಳಿಗೆ ಗುಡ್ ನ್ಯೂಸ್.. ಇನ್ನು ಆತಂಕ ಪಡುವ ಅಗತ್ಯವಿಲ್ಲ..

TAGGED:Bengal's Didi is the poor CM!Many Chief Ministers including Siddu have crores of assets
Share This Article
Facebook Twitter Copy Link Print
Previous Article ಬಿಜೆಪಿ ನಾಯಕರ ಹತ್ಯೆ ಸಂಚು ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪಟ್ಟು, ಸಿಬಿಐ ತನಿಖೆಗೆ ಒತ್ತಾಯ
Next Article KSRTC ಬಸ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

Popular Posts

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

You Might Also Like

ಪ್ರಮುಖಕರ್ನಾಟಕಮನರಂಜನೆ

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read
ಕರ್ನಾಟಕಪ್ರಮುಖ

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read
ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read
ದೇಶಪ್ರಮುಖ

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?