newsics.com
ಬಿಗ್ ಬಾಸ್ ಕಳಿಸುವ ದಿನಸಿಗಳನ್ನು ಈಸೀ ಆಗಿ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ಒಂದು ಟಾಸ್ಕ್ ಡಿಸೈನ್ ಆಗಿರುತ್ತದೆ. ಅದರಲ್ಲಿ ಗೆದ್ದರಷ್ಟೇ ದಿನಸಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಸಿಗಲಿದೆ. ಸದ್ಯ ಈ ವಾರದ ದಿನಸಿ ವಸ್ತುಗಳನ್ನು ಕಳುಹಿಸಿರುವ ಬಿಗ್ ಬಾಸ್, ಅದಕ್ಕಾಗಿ ಒಂದು ಟಾಸ್ಕ್ ರೂಪಿಸಿದ್ದಾರೆ. ಈ ಟಾಸ್ಕ್ ಅನ್ನು 6 ಮಂದಿ ಆಡಬೇಕಿದೆ. ಆದರೆ ಅಷ್ಟರಲ್ಲೇ ಜಗಳ ಆರಂಭವಾಗಿದೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಅವರು ಉತ್ತಮವಾಗಿ ಆಟ ಆಡುವುದರಲ್ಲಿ ಇತ್ತೀಚೆಗೆ ವಿಫಲ ಆಗುತ್ತಿದ್ದಾರೆ. ಈ ಆಟ ದಿನ ಕಳೆದಂತೆ ಡಲ್ ಆಗುತ್ತಿದೆ. ಈಗ ಮಂಜು ಅವರು ಸಾಕಷ್ಟು ತೊಂದರೆಗಳನ್ನು ಎದುರಿಸುವ ಸೂಚನೆ ಸಿಕ್ಕಿದೆ. ಇದಕ್ಕೆ ಅವರ ಓವರ್ಕಾನ್ಫಿಡೆನ್ಸ್ ಕಾರಣ ಎಂದು ಹೇಳಲಾಗುತ್ತಿದೆ.
https://www.instagram.com/reel/DEL1m0aP2Sf/?igsh=MWt5N2lqNXY2ZzR3Yg==
ಟಾಸ್ಕ್ ಕುರಿತು ಉಗ್ರಂ ಮಂಜು ಅವರು, ಚೈತ್ರಾ ಹಾಗೂ ಧನರಾಜ್ಗೆ ಟಾಂಗ್ ಕೊಟ್ಟು ಸೆಟ್ಬ್ಯಾಕ್ ಆಗುವಂತೆ ಹೇಳಿದ್ದರು. ಈ ವೇಳೆ ಗರಂ ಆದ ತ್ರಿವಿಕ್ರಮ್ ನೀನಗೇನಣ್ಣ ಅಂತ ಪ್ರಶ್ನಿಸಿದರು. ದಿನಸಿಗಳಿಗೆ ನಿಮ್ಮಿಂದ ಪ್ರಾಬ್ಲಂ ಆದರೆ ನಾವೇನು ಮಾಡೋಣ ಎಂದು ಮಂಜುನಾ ಕೇಳಿದ್ದಾರೆ. ಸದ್ಯಕ್ಕಂತೂ ಮಂಜು ಹಾಗೂ ತ್ರಿವಿಕ್ರಮ್ ಮಧ್ಯೆ ಬಿರುಸಿನ ಮಾತುಕತೆ ನಡೆದಿದೆ ಎನ್ನಬಹುದು. ಗೇಮ್ನಲ್ಲಿ ಚೈತ್ರಾ ಜೊತೆ ಮಂಜು ಆಡುತ್ತಿದ್ದಾರೆ.
ಉಗ್ರಂ ಮಂಜು ಅವರು ಟಾಸ್ಕ್ನ ಕಾನ್ಫಿಡೆನ್ಸ್ನಿಂದ ಆಡುವುದಾಗಿ ಹೋಗಿದ್ದರು. ಆದರೆ, ಅವರು ಯೋಚಿಸಿದಂತೆ ಅಲ್ಲಿ ಯಾವುದೂ ನಡೆದಿಲ್ಲ. ಅವರು ಹಠ ಹಿಡಿದು ಆಡಿದ ಟಾಸ್ಕ್ನಲ್ಲಿ ಸೋತಿದ್ದಾರೆ. ಇದರಿಂದ ಇಡೀ ಮನೆ ಅವರಿಗೆ ಛೀಮಾರಿ ಹಾಕಿದೆ. ಸದ್ಯ ಈ ವಿಚಾರ ದೊಡ್ಮನೆಯಲ್ಲಿ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಮುಂದೆ ಮತ್ತಷ್ಟು ಕಷ್ಟ ಎದುರಿಸೋ ಸೂಚನೆ ಇದೆ.