newsics.com
ವಾಷಿಂಗ್ಟನ್: ಭಾರತ ಮೂಲದ ಉದ್ಯಮಿ ಶ್ರೀರಾಮ್ ಕೃಷ್ಣನ್ ಶ್ವೇತಭವನದ ಕೃತಕ ಬುದ್ಧಿಮತ್ತೆ ವಿಭಾಗದ ನೀತಿ ಸಲಹೆಗಾರರನ್ನಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ. ಈ ಮೂಲಕ ಟ್ರಂಪ್ ಬಳಗ ಸೇರಿದ 3ನೇ ಭಾರತೀಯ ಶ್ರೀರಾಮ್ ಕೃಷ್ಣನ್ ಆಗಿದ್ದಾರೆ.
ಶ್ರೀರಾಮ್ ಕೃಷ್ಣನ್ ಅವರು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ (ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿ) ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಟ್ರಂಪ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ರೀರಾಮ್ ಕೃಷ್ಣನ್ ಈ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ, ಫೇಸ್‌ಬುಕ್ ಮತ್ತು ಸ್ಕ್ಯಾಪ್‌ನಲ್ಲಿ ಉತ್ಪನ್ನ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇದೀಗ ವೈಟ್ ಹೌಸ್ AI ಮತ್ತು ಕ್ರಿಸ್ಟೋ ಮುಖ್ಯಸ್ಥರಾಗಿರುವ ಡೇವಿಡ್ ಒ. ಸ್ಯಾಕ್ಸ್ ಜೊತೆಗೆ ಕೆಲಸ ಮಾಡಲಿದ್ದಾರೆ.
ಶ್ರೀರಾಮ್ ಅವರ ನೇಮಕವನ್ನು ಅಮೆರಿಕದ ಭಾರತೀಯ ಸಮುದಾಯ ಸ್ವಾಗತಿಸಿದೆ