newsics.com
ಮಹಾರಾಷ್ಟ್ರ : ಮದುವೆಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 5 ಜನ ಸಾವನ್ನಪ್ಪಿದ್ದು, 27 ಜನ ಗಾಯಗೊಂಡಿದ್ದಾರೆ. ಈ ಘಟನೆ ಮಹಾರಾಷ್ಟ್ರದ ರಾಯಗಢನಲ್ಲಿ ನಡೆದಿದೆ.
ಮೃತರನ್ನು ಸಂಗೀತಾ ಜಾಧವ್, ಗೌರವ್ ದಾರಾಡೆ, ಶಿಲ್ಪಾ ಪವಾರ್, ವಂದನಾ ಜಾಧವ್ ಎಂದು ಗುರುತಿಸಲಾಗಿದ್ದು, ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಮಾಂಗಾವ್ ಪೊಲೀಸ್ (Mangaon police) ಠಾಣೆಯ ತಂಡ ಆಗಮಿಸಿ ಗಾಯಗೊಂಡವರನ್ನು ಮಾಂಗಾವ್ ಗ್ರಾಮೀಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದುವೆಗಾಗಿ ಖಾಸಗಿ ಬಸ್ (ಪರ್ಪಲ್ ಟ್ರಾವೆಲ್ಸ್)ನಲ್ಲಿ ಪುಣೆಯ ಲೋಹೆಗಾಂವ್‌ನಿಂದ ಮಹಾಡ್‌ನ ಬಿರ್ವಾಡಿಗೆ ಹೊರಟಿದ್ದರು. ಈ ವೇಳೆ ತಮ್ಹಿನಿ ಘಾಟ್ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್ ಕಮರಿಗೆ ಉರುಳಿದೆ ಎಂದರು.