newsics.com
ಉತ್ತರ ಕನ್ನಡ: ನೂರಾರು ನಾಯಿಗಳಿಗೆ ವಿಷಪ್ರಾಶನ ಮಾಡಿ ಮಾರಣಹೋಮ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ತೂಕದಬೈಲ್ ಬಳಿ ನಡೆದಿದೆ.
ಟ್ರಕ್ ನಲ್ಲಿ ನೂರಾರು ನಾಯಿಗಳನ್ನು ಹಿಡಿದು ತಂದು ವಿಷಪ್ರಾಶನ ಮಾಡಿರುವುದಾಗಿ ಹೇಳಲಾಗುತ್ತಿದೆ. ನಲವತ್ತಕ್ಕೂ ಹೆಚ್ಚು ನಾಯಿಗಳಿಗೆ ವಿಷಪ್ರಾಶನವನ್ನು ದುರುಳರು ಮಾಡಿದ್ದಾರೆ. ಇನ್ನೂ ರೋಗ ಮತ್ತು ಗಾಯಗಳಿಂದ ಕೆಲವು ನಾಯಗಳು ನರಳಾಡುತ್ತಿರುವುದನ್ನು ಕಂಡರೇ ಇವರೆಂಥ ಅಮಾನವೀಯರು ಎನ್ನುವುದು ತಿಳಿದು ಬರುವಂತಿದೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬೀದಿ ನಾಯಿಗಳನ್ನು ಹಿಡಿದು ತಂದು ಸಾಯಿಸಿ ಹೆದ್ದಾರಿಯಲ್ಲಿ ರಾಶಿ ಹಾಕಲಾಗಿದ್ದು, ಸತ್ತ ನಾಯಿಗಳ ಜೊತೆ ಖಾಯಿಲೆ ಪೀಡಿತ ಜೀವಂತ ನಾಯಿಗಳು ಕೂಡ ಪತ್ತೆಯಾಗಿದೆ. ರಸ್ತೆ ಬದಿಯಲ್ಲೇ ನಾಯಿಗಳ ಶವ ಹಾಕಲಾಗಿದ್ದು, ವಾಹನ ಸವಾರರು ಕೆಟ್ಟ ವಾಸನೆಯಿಂದ ತೊಂದರೆ ಅನುಭವಿಸಿದ್ದಾರೆ.