newsics.com
ಈ ವರ್ಷ ಹಲವು ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಸಚಿವಾಲಯವು ಇನ್ಮುಂದೆ ಯಾರಾದರೂ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದರೆ ಒಂದು ಕೋಟಿ ರೂ.ವರೆಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಅಷ್ಟೇ ಅಲ್ಲದೆ ಬೆದರಿಕೆ ಹಾಕುವ ವ್ಯಕ್ತಿಯನ್ನು ನೋ ಫ್ಲೈ ಲಿಸ್ಟ್ಗೆ ಸೇರಿಸಲಾಗುತ್ತದೆ. ಇದರೊಂದಿಗೆ 1 ಲಕ್ಷ ರೂ.ವರೆಗೂ ದಂಡ ವಿಧಿಸಲಾಗುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು 2023 ರ ಏರ್‌ಕ್ರಾಫ್ಟ್ (ಭದ್ರತೆ) ನಿಯಮಗಳಿಗೆ ತಿದ್ದುಪಡಿ ತಂದಿದ್ದು, ನಕಲಿ ಕರೆಗಳ ವಿರುದ್ಧ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ.
ಅಷ್ಟೇ ಅಲ್ಲದೆ ಬೆದರಿಕೆ ಹಾಕುವ ವ್ಯಕ್ತಿಯನ್ನು ನೋ ಫ್ಲೈ ಲಿಸ್ಟ್ಗೆ ಸೇರಿಸಲಾಗುತ್ತದೆ. ಇದರೊಂದಿಗೆ 1 ಲಕ್ಷ ರೂ.ನಿಂದ ಕೋಟಿವರೆಗೂ ದಂಡ ವಿಧಿಸಲಾಗುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು 2023 ರ ಏರ್‌ಕ್ರಾಫ್ಟ್ (ಭದ್ರತೆ) ನಿಯಮಗಳಿಗೆ ತಿದ್ದುಪಡಿ ತಂದಿದ್ದು, ನಕಲಿ ಕರೆಗಳ ವಿರುದ್ಧ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ.
ಕಾಲಕಾಲಕ್ಕೆ, ಇಂತಹ ವದಂತಿಗಳನ್ನು ಹರಡುವುದರಿಂದ, ಹಲವಾರು ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ ಮತ್ತು ಇದು ಜನರಲ್ಲಿ ಭಯವನ್ನು ಸಹ ಸೃಷ್ಟಿಸುತ್ತದೆ. ಡಿಸೆಂಬರ್ 9 ರಂದು ಈ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು.ಏರ್‌ಕ್ರಾಫ್ಟ್ (ಸುರಕ್ಷತೆ) ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ, ಎರಡು ಕ್ರಮಗಳಿಗೆ ನಿಬಂಧನೆಯನ್ನು ಮಾಡಲಾಗಿದೆ.