newsics.com
ವರದಕ್ಷಿಣೆಯಾಗಿ ಕಾರ್ ನೀಡಲಿಲ್ಲವೆಂದು ವರ ಮದುವೆ ರದ್ದುಗೊಳಿಸಿ ತೆರಳಿದ ಆಘಾತಕಾರಿ ಘಟನೆ ವಾರಾಣಸಿಯಲ್ಲಿ ನಡೆದಿದೆ. ಇದರಿಂದ ನೊಂದ ವಧು ನ್ಯಾಯ ಕೋರಿ ಮಂಡುವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಾಜಿಪುರದ ಭದೌರಾ ಗ್ರಾಮದವರಾದ ವಧುವಿನ ಕುಟುಂಬ ವಾರಣಾಸಿಯ ಚಿಟೈಪುರದ ನಿವಾಸಿ ವಿಶಾಲ್ ಜೈಸ್ವಾಲ್ ಅವರೊಂದಿಗೆ ವಿವಾಹವನ್ನು ಏರ್ಪಡಿಸಿತ್ತು.
ಸಾಕಷ್ಟು ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದು, ಇದಕ್ಕೆ ಹುಡುಗಿಯ ತಂದೆ ಆನ್‌ಲೈನ್‌ನಲ್ಲಿ 6.5 ಲಕ್ಷ ರೂಪಾಯಿ ಮತ್ತು 12 ಲಕ್ಷ ರೂಪಾಯಿ ನಗದು ನೀಡಿ ಡಿಸೆಂಬರ್ 4 ರಂದು ವಾರಣಾಸಿಯ ಮದುವೆಯನ್ನು ನಿಗದಿಪಡಿಸಲಾಗಿತ್ತು.
ಹುಡುಗಿಯ ತಂದೆ, ತನ್ನ ಕುಟುಂಬ ಮತ್ತು ಮಧುವಿನೊಂದಿಗೆ ಗಾಜಿಪುರದಿಂದ ವಾರಣಾಸಿಗೆ ಪ್ರಯಾಣ ಬೆಳೆಸಿದ್ದರು. ಮದುವೆಯಲ್ಲಿ ವರನ ಕುಟುಂಬವನ್ನು ಸ್ವಾಗತಿಸಲಾಯಿತು ಹಾರ ಬದಲಾವಣೆ ಸಮಾರಂಭದ ಸಿದ್ಧತೆಗಳು ಪ್ರಾರಂಭವಾದವು. ಆದರೆ ಕಾರ್ ಕೊಡಲಿಲ್ಲವೆಂದು ವರ ಮದುವೆ ರದ್ದುಗೊಳಿಸಿ ಸ್ಥಳದಿಂದ ತೆರಳಿದ್ದ.
ಪೊಲೀಸರಿಗೆ ನೀಡಿರುವ ಲಿಖಿತ ದೂರಿನಲ್ಲಿ ವಿಶಾಲ್ ಮತ್ತು ಅವರ ತಂದೆ ಸುರೇಂದ್ರ ಜೈಸ್ವಾಲ್ ಅವರ ಬೇಡಿಕೆಯ ಮೇರೆಗೆ ಬ್ಯಾಂಕ್ ಮೂಲಕ 6.5 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿರುವುದಾಗಿ ಅಜಯ್ ಜೈಸ್ವಾಲ್ ತಿಳಿಸಿದ್ದಾರೆ. ಅವರು ವರನ ಕುಟುಂಬಕ್ಕೆ 12 ಲಕ್ಷ ರೂಪಾಯಿ ನಗದು, ಚಿನ್ನದ ಸರ ಮತ್ತು ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ವರನ ಮನೆಯವರು ಕೊಟ್ಟ ಹಣವನ್ನೂ ಹಿಂದಿರುಗಿಸುತ್ತಿಲ್ಲ , ಮದುವೆಗೂ ಒಪ್ಪುತ್ತಿಲ್ಲ ಎಂದಿದ್ದಾರೆ.