newsics.com
ಬೆಂಗಳೂರು : ನಟಿ ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯನನ್ನೇ ಮದುವೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಇವರ ಹೆಸರು ಆಂಟೊನಿ ತಟ್ಟಿಲ್. ಇಬ್ಬರು ಕ್ಲಾಸ್ಮೇಟ್ಸ್ ಮತ್ತು 14 ವರ್ಷಗಳ ಗೆಳೆತನ. ಒಟ್ಟಿಗೆ ಹೈಸ್ಕೂಲ್ನಲ್ಲಿ ಓದಿದ್ರು. ಇದು ಹಲವು ವರ್ಷಗಳ ಪ್ರೀತಿ ಎಂದು ಹೇಳಲಾಗುತ್ತಿದೆ.
ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಿದ್ದಾರೆ. ಜೋಡಿ ಡಿಸೆಂಬರ್ 11-12ನೇ ತಾರೀಕು ಗೋವಾದಲ್ಲಿ ಮದುವೆ ಆಗುತ್ತಿದೆ. ಇಬ್ಬರ ಮದುವೆಗೆ ಕುಟುಂಬಸ್ಥರು ಮತ್ತು ಆತ್ಮೀಯರು ಸಾಕ್ಷಿ ಆಗಲಿದ್ದಾರೆ.
ಆಂಟೊನಿ ತಟ್ಟಿಲ್ ಮೂಲತಃ ಕೇರಳದ ಕೊಚ್ಚಿಯವರು. ದುಬೈನಲ್ಲಿ ಇವರದ್ದು ಹಲವು ಬ್ಯುಸಿನೆಸ್ ಇದೆ. ಹುಟ್ಟಿದ್ದು ಕೇರಳದಲ್ಲಾದ್ರೂ ಬೆಳೆದಿದ್ದು ಮಾತ್ರ ಚೆನ್ನೈನಲ್ಲೇ. ಈಗ ಆಂಟೊನಿ ತಟ್ಟಿಲ್ ನೆಲೆಸಿರುವುದು ದುಬೈನಲ್ಲಿ ಎನ್ನುವ ಮಾಹಿತಿ ಇದೆ.