newsics.com
ಹೈದ್ರಾಬಾದ್ : ನಟಿ ಸಮಂತಾ ಚಿಕ್ಕವಳಿದ್ದಾಗ ಒಂದು ಕೆಟ್ಟ ಕೆಲಸ ಮಾಡಿದ್ದರಂತೆ. ಮಧ್ಯರಾತ್ರಿ ಪಾರ್ಟಿಗೆ ಹೋಗೋಕೆ ಅಡ್ಡ ಬಂದ ಅಜ್ಜಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಿ ಫ್ರೆಂಡ್ಸ್ ಜೊತೆ ಪಾರ್ಟಿಗೆ ಹೋಗಿದ್ದರಂತೆ.
ಸಮಂತಾ ಸಂದರ್ಶನದಲ್ಲಿ ಮಾತನಾಡಿ, ಒಂದು ದಿನ ರಾತ್ರಿ ಪಬ್‌ಗೆ ಹೋಗಿ ಎಂಜಾಯ್ ಮಾಡಬೇಕು ಅಂತ ಪ್ಲಾನ್ ಮಾಡಿದ್ರಂತೆ. ಒಬ್ಬಳು ಫ್ರೆಂಡ್ ಆಗಲೇ ಪಬ್‌ಗೆ ಹೋಗಿ ಬಂದು ಬಿಲ್ಡಪ್ ಕೊಡ್ತಿದ್ಲು. ಸಮಂತಾ ಮತ್ತು ಫ್ರೆಂಡ್ಸ್‌ಗೂ ಪಬ್‌ಗೆ ಹೋಗಬೇಕು ಅನಿಸ್ತು. ಆಗ ಒಬ್ಬಾಕೆ ಫ್ರೆಂಡ್‌ನ ಮನೆಗೆ ಹೋದ್ರು. ಅಲ್ಲಿಂದ ರಾತ್ರಿ ಪಾರ್ಟಿಗೆ ಹೋಗೋ ಪ್ಲಾನ್. ಫ್ರೆಂಡ್‌ನ ಪೇರೆಂಟ್ಸ್ ಊರಿಗೆ ಹೋಗಿದ್ರು. ಆದ್ರೆ ಅಜ್ಜಿ ಮಾತ್ರ ಮನೆಯಲ್ಲಿದ್ದರು.
ಅಜ್ಜಿ ನಿದ್ದೆ ಮಾಡಿದ ಮೇಲೆ ಸೈಲೆಂಟ್ ಆಗಿ ಹೊರಟು ಹೋಗೋ ಪ್ಲಾನ್. ಆದ್ರೆ ಅಜ್ಜಿ ನಿದ್ದೆ ಮಾಡ್ತಿರಲಿಲ್ಲ. ಹೊತ್ತು ಹೋಗ್ತಾ ಇತ್ತು. ಕೊನೆಗೆ ಸಮಂತಾ ಫ್ರೆಂಡ್ಸ್ ಅಜ್ಜಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಮಿಕ್ಸ್ ಮಾಡಿ ಕೊಟ್ಟರಂತೆ. ಸ್ವಲ್ಪ ಹೊತ್ತಿನಲ್ಲಿ ಅಜ್ಜಿ ನಿದ್ದೆ ಮಾಡಿದ್ರು. ಆಗ ಸೈಲೆಂಟ್ ಆಗಿ ಪಾರ್ಟಿಗೆ ಹೋದ್ರಂತೆ. ಆ ದಿನ ತುಂಬಾ ಎಂಜಾಯ್ ಮಾಡಿದ್ವಿ ಅಂತ ಸಮಂತಾ ಹೇಳಿದ್ದಾರೆ. ಅಜ್ಜಿಗೆ ಏನೂ ಆಗಿಲ್ಲ ಅಂತ ಖುಷಿ ಪಟ್ಟೆವು ಅಂತಲೂ ಹೇಳಿದ್ದಾರೆ. ಆದ್ರೆ ನಮ್ಮ ಜೀವನದಲ್ಲಿ ಮಾಡಿದ ಕೆಟ್ಟ ಕೆಲಸ ಅದು ಅಂತ, ಅದನ್ನ ನೆನಪಿಸಿಕೊಂಡ್ರೆ ಬೇಜಾರಾಗುತ್ತೆ ಅಂತ ಸಮಂತಾ ಹೇಳಿದ್ದಾರೆ.