newsics.com
ಉತ್ತರಾಖಂಡ್: ಕಳೆದ ನವೆಂಬರ್ 12ರಂದು ಮಧ್ಯರಾತ್ರಿ ಸ್ನೇಹಿತರೆಲ್ಲರೂ ಸೇರಿಕೊಂಡು ಸಖತ್ ಪಾರ್ಟಿ ಮಾಡಿದ್ದಾರೆ. ಆ ಪಾರ್ಟಿಯಲ್ಲಿ ವಿಪರಿತ ಕುಡಿದು ವಾಹನ ಚಲಿಸಿ ಪ್ರಾಣ ಬಿಟ್ಟಿದ್ದಾರೆ.
ಡೆಹ್ರಾಡೂನ್‌ನಲ್ಲಿ ಓವರ್ ಸ್ಪೀಡ್‌ನಲ್ಲಿ ಬರುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿಯಾಗಿದ್ದು, 6 ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 1.30ರ ಸುಮಾರಿಗೆ ಟ್ರಕ್‌ಗೆ, 100 ಕಿ.ಮೀ ಸ್ಪೀಡ್ನಲ್ಲಿ ಬಂದ ಟೊಯೋಟಾ ಇನ್ನೋವಾ ಗುದ್ದಿದೆ. ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ, ಕಾರು, ಟ್ರಕ್‌ಗೆ ಗುದ್ದಿದ ರಭಸಕ್ಕೆ ಕಾರಿನ ರೂಫ್ ಟಾಪ್ ಕಿತ್ತುಕೊಂಡು ಆಕಾಶದೆತ್ತರಕ್ಕೆ ಹಾರಿ ಹೋಗಿದೆ. ಕಾರು ನುಜ್ಜುಗುಜ್ಜಾಗುವ ಜೊತೆಗೆ ಕಾರಿನಲ್ಲಿದ್ದವರ ದೇಹ ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬೆಲ್ಲಾ ಬಿದ್ದಿದೆ.
ಮೃತಪಟ್ಟವರನ್ನ ಹಿಮಾಚಲ ಪ್ರದೇಶದ 23 ವರ್ಷದ ಕುನಾಲ್ ಕುಕ್ರೇಜಾ ಎಂದು ಗುರುತಿಸಲಾಗಿದೆ. ಉಳಿದವರು ಡೆಹ್ರಾಡೂನ್ ಮೂಲದ ಅತುಲ್ ಅಗರವಾಲ್ (24), ರಿಷಭ್ ಜೈನ್ (24), ನವ್ಯಾ ಗೋಯೆಲ್ (23) ಕಾಮಾಕ್ಷಿ (20) ಮತ್ತು ಗುನೀತ್ (19) ಎಂದು ಗುರುತಿಸಲಾಗಿದೆ. 25 ವರ್ಷದ ಸಿದ್ದೇಶ್ ಅಗರ್ವಾಲ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.
ಇನ್ನೋವಾ ಕಾರಿನಲ್ಲಿದ್ದ ಸ್ನೇಹಿತರು ಮತ್ತೊಂದು BMW ಕಾರಿನ ಜೊತೆ ರೇಸ್ ಹೋಗಿದ್ದರಂತೆ. ಈ ವೇಳೆ ಇನ್ನೋವಾ ಹಾಗೂ BMW ರೇಸ್‌ನಿಂದಾಗಿ ಈ ಭೀಕರ ಅಪಘಾತ ನಡೆದಿದೆ ಎನ್ನಲಾಗಿದೆ.