newsics.com
ವಾಷಿಂಗ್ಟನ್: ಅಮೆರಿಕದ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥ ಸ್ಥಾನಕ್ಕೆ ತುಳಸಿ ಗಬಾರ್ಡ್ ಅವರನ್ನು ನೇಮಕ ಮಾಡಲಾಗಿದೆ. .
ಹೌದು, ಅಮೆರಿಕಾ ಗುಪ್ತಚರ ಇಲಾಖೆಯ ನಿರ್ದೇಶಕರನ್ನಾಗಿ, ಭಾರತೀಯ ಮೂಲದ ತುಳಸಿ ಗಬಾರ್ಡ್ ಅವರನ್ನು ಆಯ್ಕೆ ಮಾಡಲಾಗಿದೆ. ತುಳಸಿ ಗಬಾರ್ಡ್ ಅವರನ್ನು ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಹಾಗೂ ಮಾರ್ಕೆ ರುಬಿಯೊ ಅವರನ್ನು ಯುಎಸ್ ರಾಜ್ಯ ಕಾರ್ಯ ದರ್ಶಿ ಸ್ಥಾನಕ್ಕೆ ನೇಮಿಸಲಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ. ‘ದೇಶ ಹಾಗೂ ಅಮೆರಿಕನ್ನರ ಸ್ವಾತಂತ್ರ್ಯಕ್ಕಾಗಿ ಎರಡು ದಶಕಕ್ಕೂ ಅಧಿಕ ಕಾಲದಿಂದ ತುಳಸಿ ಹೋರಾಡಿದ್ದು, ಡೆಮಾ ಕ್ರಟಿಕ್ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಮಾಜಿ ಅಭ್ಯರ್ಥಿ ಆಗಿದ್ದ ಅವರು ಎರಡೂ ಪಕ್ಷಗಳ ಬೆಂಬಲ ಹೊಂದಿರುತ್ತಾರೆ. ಅವ ರೀಗ ಹೆಮ್ಮೆಯ ರಿಪಬ್ಲಿಕನ್’ ಎಂದು ಟ್ರಂಪ್ ಹೇಳಿದ್ದಾರೆ. ತುಳಸಿ 18 ಬೇಹುಗಾರಿಕಾ ಸಂಸ್ಥೆಗಳ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ.
ವಿದೇಶಿ ಸಂಬಂಧ ಹಾಗೂ ಗುಪ್ತಚರ ಸಮಿತಿಗಳ ಹಿರಿಯ ಸದಸ್ಯ, ರಿಪಬ್ಲಿಕನ್ ಸೆನೆಟರ್ ಮಾರ್ಕೆ ರುಬಿಯೊ ಹೆಸರನ್ನು ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಅಂತಿಮಗೊಳಿಸಿದ ಟ್ರಂಪ್, ‘ಅವರು ನಮ್ಮ ರಾಷ್ಟ್ರದ ಪ್ರಬಲ ಪ್ರತಿಪಾದಕ, ಮಿತ್ರರಾಷ್ಟ್ರಗಳಿಗೆ ನಿಜವಾದ ಸ್ನೇಹಿತ ಹಾಗೂ ವಿರೋಧಿಗಳಿಗೆ ಎಂದಿಗೂ ಹಿಂದೆ ಸರಿಯದ ಯೋಧ’ ಎಂದು ಬಣ್ಣಿಸಿದ್ದಾರೆ. ಅದಾಗ್ಯೂ ಮಾರ್ಕೆ ಅವರ ವಿದೇಶಾಂಗ ನೀತಿಯ ದೃಷ್ಟಿಕೋನಗಳಿಗೆ ಸಂಬಂಧಿಸಿದಂತೆ ಈ ಸ್ಥಾನಕ್ಕೆ ಅವರನ್ನು ಆರಿಸಿಕೊಂಡ ಬಗ್ಗೆ ಕೆಲವು ರಿಪಬ್ಲಿಕನ್ ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ ಎಂದೂ ಹೇಳಲಾಗುತ್ತಿದೆ.
ತುಳಸಿ, ಡೆಮೊಕ್ರಾಟಿಕ್ ಕಾಂಗ್ರೆಸ್ ನಾಯಕಿಯಾಗಿದ್ದವರು. ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರಲ್ಲಿ ಒಬ್ಬರಾದ ತುಳಸಿ, ಮಿಲಿಟರಿಯಲ್ಲಿ ಲೆ.ಕೊಲೊನೆಲ್ ಆಗಿದ್ದವರು ಮತ್ತು ಇರಾಕ್ ಜೊತೆಗಿನ ಘರ್ಷಣೆಯ ವೇಳೆ ಆಯಕಟ್ಟಿನ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.