newsics.com
ಬೆಂಗಳೂರು: ಫುಡ್ ಡೆಲಿವರಿ ಬಾಯ್‌ನನ್ನು ಲಿಫ್ಟ್ ಒಳಗಡೆ ಬಿಡದೆ ಮಂತ್ರಿ ಮಾಲ್ ಸಿಬ್ಬಂದಿ ಅವಮಾನಿಸಿದ್ದಾನೆ. ಈ ಹಿಂದೆ ಪಂಚೆ ತೊಟ್ಟ ರೈತನಿಗೆ ಮಾಲ್ ಒಳಗಡೆ ಬಿಡದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.
ಇದೀಗ ಮಂತ್ರಿ ಮಾಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಂದು ಪಂಚೆ ತೊಟ್ಟು ಬಂದ ರೈತನಿಗೆ, ಇಂದು ಡೆಲಿವರಿ ಹುಡುಗರಿಗೆ ಅಪಮಾನ ಎಂದು ಜನ ಕೆಂಡಕಾರುತ್ತಿದ್ದಾರೆ.
ಡೆಲಿವರಿ ಹುಡುಗರು ಲಿಫ್ಟ್ ಒಳಗೆ ಬಂದ್ರೆ ನಿಮ್ಮ ಮಾಲ್‌ನ ಘನತೆ ಹಾಳಾಗುತ್ತದೆಯೇ ಎಂದು ಮಂತ್ರಿಮಾಲ್ ವಿರುದ್ದ ನೆಟ್ಟಿಗರು ಅಭಿಯಾನ ಶುರು ಮಾಡಿದ್ದಾರೆ. ಈ ಹಿಂದೆ ಮಾಲ್ ಸಿಬ್ಬಂದಿ ರೈತನಿಗೆ ಅವಮಾನ ಮಾಡಿದ ವಿಚಾರ ವಿಧಾನಸೌಧದಲ್ಲೂ ಸದ್ದು ಮಾಡಿತ್ತು. ಆ ಮಾಲ್ ವಿರುದ್ಧ ಕ್ರಮ ಕೂಡ ತೆಗೆದುಕೊಳ್ಳಲಾಗಿತ್ತು. ಆದರೂ ಮಾಲ್‌ಗಳು ಎಚ್ಚೆತ್ತುಕೊಳ್ಳದೇ ತಮ್ಮ ದುರಹಂಕಾರವನ್ನು ಮುಂದುವರೆಸಿದ್ದಾರೆ.